ಉಪಯುಕ್ತ ಮಾಹಿತಿ

ಕಾರಿನ ಕೀ ಕಳೆದುಹೋಯಿತಾ..? ಹಾಗಾದ್ರೆ ಇಲ್ಲಿದೆ ಡೋರ್ ಲಾಕ್ ಓಪನ್ ಮಾಡುಲು ಸುಲುಭವಾದ ಟಿಪ್ಸ್ ಗಳು ..!ತಿಳಿಯಲು ಇದನ್ನು ಓದಿ ..

By admin

November 29, 2017

ನಿತ್ಯ ವಾಹನಗಳನ್ನು ಬಳಸುವವರು ಯಾರಾದರೂ ಅದರ ಕೀಗಳನ್ನು ಭದ್ರವಾಗಿ ಇಟ್ಟುಕೊಳ್ಳಬೇಕು. ಒಂದು ವೇಳೆ ಅವನ್ನು ಕಳೆದುಕೊಂಡರೆ ಕಷ್ಟಗಳು ತಪ್ಪಿದ್ದಲ್ಲ.. ಆಗ ಅನುಭವಿಸುವ ಕಿರಿಕಿರಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಇನ್ನು ಮುಖ್ಯವಾಗಿ ಕಾರಿನ ಮಾಲೀಕರು ಒಮ್ಮೊಮ್ಮೆ ಕಾರಿನಲ್ಲೇ ಕೀ ಮರೆತುಬಿಡುತ್ತಾರೆ.

ಒಮ್ಮೊಮ್ಮೆ ಕಾರು ಊಹಿಸದಂತೆ ಲಾಕ್ ಆದರೆ ಆ ಬಳಿಕ ಲಾಕ್ ತೆಗೆಯುವುದು ಕಷ್ಟ. ಹಾಗಿದ್ದರೆ ಅಂತಹ ಸಂದರ್ಭಗಳಲ್ಲಿ ಕಾರ್ ಲಾಕ್ ಹೇಗೆ ತೆಗೆಯಬಹುದು ಗೊತ್ತಾ..?

1.ಒಂದು ಟೆನ್ನಿಸ್ ಬಾಲ್ ತೆಗೆದುಕೊಂಡು ಅದಕ್ಕೆ ರಂಧ್ರ ಮಾಡಿ. ಆ ರಂಧ್ರವನ್ನು ಕಾರು ಕೀ ಹೋಲ್ ಮೇಲೆ ಇಡಿ. ಆ ಬಳಿಕ ಟೆನ್ನಿಸ್ ಬಾಲನು ಪುಷ್ ಮಾಡಿ. ಅದರಲ್ಲಿರುವ ಗಾಳಿ ಲಾಕನ್ನು ಓಪನ್ ಮಾಡುತ್ತದೆ.

2.ಚಿತ್ರದಲ್ಲಿ ತೋರಿಸಿದಂತೆ ಶೂ ಲೇಸ್‌ನಿಂದ ಒಂದು ಲೂಪನ್ನು ತಯಾರಿಸಿ ಅದನ್ನು ಕಾರಿನ ಒಳಗೆ ಕಳುಹಿಸಬೇಕು. ಆ ಬಳಿಕ ಲೂಪನ್ನು ಮೇಲಕ್ಕೆ ಎಳೆದರೆ ಡೋರ್ ಲಾಕ್ ಓಪನ್ ಆಗುತ್ತದೆ.

3.ಕೋಟ್‍ಗಳಿಗೆ ಹಾಕುವ ಹ್ಯಾಂಗರ್‌ನಿಂದಲೂ ಡೋರ್ ಲಾಕ್ ಓಪನ್ ಮಾಡಬಹುದು. ಮೇಲೆ ಎರಡನೇ ಟಿಪ್‌ನಲ್ಲಿ ಹೇಳಿದಂತೆ ಕೋಟ್ ಹ್ಯಾಂಗರನ್ನು ಬಾಗಿಸಿ ಕಾರಿನ ಒಳಗೆ ಕಳುಹಿಸಿ ಕಾರಿನ ಡೋರ್ ಲಾಕನ್ನು ತೆಗೆಯಬಹುದು. ಇದರಿಂದ ಕಾರ್ ಡೋರ್ ಅನ್‍ಲಾಕ್ ಆಗುತ್ತದೆ.

4.ರಾಡ್ ಅಥವಾ ಸ್ಕ್ರೂ ಡ್ರೈವರನ್ನು ಡೋರ್ ಒಳಗೆ ತಳ್ಳಿ ಸಹ ಲಾಕ್ ಓಪನ್ ಮಾಡಬಹುದು. ಆದರೆ ಈ ರೀತಿ ಮಾಡಿದರೆ ಕಾರಿನ ಡೋರ್ ಹೊರಗೆ, ಒಳಗೆ ಸ್ಕ್ರಾಚಸ್ ಆಗುವ ಸಾಧ್ಯತೆಗಳಿವೆ. ಆದಕಾರಣ ಈ ಟಿಪ್ ಪಾಲಿಸುವ ಮೊದಲು ಒಮ್ಮೆ ಆಲೋಚಿಸಿ.

5.ಸ್ಪಾಟುಲಾವನ್ನು ಕಾರ್ ಡೋರ್ ಒಳಗೆ ಕಳುಹಿಸಿ ಸಹ ಲೀವರನ್ನು ಮೇಲೆ ಎಳೆದು ಲಾಕ್ ಓಪನ್ ಮಾಡಬಹುದು.

6.ಮೇಲೆ ತಿಳಿಸಿದ ಮೆಥೆಡ್ಸ್ ಯಾವುದೂ ಕೆಲಸ ಮಾಡದಿದ್ದರೆ ಎಕ್ಸ್‌ಪರ್ಟನ್ನು ಕರೆಸುವುದು ಉತ್ತಮ.