ಕಾಫಿ, ಟೀಗೆ ಸಂಬಂದಿಸಿದಂತೆ ದಿನನಿತ್ಯ ಹಲವಾರು ಸುದ್ದಿಗಳು ಹರಿದಾಡುತ್ತಿರುತ್ತವೆ. ಕೆಲವರು ಕಾಫಿ,ಟೀ ಆರೊಗ್ಯಕ್ಕೆ ಒಳ್ಳೆಯದು ಎಂದರೆ ಇನ್ನು ಕೆಲವರು ಒಳ್ಳೆಯದಲ್ಲ ಎಂಬ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ಕಾಫಿ, ಟೀ ಮೇಲೆ ಆಗಾಗ ನಾನಾ ಬಗೆಯ ಸಂಶೋಧನೆಗಳೂ ನಡೆಯುತ್ತಿರುತ್ತವೆ.
ಮುಂಜಾನೆಯ ಒಂದು ಕಪ್ ಟೀ ಅಥವಾ ಕಾಫಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹಾಗೂ ದೈಹಿಕವಾಗಿ ಚಟುವಟಿಕೆಯಿಂದಿರಲು ಈ ಪಾನೀಯಗಳು ಸಹಾಯಮಾಡುತ್ತವೆ ಎಂಬಿತ್ಯಾದಿ ಸಂಶೋಧನಾವರದಿಗಳು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಪ್ರಕಟವಾಗುತ್ತಲೇ ಇರುತ್ತವೆ. ಆದರೆ ಈ ಬಾರಿ ಕಾಫಿ ಮೇಲೆ ನಡೆದ ಒಂದು ಸಂಶೋಧನೆ ವಿಶೇಷ ವೆನಿಸಿಕೊಳ್ಳುತ್ತದೆ.
ಏಕೆಂದರೆ ಅದು ಗ್ಲ್ಯಾಮರ‍್ಗೆ ಸಂಬಂಧಿಸಿದ್ದು….! ಹೌದು, ತೆಳ್ಳಗೆ, ಬೆಳ್ಳಗೆ ಗ್ಲ್ಯಾಮರಸ್ ಆಗಿ ಕಾಣಬೇಕು ಅಂತಾ ಯಾರಿಗೆ ತಾನೆ ಆಸೆ ಇರಲ್ಲಾ ಹೇಳಿ.. ಈ ಗ್ಲ್ಯಾಮರಸ್ ಲುಕ್ ಒಂದು ಕಪ್ ಕಾಫಿಯಿಂದ ಬಂದರೆ ಮೇಕಪ್ ಪ್ರಿಯರಿಗೆ ಇದಕ್ಕಿಂತ ಖುಷಿ ಸುದ್ದಿ ಇನ್ನೇನಿದೆ ಹೇಳಿ ಇತ್ತೀಚಿನ ಸಂಶೋಧನೆಗಳಲ್ಲಿ ಕಾಫಿಯಲ್ಲಿ ಸೌಂದರ್ಯವರ್ಧಕ ಅಂಶಗಳಿರುವುದು ಬೆಳಕಿಗೆ ಬಂದಿದೆ.
ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ ಕಾಫಿ ಸೇವಿಸುವುದರಿಂದ ಚರ್ಮಕ್ಕೂ ಸಾಕಷ್ಟು ಲಾಭಗಳು ಆಗುತ್ತವೆ ಎಂಬುದು ದೃಢಪಟ್ಟಿರುವುದು ಕಾಫಿ ಪ್ರಿಯರಲ್ಲಿ ಖುಷಿಯನ್ನುಉಂಟು ಮಾಡಿದೆ. ಕಾಫಿ ಈಗಾಗಲೇ ಅದ್ಭುತ ಪಾನಿಯ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದ್ದು, ಇದರ ಮುಂದುವರಿದ ಭಾಗವಾಗಿ ಚರ್ಮದ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಸುತ್ತದೆ.
ಕಾಫಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ವಾತಾವರಣದ ಬದಲಾವಣೆ ಮತ್ತು ಪರಿಸರದ ಮಾಲಿನ್ಯದಿಂದ ಚರ್ಮದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವಂತಹ ಶಕ್ತಿ ಕಾಫಿಗಿದೆ ಎಂದು ಹೇಳಲಾಗಿದೆ. ಸೂರ್ಯನ ಕಿರಣಗಳಿಂದಾಗುವ ಚರ್ಮದ ತೊಂದರೆಗಳನ್ನು ತಡೆಗಟ್ಟುವ ಶಕ್ತಿ ಇದಕ್ಕಿದೆ. ಚರ್ಮವನ್ನು ಮೃದು ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.
ಕಾಫಿ ಸೇವನೆಯಿಂದ ರಕ್ತ ಚಲನೆ ಸರಾಗವಾಗಿ ಆಗುವುದರಿಂದ ಚರ್ಮ ಕೊಶಗಳು ಹೆಚ್ಚು ಕ್ರಿಯಾಶೀಲವಾಗುತ್ತದೆ. ಇದರ ಪರಿಣಾಮ ಚರ್ಮದ ರಕ್ಷಣೆಗೆ ಗ್ಲ್ಯಾಮರ‍್ಗೆ ಕಾರಣವಾಗುತ್ತದೆ. ಕಾಫಿ ಮೇಲೆ ನಡೆದ ಈ ಸಂಶೊಧನೆ ವರದಿ ಕಾಫಿ ಪ್ರಿಯಗರಿಗಷ್ಟೆ ಅಲ್ಲ ಈಗ ಗ್ಲ್ಯಾಮರ‍್ಪ್ರೀಯರಿಗೂ ಖುಷಿಯನ್ನು ಹೊತ್ತು ತಂದಿದೆ.