ಕರ್ನಾಟಕ

ಕನ್ನಡಿಗರಾಗಿ ನಮ್ಮ ಮಾತೃ ಭಾಷೆ ಕನ್ನಡದ ಬಗ್ಗೆ ನಮಗೆಷ್ಟು ಗೊತ್ತಿದೆ?ಈ ಲೇಖನಿ ಓದಿ…

By admin

July 06, 2017

ದಿನಬೆಳಗಾದ್ರೆ ನಾವು ಕನ್ನಡಿಗರು ನಮ್ಮ ಕರ್ನಾಟಕ, ಭಾಷೆ ಕನ್ನಡದ ಬಗ್ಗೆ ಹಾಗೆ ಹೀಗೆ ಅಂತ ಮಾತನಾಡುತ್ತೇವೆ. ಆದ್ರೆ ಕನ್ನಡಿಗರಾಗಿ ನಮ್ಮ ಕನ್ನಡದ ಬಗ್ಗೆ ನಮಗೆಷ್ಟು ಗೊತ್ತಿದೆ.

ಕನ್ನಡ ಭಾಷೆಯು ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು ಇದಕ್ಕೆ ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ದೇಶದ ಭಾಷೆಗಳಲ್ಲಿ ಕನ್ನಡ ಭಾಷೆಯೂ ಪ್ರಮುಖವಾಗಿದ್ದು ಇತ್ತೀಚೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಂತಹ ಭಾಷೆ ನಮ್ಮ ಕನ್ನಡ.

ಆದರೆ ಪ್ರಸ್ತುತ ಕನ್ನಡ ಭಾಷೆಯ ಸ್ಥಿತಿಗತಿಯನ್ನು ಗಮನಿಸುತ್ತಿದ್ದರೆ ಎಲ್ಲೋ ಒಂದು ಕಡೆ ನಮ್ಮ ಪರಭಾಷೆಯ ಮೇಲಿರುವ ವ್ಯಾಮೋಹದಿಂದ ನಮ್ಮ ತಾಯಿಯ ಸಮಾನದ ಕನ್ನಡ ಭಾಷೆಯು ಅಪಾಯದಂಚಿನಲ್ಲಿ ಸಿಕ್ಕಿ ಕೊಂಡಿದೆ. ಇಂದು ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಅಲ್ಲಿ ಇಂಗ್ಲಿಷಿಗೆ ದೊರೆಯುವ ಪ್ರಾಮುಖ್ಯತೆ ಕನ್ನಡಕ್ಕೆ ದೊರೆತಿಲ್ಲ.

ಅನ್ಯ ರಾಜ್ಯಗಳಲ್ಲಿ ಅವರು ತಮ್ಮ ಮಾತೃಭಾಷೆಗೆ ಕೊಡುವ ಪ್ರಾಮುಖ್ಯತೆ ನಮ್ಮ ಕನ್ನಡಿಗರಿಗೆ ಇಲ್ಲ. ಹೊರ ರಾಜ್ಯದಿಂದ ಬಂದ ಕೆಲವರು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುವಂತಹ ಅನೇಕ ಕಹಿ ಪ್ರಸಂಗಗಳು ದಿನ ಬೆಳಗಾದರೆ ನಮ್ಮ ಕಣ್ಣೆದುರು ನಡೆಯುತ್ತಲೇ ಇವೆ.

 

ಕನ್ನಡಿಗರು ಎಷ್ಟರ ಮಟ್ಟಿಗೆ ಭಾಷೆಯನ್ನು ದೂರ ಸರಿಸುತ್ತಿದ್ದಾರೆ, ಬೇರೆ ರಾಜ್ಯದವರು ಇಲ್ಲಿ ಬಂದು ನೆಲಸಿಯೂ ಕನ್ನಡ ಕಲಿಯುವ ಶ್ರಮ ನಿಮಗೆ ಬೇಡವೆಂದು ಕನ್ನಡಿಗರೇ ಅವರ ಭಾಷೆಯನ್ನು ಕಲಿತು ಅವರಿಗೆ ಸಹಕಾರ ಮಾಡುವಷ್ಟು ಪರ ಭಾಷಾಭಿಮಾನವುಳ್ಳವರು.

ಇಂದು ಕರ್ನಾಟಕದಲ್ಲಿ ಇತರೆ ಭಾಷೆಗಳಾದ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗೆ ದೊರೆಯುತ್ತಿರುವ ಮಹತ್ವ ಕನ್ನಡಕ್ಕಿಲ್ಲ. ದಾರಿಯಲ್ಲಿ ಯಾರಾದರೂ ಅನ್ಯ ಭಾಷೆಯಲ್ಲಿ ಕೇಳಿದರೆ ಅವರಿಗೆ ಭಾಷೆ ತಿಳಿದಿದ್ದರೂ ಅವರು ತಮ್ಮ ಭಾಷೆಯಲ್ಲೇ ಉತ್ತರಿಸುವ ಭಾಷಾಭಿಮಾನಿಗಳು.

ಭಾರತದಲ್ಲಿ ಜಾತ್ಯತೀತ, ಭಾಷಾತೀತ, ರಾಷ್ಟ್ರದಂತೆ ಬದುಕಬೇಕು ನಿಜ. ಆದರೆ ಎಲ್ಲರಿಗೂ ಭಾಷಾಭಿಮಾನ ಮುಖ್ಯವಾಗಿ ಇರಬೇಕು. ಅನೇಕ ವರ್ಷಗಳ ಹಿಂದೆ ಸಾಮನ್ಯ ಭಾಷೆಗಳಲ್ಲಿ ಒಂದಾಗಿದ್ದ ಇಂಗ್ಲಿಷ್ ಇಂದು ಪ್ರಪಂಚದ ಪ್ರಮುಖ ಭಾಷೆಯಾಗಲು ಸಾಧ್ಯವಾಗುತ್ತಿರಲಿಲ್ಲ.

 

ಅಲ್ಲಿನ ದಾರ್ಶನಿಕರು ಸಾಹಿತಿಗಳು ಮತ್ತು ಇತರರ ಶ್ರಮದಿಂದ ಮಾತ್ರ ಇದು ಇಂದು ಪ್ರಮುಖ ಭಾಷೆಯಾಗಿದೆ. ಚೀನಾದಂತಹ ಶ್ರೀಮಂತ ದೇಶದಲ್ಲಿ ಇಂಗ್ಲಿಷ್ ತಿಳಿಯದವರೇ ಹೆಚ್ಚು. ಅಲ್ಲಿನ ಅನೇಕರಿಗೆ ಇಂಗ್ಲಿಷ್ ಭಾಷೆಯ ಗಂಧವೇ ತಿಳಿದಿಲ್ಲ. ಆದರೂ ಅದು ಅಭಿವೃದ್ಧಿ ಹೊಂದಿದ ರಾಷ್ಟ್ರ. ಇಂಗ್ಲಿಷ್ ಬೇಕು ಆದರೆ, ಅಗತ್ಯವಿದ್ದಲ್ಲಿ ಮಾತ್ರ.

 

ಅನಾವಶ್ಯಕವಾಗಿ ಇಂಗ್ಲಿಷ್ ಮಾತನಾಡುವುದರಿಂದ ಕೀರ್ತಿ ಹಚ್ಚುತ್ತದೆಂದು ಭಾವನೆಯಿಂದ ಇಂದು ಕನ್ನಡವನ್ನು ಕೀಳರಿಮೆಯ ದೃಷ್ಟಿಯಿಂದ ನೋಡುತ್ತಿರುವವರೆ ಹೆಚ್ಚು. ಇದರ ಉದ್ದೇಶ ಅನ್ಯ ಭಾಷೆಯಭಾಷೆಯನ್ನು ಸಹ ಪ್ರೀತಿಸಿ, ಗೌರವಿಸಿ, ಆದರೆ ಕನ್ನಡವನ್ನು ಬೆಳೆಸಬೇಕೆಂಬುದು.

ಕುವೆಂಪು ಅವರ ನುಡಿಯಂತೆ ‘ಎಲ್ಲಾದರು ಇರು ನೀ ಕನ್ನಡವಾಗಿರು’ ಎಂಬಂತೆ ಕನ್ನಡವನ್ನು ಪ್ರೀತಿಸೊಣ….ಕನ್ನಡವನ್ನು ಬೆಳೆಸೋಣ…