ಸೌಂದರ್ಯ

ಕಣ್ಣಿನ ಕಪ್ಪು ವರ್ತುಲಗಳಿಂದ ಕಿರಿಕಿರಿ ಆಗುತ್ತಿದೆಯೇ?ಹಾಗಾದ್ರೆ ಈ ಲೇಖನಿ ಓದಿ…

By admin

September 17, 2017

ಕಣ್ಣಿನ ಸುತ್ತಲು ಕಪ್ಪು ವರ್ತುಲಗಳು ಕಾಡುವುದು ಎಲ್ಲಾ ವಯಸ್ಸಿನವರಲ್ಲೂ ಕಂಡುಬರುವುದು ಸಾಮಾನ್ಯ.

ಕಣ್ಣಿನ ಸುತ್ತ ಉಂಟಾಗುವ ಕಪ್ಪು ವರ್ತುಲಗಳು ಮುಖದ ಸೌಂದರ್ಯ ಹಾಳು ಮಾಡುತ್ತವೆ ಹಾಗೂ ಕಿರಿ ಕಿರಿ ಕೂಡ. ಮೇಕಪ್‌ನಿಂದ ಇವುಗಳನ್ನು ಮುಚ್ಚಿದರೆ ಅದು ತಾತ್ಕಾಲಿಕ ಉಪಶಮನವಷ್ಟೇ ಆಗಬಲ್ಲದು. ‘ಕಪ್ಪು ವರ್ತುಲಗಳಿಂದ ಶಾಶ್ವತ ಮುಕ್ತಿ ಪಡೆಯಲು ಸಾಧ್ಯವಿಲ್ಲವೇ ಅಂತ ನಿಮ್ಗೆ ಅನ್ನಿಸಬಹುದು.

ಇದಕ್ಕೆ ಮುಖ್ಯ ಕಾರಣಗಳು:- ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎಂಬುದಕ್ಕಿಂತ ಹೆಚ್ಚಾಗಿ ದೇಹ ನಿಶ್ಶಕ್ತವಾದಾಗ ಮತ್ತು ರಕ್ತಹೀನತೆಯುಂಟಾದಾದಾಗ ಆರಂಭವಾಗುವ ಸಮಸ್ಯೆ. ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಉಂಟಾದಾಗ ದೇಹಕ್ಕೆ ಮತ್ತಷ್ಟು ಪೋಷಕಾಂಶ ಬೇಕು ಎಂಬ ಸಂದೇಶವನ್ನು ಕಪ್ಪು ವರ್ತುಲ ನೀಡುತ್ತದೆ. ನಿದ್ರಾಹೀನತೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಬಹುದು.

ಈ ಸಮಸ್ಯೆಯ ಪರಿಹಾರಕ್ಕೆ ಈಗಾಗಲೇ ಹಲವು ಕ್ರೀಮುಗಳು ಲಭ್ಯವಿವೆ. ಆದರೆ ಇವು ತಾತ್ಕಾಲಿಕವಾಗಿ ಕಪ್ಪು ವರ್ತುಲವನ್ನು ಹೋಗಲಾಡಿಸಿಯಾವೇ ಹೊರತು ಇದಕ್ಕೊಂದು ಶಾಶ್ವತ ಪರಿಹಾರಬೇಕೆಂದರೆ ನಮ್ಮ ಆಹಾರಕ್ರಮದಲ್ಲಿ ಬದಲಾವಣೆ ತಂದುಕೊಳ್ಳುವುದು ಬಹಳ ಮುಖ್ಯ.

ಕಪ್ಪು ವರ್ತುಲಗಳು ಗಂಭೀರ ಸಮಸ್ಯೆಯಲ್ಲ. ಮನೆಯಲ್ಲೇ ಗೃಹೌಷಧಿಗಳಿಂದ ಕಪ್ಪು ವರ್ತುಲಗಳನ್ನು ನಿವಾರಣೆ ಮಾಡಿ ಮೊಗದ ಸೌಂದರ್ಯ ಮತ್ತು ಆರೋಗ್ಯವನ್ನು ವರ್ಧಿಸಬಹುದು.