ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕ ಜನತೆಗೆ ಟ್ವೀಟ್ ಮಾಡುವುದರ ಮೂಲಕ ಧನ್ಯವಾದ ತಿಳಿಸಿದ್ದಾರೆ.ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಕುರುಕ್ಷೇತ್ರ ಚಿತ್ರಕ್ಕೆ 50 ದಿನಗಳ ಸಂಭ್ರಮ. ಈಗಿನ ಕಾಲದಲ್ಲಿ ಪೌರಾಣಿಕ ಚಿತ್ರಗಳನ್ನು ಮಾಡಬೇಕೆಂದು ಪಣ ತೊಟ್ಟ ನಿರ್ಮಾಪಕರಿಗೆ ಅವರ ಆಸೆಗೆ ಬೆನ್ನೆಲುಬಾಗಿ ನಿಂತ ಇಡೀ ಚಿತ್ರತಂಡಕ್ಕೆ
ಕೊನೆಯದಾಗಿ ಪ್ರೀತಿಯಿಂದ ಚಿತ್ರಮಂದಿರಗಳತ್ತ ಧಾವಿಸಿ ಆಶೀರ್ವದಿಸಿದ ಅಭಿಮಾನಿಗಳು ಕರ್ನಾಟಕ ಜನತೆಗೆ ನನ್ನ ಹೃದಯಪೂರ್ವಕ ವಂದನೆಗಳು. ನಿಮ್ಮ ದಾಸ ದರ್ಶನ್” ಎಂದು ಟ್ವೀಟ್ ಮಾಡಿದ್ದಾರೆ.
ಕುರುಕ್ಷೇತ್ರ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ನಿಖಿಲ್ ಕುಮಾರಸ್ವಾಮಿ, ಭಾರತಿ ವಿಷ್ಣುವರ್ಧನ್, ಮೇಘನಾ ರಾಜ್, ಹರಿಪ್ರಿಯಾ ಸೇರಿದಂತೆ ನೂರಾರು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇತ್ತ ಸಾರಥಿ ಚಿತ್ರ ಬಿಡುಗಡೆಯಾಗಿ 8 ವರ್ಷಗಳಾಗಿದ್ದು, ಈ ಬಗ್ಗೆ ದರ್ಶನ್ ಅವರು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. “ಇಂದಿಗೆ ಕನ್ನಡದ ಅಪೂರ್ವ ಮೈಲಿಗಲ್ಲಿನ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ – ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ ಕಾಂಬಿನೇಶನ್‍ನ ಮೆಗಾ ಬ್ಲಾಕ್‍ಬಸ್ಟರ್ `ಸಾರಥಿ’ ಬಿಡುಗಡೆಯಾಗಿ ಸರಿಯಾಗಿ 8 ವರ್ಷಗಳು ತುಂಬಿವೆ. ಮತ್ತೆ ಈ ಸೂಪರ್ ಕಾಂಬಿನೇಶನ್ ಅನ್ನು ನೋಡಲು ಕಾತುರದಲ್ಲಿರುವ ಕನ್ನಡ ಜನತೆ” ಎಂದು ಟ್ವೀಟ್ ಮಾಡಿದೆ.