ಈಗ ಹೆಚ್ಚಿನ ಯುವಕ, ಯುವತಿಯರು ಕಪ್ಪು ದಾರವನ್ನ ಕಟ್ಟಿಕೊಳ್ಳುತ್ತಾರೆ. ದೃಷ್ಟಿಯನ್ನ ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣದಿಂದ ಮಾತ್ರ ಸಾಧ್ಯ. ಕೆಟ್ಟ ಪ್ರಭಾವ ನಿಮ್ಮ ಮೇಲೆ ಬೀರಬಾರದು ಅಂದುಕೊಂಡರೆ ಕಪ್ಪು ದಾರವನ್ನ ಕಟ್ಟಿಕೊಳ್ಳಬೇಕು.
ಕಪ್ಪು ದಾರವನ್ನು ಕಟ್ಟಿಕೊಂಡರೆ ನಿಮ್ಮ ಮನಸ್ಸಿನ ಆಸೆಗಳು ಬೇಗನೇ ಈಡೇರುತ್ತದೆ. ಆದರೆ ಎಲ್ಲಿ..? ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನ ನೀವು ತಿಳಿದಿರಬೇಕು. ಪ್ರತಿ ಮನುಷ್ಯರ ದೇಹಕ್ಕೆ ಪಂಚಭೂತಗಳು ತುಂಬಾ ಅವಶ್ಯಕ. ಅಂತಹ ಪಂಚಭೂತಗಳು ನಮ್ಮ ದೇಹಕ್ಕೆ ತಲುಪದಂತೆ ಈ ಕೆಟ್ಟ ದೃಷ್ಟಿ ಮಾಡುತ್ತದೆ.
ಹೀಗೆ ಆಗಬಾರದು ಎಂದರೆ ಕಪ್ಪು ದಾರವನ್ನ ಕತ್ತಿನಲ್ಲಿ ಕಟ್ಟಬೇಕು. ಹೀಗೆ ಮಾಡಿದತೆ ಸಕಾರಾತ್ಮಕ ಶಕ್ತಿ ಸಿಗುತ್ತದೆ. ಇನ್ನು ಕಪ್ಪು ದಾರವನ್ನು ಸೊಂಟ, ಕೈಗೆ ಕಟ್ಟುವುದರಿಂದ್ದ ಆರೋಗ್ಯ ಚೆನ್ನಾಗಿರುತ್ತದೆ. ದೇಹದ ಸಮತೋಲನ ಚೆನ್ನಾಗಿರುತ್ತದೆ. ಇಷ್ಟೇ ಅಲ್ಲದೇ ಕಪ್ಪು ದಾರಕ್ಕೆ ಬಿಪಿ ನಿಯಂತ್ರಿಸುವ ಶಕ್ತಿ ಇದೆ. ಅಲ್ದೇ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ಒಂದು ಕಪ್ಪು ದಾರವನ್ನ ಖರೀದಿಸಿ. ಅದಕ್ಕೆ ಒಂಬತ್ತು ಗಂಟು ಬಿಗಿದು ಮಂಗಳವಾರ ಅಥವಾ ಶನಿವಾರ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ಕುಂಕುಮ ಹಚ್ಚಬೇಕು. ನಂತರ ಅದನ್ನು ಮನೆಯ ದ್ವಾರದಲ್ಲಿ ಕಟ್ಟಬೇಕು. ಹೀಗೆ ಮಾಡಿದರೇ ಹಣದ ಅಭಾವ ಬರುದಿಲ್ವಂತೆ, ಒಮ್ಮೆ ನೀವು ಕೂಡ ಟ್ರೈ ಮಾಡಿ ನೋಡಿ.