ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿಂದು ನಡೆದ ಈ ಜಲ ವರ್ಷದ ಅಂತಿಮ ಸಭೆಯಲ್ಲಿ ಕರ್ನಾಟಕಕ್ಕೆ ಆಘಾತಕಾರಿ ಸುದ್ದಿ ಬಂದಿದೆ. ತಮಿಳುನಾಡಿಗೆ ನಿಗದಿಯಂತೆ ಕಾವೇರಿ ನದಿ ನೀರು ಬಿಡುವಂತೆ ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೇನ್ ಆದೇಶಿಸಿದ್ದಾರೆ. ಈ ಮೂಲಕದ ತಮಿಳುನಾಡಿನ ಬೇಡಿಕೆಗೆ ಕಾವೇರಿ ನದಿ ಪ್ರಾಧಿಕಾರ ಮಣಿದಿದೆ. ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಲು ಆದೇಶಿಸಲಾಗಿದೆ.ಜೂನ್ ತಿಂಗಳ ಕೋಟಾ 9.25 ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ,
ಬಹುತೇಕ ಎಲ್ಲಾ ಜಲಾಶಯಗಳಲ್ಲಿ ಡೆಡ್ ಸ್ಟೋರೆಜ್ ಹಂತ ತಲುಪಿದ್ದು, ಕುಡಿಯಲು ನೀರು ಇಲ್ಲದ ಪರಿಸ್ಥಿತಿ ಎದುರಾಗಿದೆ.ಒಟ್ಟಾರೆ, ಕರ್ನಾಟಕದ ಕಾವೇರಿ ಜಲನಯನ ಪ್ರದೇಶದಲ್ಲಿ 3 ರಿಂದ 4 ಟಿಎಂಸಿ ಇರಬಹುದು, ಇದರಲ್ಲಿ ಮುಂದಿನ ಮಳೆಗಾಲದವರೆಗೂ ಕುಡಿಯುವ ನೀರಿನ ಪೂರೈಕೆಗೆ ಬಳಸಬೇಕಾಗುತ್ತದೆ. ಆದರೆ, ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವುದು ಅವೈಜ್ಞಾನಿಕ ಎಂದು ಕರ್ನಾಟಕದ ಪ್ರತಿನಿಧಿಗಳು ವಾದಿಸಿದ್ದಾರೆ.ಎರಡು ರಾಜ್ಯಗಳಲ್ಲಿ ಮಳೆ ಅಭಾವ ಎರಡು ರಾಜ್ಯಗಳಲ್ಲೂ ಮಳೆ ಅಭಾವ ಕಾಡುತ್ತಿದೆ. ಕರ್ನಾಟಕದಲ್ಲಿ ಈ ಬಾರಿ ಮುಂಗಾರುಮಳೆ ಪ್ರವೇಶ ವಿಳಂಬವಾಗಲಿದ್ದು, ಜೂನ್ 8ರ ನಂತರ ಮೊದಲ ಮಳೆ ಸಿಂಚನ ಸಾಧ್ಯತೆಯಿದೆ. ಕಳೆದ ವಾರದಿಂದ ದಕ್ಷಿಣ ಒಳನಾಡಿನಲ್ಲಿ ಸುರಿದ ಗಾಳಿ ಮಳೆಯಿಂದ ಹಾನಿ ಪ್ರಮಾಣವೇ ಅಧಿಕವಾಗಿದೆ ಎಂದು ಕರ್ನಾಟಕದ ಜಲ ಸಂಪನ್ಮೂಲ ಕಾರ್ಯದರ್ಶಿ ರಾಕೇಶ್ ಸಿಂಗ್ ವಾದಿಸಿದ್ದಾರೆ.
ನಮಗೆ ಕುಡಿಯುವ ನೀರಿಲ್ಲ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 81.37 ಅಡಿಗಳಷ್ಟು ನೀರಿದೆ. ಒಟ್ಟಾರೆ 11 ಟಿಎಂಸಿಯಷ್ಟು ನೀರು ಹೊಂದಿದ್ದು, ನಮಗೆ ಕುಡಿಯಲು ನೀರಿಲ್ಲ, ಮಳೆ ಶುರುವಾಗಿ, ನೀರು ಬಂದರೆ ಮಾತ್ರ ಆದೇಶ ಪಾಲಿಸಲು ಸಾಧ್ಯ, ಈ ಬಗ್ಗೆ ನೂತನ ಸಂಸದೆ ಸುಮಲತಾ ಅಂಬರೀಷ್ ಅವರು ಮೋದಿ ಅವರ ಜೊತೆ ಮಾತನಾಡಬೇಕಿದೆ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದ್ದಾರೆ.ಆದೇಶದಲ್ಲಿ ಏನಿದೆ ಷರತ್ತು? ಕಾವೇರಿ ಪ್ರಾಧಿಕಾರದ ಇಂದಿನ ಸಭೆಯಲ್ಲಿ ಕಾವೇರಿ ಕಣಿವೆ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಲಭ್ಯ ನೀರಿನ ಪ್ರಮಾಣ, ಮಳೆ ಮುನ್ಸೂಚನೆ, ಬರ ಪರಿಸ್ಥಿತಿ, ಜಲ ನಿರ್ವಹಣೆ, ನೀರು ಹಂಚಿಕೆ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಲಾಗಿದೆ. ಜಲಾಶಯಕ್ಕೆ ಒಳ ಹರಿವು ಅಧಿಕವಾದರೆ ತಮಿಳುನಾಡಿಗೆ ನಿಗದಿಯಂತೆ ನೀರು ಹರಿಸಬೇಕು ಎಂದು ಹೇಳಲಾಗಿದೆ. ತಕ್ಷಣವೇ ನೀರು ಬಿಡುವ ಒತ್ತಡ ಹೇರಿಲ್ಲದ ಕಾರಣ, ಸದ್ಯಕ್ಕೆ ರಾಜ್ಯಕ್ಕೆ ಆತಂಕವಿಲ್ಲಒಳ ಹರಿವು ಬರದೇ ಇದ್ದಲ್ಲಿ ಏನು ಗತಿ? ಒಳ ಹರಿವು ಬರದೇ ಇದ್ದಲ್ಲಿ ನೀರು ಹರಿಸುವ ಅಗತ್ಯವಿಲ್ಲ. ಕೆಆರ್ ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಒಟ್ಟು 14 ಟಿಎಂಸಿ ನೀರಿದ್ದು, ಬೆಂಗಳೂರಿಗೆ ಪ್ರತಿ ತಿಂಗಳಿಗೆ 4 ಟಿಎಂಸಿಯಷ್ಟು ಕುಡಿಯುವ ನೀರಿನ ಬೇಡಿಕೆ ಇದೆ. ಆದರೆ, ಈಗ ಲಭ್ಯ ನೀರಿನ ಪ್ರಮಾಣದಿಂದ ಕುಡಿಯುವ ನೀರಿನ ಪೂರೈಕೆ ಕಷ್ಟವಾಗುತ್ತಿದೆ.