ಮಾಂಸಪ್ರಿಯರಿಗೆ ನಾಟಿ ಕೋಳಿ ಮಾಂಸ ಎಂದರೆ ಬಾಯಿಯಲ್ಲಿ ನೀರು ಬರುವುದಂತು ಗ್ಯಾರಂಟಿ ಏಕೆಂದರೆ ಇದರ ಮಾಂಸದ ರುಚಿ ಅಂತಹುದು. ನಗರೀಕರಣ ಮತ್ತು ಮಾಂಸದ ಬೇಡಿಕೆಯ ಕಾರಣದಿಂದ ಫಾರಂ ಮತ್ತು ಬ್ರಾಯ್ಲರ್ ಕೋಳಿಗಳ ಸಾಕಾಣಿಕೆಯ ಕೇಂದ್ರಗಳು ತಲೆ ಎತ್ತಿವೆ. ಆದರೆ ಈ ಕೋಳಿಗಳ ಮಾಂಸ ನಾಟಿ ಕೋಳಿಯ ಮಾಂಸದ ರುಚಿಯಷ್ಟಿರುವುದಿಲ್ಲ.
ನಗರಗಳಲ್ಲಿ ಜನರು ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದು ಹಣ ಖರ್ಚಾದರೂ ಕೂಡ ನಾಟಿ ಕೋಳಿಯನ್ನು ಕೊಳ್ಳುತ್ತಾರೆ. ಟರ್ಕಿ ಕೋಳಿಯನ್ನು ಕರ್ನಾಟಕದಲ್ಲಿ ತಿನ್ನುವುದು ಕಡಿಮೆ, ಆದರೆ ಸ್ಟಾರ್ ಹೋಟೆಲ್ಗಳಲ್ಲಿ ಈ ಟರ್ಕಿಕೋಳಿಗೆ ಹೆಚ್ಚು ಬೇಡಿಕೆ ಇದೆ.
ಕೋಳಿ ಫಾರಂನಲ್ಲಿ ಬೆಳೆಯುವ ಕೋಳಿಗಳಿಗೆ ಔಷಧಿ ಮತ್ತು ವೈದ್ಯೋಪಚಾರ ಹೆಚ್ಚು, ಮತ್ತು ಈ ಕೋಳಿಗಳನ್ನು ಹೆಚ್ಚು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
ಹಾಗಾಗಿ ಈ ಫಾರಂ ಮತ್ತು ಬ್ರಾಯ್ಲರ್ ಕೋಳಿಗಳಿಗೆ ಬದಲಾಗಿ ನಾಟಿ ಕೋಳಿ ಮತ್ತು ಟರ್ಕಿ ಕೋಳಿಗಳನ್ನು ಸಾಕಿದರೆ ಅದರಿಂದ ಹೆಚ್ಚು ಲಾಭದ ಜೊತೆಗೆ ಆರೋಗ್ಯಕರ ಮಾಂಸವನ್ನು ಕೂಡ ನಾವು ಪಡೆಯಬಹುದು.
ಆರೋಗ್ಯ ಮತ್ತು ಹಣಗಳಿಸುವುದಕ್ಕಾಗಿ ಟರ್ಕಿ ಕೋಳಿ ಮತ್ತು ನಾಟಿ ಕೋಳಿ ಸಾಕಿದರೆ ಕಡಿಮೆ ಕರ್ಚಿನಲ್ಲಿ ಹೆಚ್ಚು ಆದಾಯವನ್ನು ಪಡೆಯಬಹುದು.