ಈಗಂತೂ ಮನೆಯಲ್ಲಿ ಮಾಡಿದ ಅಡುಗೆಗಿಂತ ಹೊರಗಡೆ ಸಿಗುವ ಫಾಸ್ಟ್ ಫುಡ್, ಸ್ನಾಕ್ಸ್ ಗಳನ್ನು ತಿನ್ನುವುದೇ ಹೆಚ್ಚು.ಅದರಲ್ಲೂ ಹೊರಗಡೆ ಸಿಗುವ ಕಬಾಬ್, ಬಜ್ಜಿ, ಮಂಚೂರಿ, ಪುರಿ, ಬೋಂಡಾ ಹೆಸರು ಕೇಳ್ತಿದ್ರೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಈ ಸ್ಪೈಸಿ ತಿಂಡಿ ಮಾಡಿ ತಿನ್ನೋದು ಸ್ವಲ್ಪ ಕಷ್ಟ. ಹಾಗಾಗಿ ನಾವೆಲ್ಲ ಹೊಟೇಲ್ ಆಯ್ಕೆ ಮಾಡಿಕೊಳ್ತೇವೆ.
ಹೊಟೇಲ್ ಇರಲಿ, ಮನೆಯಿರಲಿ, ಒಮ್ಮೆ ಕರಿದ ಎಣ್ಣೆಯನ್ನು ಎತ್ತಿಟ್ಟು ಮತ್ತೊಮ್ಮೆ ಅಡುಗೆಗೆ ಬಳಸ್ತೇವೆ. ಮನೆಯಲ್ಲಿ ನಾಲ್ಕೈದು ಬಾರಿ ಬಳಸಿದ್ರೆ ಹೊಟೇಲ್ ನಲ್ಲಿ ಅದೆಷ್ಟು ಬಾರಿ ಒಂದೇ ಎಣ್ಣೆ ಬಳಕೆಯಾಗಿರುತ್ತೋ ದೇವರೆ ಬಲ್ಲ. ಆದರೆ ಈ ರೀತಿ ಕರಿದ ಎಣ್ಣೆಯನ್ನ ಪದೇ ಪದೇ ಉಪಯೋಗಿಸೋದ್ರಿಂದ ಆರೋಗ್ಯ ಹದಗೆಡುವುದ್ರಲ್ಲಿ ಎರಡು ಮಾತಿಲ್ಲ.
ಒಮ್ಮೆ ಎಣ್ಣೆಯನ್ನ ಬಳಸಿದ ನಂತರ ಅದೇ ಎಣ್ಣೆಯನ್ನ ಮತ್ತೆ ಮತ್ತೆ ಅಡುಗೆಗೆ ಬಳಸೋದ್ರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವುದರಿಂದ ಇದರಲ್ಲಿ ರೆಡಿಕ್ಲಸ್ ಎಂಬ ಅಂಶ ಉತ್ಪತ್ತಿಯಾಗತೊಡಗುತ್ತೆ. ಇದರಿಂದ ಎಣ್ಣೆಯಲ್ಲಿ ರೋ ಎಂಟಿ ಓಕ್ಸಿಡೆಂಟ್ ನ ಪ್ರಮಾಣ ಕಡಿಮೆಯಾಗುತ್ತೆ. ಇದರ ಪರಿಣಾಮ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಂಭವ ಹೆಚ್ಚಾಗಿರುತ್ತೆ.
ಕರಿದ ಎಣ್ಣೆಯನ್ನ ಪದೇ ಪದೇ ಉಪಯೋಗಿಸೋದ್ರಿಂದ ಹೃದಯ ಸಂಬಂಧಿ ಖಾಯಿಲೆಗಳು ಕಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಲು ಇದು ಕೂಡಾ ಒಂದು ಕಾರಣ.