ಸಿನಿಮಾ

ಕನ್ನಡಕ್ಕೆ ಡಬ್ ಆಗ್ತಿವೆ ಸಾಲು ಸಾಲು ಪರಭಾಷಾ ಚಿತ್ರಗಳು..!

By admin

January 05, 2019

ಕೆಜಿಎಫ್ ಪರಭಾಷೆಗಳಿಗೆ ಡಬ್ ಆಗಿ ಧೂಳು ಎಬ್ಬಿಸಿದ ಬೆನ್ನಲ್ಲೇ ಇತ್ತ ಬೇರೆ ಭಾಷೆಯ ಚಲನ ಚಿತ್ರಗಳು ಸಹ ಡಬ್ ಆಗಿ ಬಿಡುಗಡೆಯಾಗಲು ಸಿದ್ಧವಾಗಿ ನಿಂತಿವೆ.

ಇಷ್ಟು ದಿನ ಬೇರೆ ಭಾಷೆಯ ಚಲನ ಚಿತ್ರಗಳು ಕನ್ನಡ ಭಾಷೆಗೆ ಡಬ್ ಆಗಲು ಭಾರಿ ವಿರೋಧ ವಿತ್ತು. ಡಬ್ ವಿಷಯವನ್ನು ಮಾತನಾಡುವಂತೂ ಇರಲಿಲ್ಲ. ಅದರಲ್ಲೂ ಕನ್ನಡ ಚಲನಚಿತ್ರ ಮಂಡಲಿಯಂತೂ ಇದನ್ನು ತೀವ್ರವಾಗಿ ವಿರೋಧಿಸಿತ್ತು.

ಕಾರಣ ಕನ್ನಡ ಚಲನಚಿತ್ರ ರಂಗವು ಮೊದಲೇ ಮಾರ್ಕೆಟಿಂಗ್ ವಿಚಾರದಲ್ಲಿ ಹಿಂದೆ ಇರುವುದರಿಂದ ಪರಭಾಷಾ ಚಿತ್ರಗಳು ಡಬ್ ಆದರೆ ಇದರಿಂದ ಚಿತ್ರರಂಗದ ಮೇಲೂ, ಕಲಾವಿದರ ಮೇಲೂ ಹಾಗೆಯೇ ತಾಂತ್ರಿಕ ವರ್ಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಭಯ ಮತ್ತು ಇದರಿಂದ ನಮ್ಮ ಪ್ರಾದೇಶಿಕತೆಗೆ ದಕ್ಕೆ ಬರುತ್ತದೆ ಎಂಬುದು.

ಮುಂಚೆಯಲ್ಲ ಅಭಿಮಾನಿಗಳು ಹಾಗೂ ಎಲ್ಲಾ ಚಿತ್ರ ಪ್ರಿಯರು ಕನ್ನಡಕ್ಕೆ ಪರಭಾಷಾ ಚಿತ್ರಗಳ ಡಬ್ ಮಾಡುವಿಕೆಯನ್ನು ವಿರೋಧಿಸಿದ್ದರು. ಆದರೆ ಈಗ ಕಾಲ ಬದಲಾಗಿದೆ. ಎಲ್ಲರೂ ತಾವು ಬೇರೆ ಭಾಷೆಯ ಸಿನಿಮಾ ಗಳನ್ನು ಕನ್ನಡದಲ್ಲೇ ನೋಡಬೇಕೆಂದು ಬಯಸಿದ್ದಾರೆ. ನಮಗೆ ಡಬ್ಬಿಂಗ್ ಬೇಕೇ ಬೇಕೆಂದು ಹಠವಿಡಿದು ಕುಳಿತಿದ್ದಾರೆ.

ಮೊದಲು ಕೆಲ ಚಿತ್ರಗಳು ವಿರೋಧದ ನಡುವೆಯೂ ತೆರೆ ಕಂಡು ಸೋಲನ್ನು ಅನುಭವಿಸಿದ್ದವು. ಕನ್ನಡಕ್ಕೆ ಡಬ್ ಆದ ಕೆಲವೇ ಚಿತ್ರಗಳು ಯಶಸ್ಸು ಕಾಣಲಿಲ್ಲ. ಆದರೆ ಈಗ ಕೆಜಿಎಫ್ ಚಿತ್ರ ಬೇರೆ ಭಾಷೆಯ ನೆಲದಲ್ಲಿ ತಮ್ಮದೇ ಭಾಷೆಯಲ್ಲಿ ಯಶಸ್ಸು ಕಂಡದ್ದೇ ತಡ ಈಗ ಕನ್ನಡದಲ್ಲೂ ಆ ನೆಲದ ಚಿತ್ರಗಳು ಡಬ್ ಆಗಲು ತಯಾರಾಗಿವೆ.

ತೆಲುಗಿನ ವಿನಯ ವಿಧೇಯ ರಾಮ ಸೇರಿದಂತೆ, ಜೂನಿಯರ್ ಎನ್ ಟಿಆರ್ ಆರ್ ಚಿತ್ರಗಳು ಕನ್ನಡದಲ್ಲಿ ತೆರೆಕಾಣಲು ಸಿದ್ಧವಾಗಿವೆ.

ಪ್ರಿಯ ವಾರಿಯರ್ ಅಭಿನಯದ ಒಂದು ಮಲೆಯಾಳಂ ಚಿತ್ರ ಕನ್ನಡಕ್ಕೆ ಬರಲಿದೆ. ತಮಿಳಿನ ಎರಡು ಚಿತ್ರಗಳು ಕನ್ನಡಕ್ಕೆ ಬರಲು ಭಾರಿ ತಯಾರಿ ನಡೆಯುತ್ತಿದೆ. ಅಲ್ಲದೆ ಇನ್ನೂ ಕೆಲವು ಭಾಷೆಯ ಚಿತ್ರಗಳು ಕನ್ನಡಕ್ಕೆ ಬರಬಹುದು ಎನ್ನಲಾಗಿದೆ.