ಹೌದು ಸರ್ಕಾರದಿಂದ ಕಲ್ಲಡ್ಕ ಶಾಲೆಗೆ ಸಿಗುತಿದ್ದ ಅನುದಾನ ನಿಲ್ಲಿಸಿದ್ದು ಎಲ್ಲರಿಗೂ ತಿಳಿದೇ ಇದೆ.. ಹೀಗಿರುವಾಗ ಹಲವಾರು ಮಂದಿ ಶಾಲೆಯ ನೆರವಿಗೆ ಬಂದರು..
ಅದೇ ರೀತಿಯಾಗಿ ಸುನಿತಾ ಮಂಜುನಾಥ್ ರವರು ಕೂಡ ತಮ್ಮ ಚನ್ನಕೇಶವ ಶಿಕ್ಷಣ ಟ್ರಸ್ಟ್ ಮೂಲಕ ಶಾಲೆಗೆ ಅಹಾರ ಧಾನ್ಯ ಪೂರೈಸುತ್ತಿದ್ದಾರೆ..
ಇದೇ ಗುರುವಾರ ಅಕ್ಟೋಬರ್ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ , ಕಲ್ಲಡ್ಕದಲ್ಲಿ ,ಶ್ರೀ ಡಾಕ್ಟರ್ ಕಲ್ಲಡ್ಕ ಪ್ರಭಾಕರ ಭಟ್ಟರವರು ನಡೆಸುತ್ತಿರುವ “ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ” ನೂತನ ಶಿಶುಮಂದಿರವನ್ನು ಲೋಕಾರ್ಪಣೆ ಮಾಡುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಸುನಿತಾ ಮಂಜುನಾಥ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ದೇಶ ಸೇವೆಗೆ ಕಂಕಣ ಬದ್ದರಾಗಿ ನಿಲ್ಲಲು ನಾನೆಂದೂ ಸಿದ್ಧ ಎಂದು ಹೇಳಿದ್ದಾರೆ..
ಇದೇ ಸಂಧರ್ಭದಲ್ಲಿ ಶಾಲೆಗೆ ತಮ್ಮ ಚನ್ನಕೇಶವ ಶಿಕ್ಷಣ ಟ್ರಸ್ಟ್ ಕಡೆಯಿಂದ ಆಹಾರ ಧಾನ್ಯ ಒದಗಿಸಿ.. ಇದು ನನ್ನ ಅಳಿಲು ಸೇವೆ ಅಷ್ಟೇ ಎಂದು, ಶಾಲೆಯ ಅನ್ನ ಕಿತ್ತುಕೊಂಡ ಕರ್ನಾಟಕ ಸರ್ಕಾರದ ವಿರುದ್ಧ ಗುಡುಗಿದ್ದಾರೆ..
ಸ್ವಾಭಿಮಾನಿ ಮಕ್ಕಳು ತಾವೇ ಭತ್ತ ಬೆಳೆಯುತ್ತಿರುವುದ ಕಂಡು ಭಾವುಕರಾದ ಸುನಿತಾ ಮಂಜುನಾಥ್ ಮಕ್ಕಳು ದೇವರ ಸಮಾನ ಈ ದೇವರುಗಳ ಸೇವೆಗೆ ನಾನೆಂದು ಸಿದ್ಧವುರುವುದಾಗಿ ತಿಳಿಸಿ.. ಅಲ್ಲೇ ನಡೆಯುತ್ತಿದ್ದ ಗೋ ಪೂಜೆಯಲ್ಲಿ ಭಾಗವಹಿಸಿ..ನನ್ನ ಜೀವನದಲ್ಲಿ ಸಾರ್ಥಕ ಭಾವ ಮೂಡಿಸಿದ ಕಾರ್ಯಕ್ರಮಗಳಲ್ಲಿ ಇದೂ ಕೂಡ ಒಂದು ಎಂದು ಧನ್ಯವಾದವನ್ನು ತಿಳಿಸಿದ್ದಾರೆ..
*ಈಗಿನ ಕಾಲದಲ್ಲಿ ಹೆತ್ತವರ ಸೇವೆಯನ್ನೇ ಮಾಡದ ಎಷ್ಟೋ ಮಕ್ಕಳ ನಡುವೆ ಸಂಸಾರದ ಜೊತೆಗೆ ದೇಶ ಸೇವೆಗೆ ಸಿದ್ಧರಾಗಿ ನಿಂತಿರುವ “ಸುನಿತಾ ಮಂಜುನಾಥ್” ವಿಶೇಷವೇ ಸರಿ.. ಶುಭವಾಗಲಿ ನಿಮಗೆ.. ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ..