ಸಾಮಾನ್ಯವಾಗಿ ಕಷ್ಟ ಬಂದರೆ ಕಣ್ಣೀರಿಡುತ್ತೇವೆ. ಇಲ್ಲದಿದ್ದರೆ ಬಿಕ್ಕಿ ಬಿಕ್ಕಿ ಅಳುತ್ತೇವೆ. ಅದರಲ್ಲೂ ಮಹಿಳೆಯರು, ಹುಡುಗಿಯರೂ ಆಕಾಶದಿಂದ ಮಳೆ ಸುರಿಸುತ್ತಿದೆಯೇನೋ ಅನಿಸುವಂತೆ ಕಣ್ಣೀರಿಡುತ್ತಾರೆ. ಹುಡುಗರು ಮಾತ್ರ ಎಷ್ಟೇ ಕಷ್ಟ ಬಂದರೂ ಅಳುವುದಿಲ್ಲ ಯಾಕೆ ಗೊತ್ತಾ..?
ಅವರಿಗೂ ಕಷ್ಟ ದುಃಖಗಳು ಬರುತ್ತವೆ ,ಆದರೂ ಅವರ ಕಣ್ಣಲ್ಲಿ ಒಂದು ಹನಿಯೂ ಬರುವುದಿಲ್ಲ ಯಾಕೆ.? ಅವರು ಅಷ್ಟು ದೈರ್ಯವಾಗಿ ಹೇಗೆ ಇರಬಲ್ಲರು? ಹುಡುಗರಲ್ಲಿ ಕೆಲವರು ಮಾತ್ರ ದುಃಖ ಅನುಭವಿಸುತ್ತಾರೆ. ಹುಡುಗರಿಗೂ ಹುಡುಗಿಯರಿಗೂ ಇರುವ ವ್ಯತ್ಯಾಸವೇನು? ಎಂಬ ಇಂತಹ ಪ್ರಶ್ನೆಗಳಿಗೆ ಕಾರಣಗಳನ್ನು ಕಂಡುಹಿಡಿದಿದ್ದಾರೆ.
ಸ್ವಿಟ್ಜರ್ ಲ್ಯಾಂಡ್ ನಲ್ಲಿನ ಬೆಸೇಲ್ ವಿಶ್ವವಿದ್ಯಾಲಯದ ಅಧ್ಯಾಪಕರು, ಸಂಶೋಧಕರು ಆದ ನೋರಾ ಮರಿಯಾ ರಸೆಲ್ ಮತ್ತು ತಂಡದವರು ಹುಡುಗರು ಮತ್ತು ಹುಡುಗಿಯರ ಭಾವನೆಗಳು ಹತೋಟಿಯಲ್ಲಿರುವ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ಆಸಕ್ತಿದಾಯಕ ವಿಷಯಗಳು ಬೆಳಕಿಗೆ ಬಂದಿದ್ದು.
ಇವರಿಬ್ಬರಲ್ಲಿ ಮೆದುಳಿನ ಆಕಾರ ಭಿನ್ನವಾಗಿರುತ್ತದೆ ಎಂದು ಗುರುತಿಸಿದ್ದಾರೆ. ಹುಡುಗರ ಮೆದುಳಿನಲ್ಲಿ ಭಾವೋದ್ರೇಕಗಳನ್ನು ಹತೋಟಿಯಲ್ಲಿಡುವ ಶಕ್ತಿಯು ಶೇ.10 ರಷ್ಟು ಹೆಚ್ಚಾಗಿರುವುದರಿಂದ ಅವರಲ್ಲಿ ಅಳುವನ್ನು ನಿಯಂತ್ರಿಸಿಕೊಳ್ಳುವ ಸಾಮಥ್ರ್ಯವು ಹೆಚ್ಚಾಗಿರುವುದರಿಂದ ಅವರು ದುಃಖ ಪಡುವುದಿಲ್ಲ ಹಾಗೂ ಅಳುವುದಿಲ್ಲ ಎಂದು ಹೇಳುತ್ತಾರೆ. 189 ಕ್ಕೂ ಹೆಚ್ಚು ಮಂದಿ ಈ ಸಂಶೋಧನೆಯನ್ನು ನಡೆಸಿ ರಿಸಲ್ಟ್ ನೀಡಿದ್ದಾರೆ.