ದೇವರು-ಧರ್ಮ

ಕಲಿಯುಗ ಅಂತ್ಯವಾಗುತ್ತಿದೆ ಎಂಬುದು ನಮಗೆ ತಿಳಿಯುವುದಾದರೂ ಹೇಗೆ..?ವೇದಗಳು ಹೇಳಿರುವ ಈ ಸಂಕೇತಗಳು ನಡೆಯುತ್ತಿವೆ ಅಲ್ಲವೇ?ತಿಳಿಯಲು ಮುಂದೆ ಓದಿ…

By admin

December 06, 2017

ನಮ್ಮ ಹಿಂದೂ ಧರ್ಮದಲ್ಲಿ ಪುರಾಣಗಳ ಪ್ರಕಾರ ನಾಲ್ಕು ಯುಗಗಳಿದ್ದು, ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳೆಂದು ಕರೆಯುತ್ತಾರೆ.ಪುರಾಣಗಳ ಪ್ರಕಾರ ನಾಲ್ಕು ಯುಗಗಳಲ್ಲಿ ಕಲಿಯುಗವೇ ಅತ್ಯಂತ ಕರಾಳವಾಗಿದ್ದು ಕತ್ತಲಿನಿಂದ ತುಂಬಿರುತ್ತದೆ. ಸಮಯ ಕಳೆದಂತೆ ಕಲಿಯುಗದಲ್ಲಿಯೂ ಹಲವಾರು ಬದಲಾವಣೆಗಳಾಗುತ್ತಾ ಬರುತ್ತದೆ. ಆಧ್ಯಾತ್ಮಿಕತೆಯತ್ತ ಜನರ ಒಲವು ಕಡಿಮೆಯಾಗುತ್ತಾ ಹೋಗುತ್ತದೆ.

ಕಲಿಯುಗದ ಅಂತ್ಯದಲ್ಲಿ ಜನರು ದೇವರನ್ನು  ಮರೆಯುತ್ತಾರೆ ಹಾಗೂ ಕಲಿಯುಗದಲ್ಲಿ ಮನುಷ್ಯರು ಉನ್ನತ ಸ್ಥಾನಕ್ಕೆ ಸೇರಿಕೊಳ್ಳಲು ವಿಧವಿಧವಾಗಿ ಪ್ರಯತ್ನಿಸುತ್ತಾರೆಂದು, ಅಗತ್ಯ ಬಿದ್ದರೆ ಅಡ್ಡದಾರಿ ಸಹ ತುಳಿಯುತ್ತಾರೆ, ವಯಸ್ಸು, ಎತ್ತರ, ಬಲ, ಜ್ಞಾನ, ಆಕರ್ಷಣೆಯಂತಹವು ಬರುಬರುತ್ತಾ ಕಲಿಯುಗದಲ್ಲಿ ಕಡಿಮೆಯಾಗುತ್ತವೆ ಎಂದು ಪುರಾಣಗಳು ಹೇಳುತ್ತಿವೆ. ಅವೆಲ್ಲಾ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ.

 

ಪುರಾಣಗಳ ಪ್ರಕಾರ ವೇದಗಳು ಕಲಿಯುಗದ ಬಗ್ಗೆ ಹೇಳಿರುವ ಸತ್ಯಗಳು ಏನು ಗೊತ್ತಾ..?

 

ಹಾಗಾದ್ರೆ ಕಲಿಯುಗ ಅಂತ್ಯವಾಗುತ್ತಿದೆ ಎಂಬುದು ನಮಗೆ ತಿಳಿಯುವುದಾದರೂ ಹೇಗೆ..? ವೇದಗಳ ಪ್ರಕಾರ ಕಲಿಯುಗ ಅಂತ್ಯವಾಗುತ್ತಿದೆ ಎನ್ನುವುದಕ್ಕೆ ಕೆಲವು ಸಂಕೇತಗಳನ್ನು ಹೇಳಲಾಗಿದೆ…

1. ಕಲಿಯುಗ ಅಂತ್ಯವಾಗುತ್ತಿದೆ ಎಂದಾಗ ಹಸುಗಳು ಇರುವುದಿಲ್ಲ. ಸತ್ತು ಹೋಗುತ್ತವೆ.

 

2.ಯಾರಿಗೂ ಕರುಣೆ ಇರುವುದಿಲ್ಲ. ಒಬ್ಬರನ್ನೊಬ್ಬರು ಸಾಯಿಸಿಕೊಳ್ಳುವವರೆಗೂ ಬರುತ್ತದೆ.

3.ಮಹಿಳೆಯರು ತುಂಬಾ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ಎಲ್ಲಿ ನೋಡಿದರೂ ವ್ಯಭಿಚಾರ, ಹತ್ಯೆಗಳು ನಡೆಯುತ್ತವೆ.