ತಂತ್ರಜ್ಞಾನ

ಕಂಪನಿಗಳಲ್ಲಿ ನಿರುದ್ಯೋಗಿಗಳ ಇಂಟರ್ವ್ಯೂ ಪಡೆಯುತ್ತೆ ಈ ರೋಬೋಟ್..!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

By admin

April 06, 2018

ರಷ್ಯಾದ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ರೋಬೋಟ್ ಒಂದನ್ನು ತಯಾರಿಸಿದೆ. ಈ ರೋಬೋಟ್ ಉದ್ಯೋಗವರಸಿ ಬರುವ ನಿರುದ್ಯೋಗಿಗಳ ಸಂದರ್ಶನ ಪಡೆಯಲಿದೆ. ಪ್ರಮುಖ ಕಂಪನಿಗಳು ಸೇರಿ ಸುಮಾರು 300 ಕಂಪನಿಗಳು ಈ ರೋಬೋಟ್ ಮೂಲಕ ಇಂಟರ್ವ್ಯೂ ಮಾಡಿಸ್ತಿವೆ.

ಪೆಪ್ಸಿ, ಲೋರಿಯಲ್ ಸೇರಿದಂತೆ ಪ್ರಮುಖ ಕಂಪನಿಗಳಿಗೆ ಕೆಲಸಕ್ಕೆ ಸೇರಲು ನೀವು ನಿರ್ಧರಿಸಿದ್ದರೆ ನಿಮಗೆ ರೋಬೋಟ್ ವೇರಾ ಕರೆ ಮಾಡಬಹುದು. ಇಲ್ಲವೆ ವಿಡಿಯೋ ಕಾಲ್ ಮೂಲಕ ನಿಮಗೆ ಪ್ರಶ್ನೆಗಳನ್ನು ಕೇಳಬಹುದು.

ಸೇಂಟ್ ಪೀಟರ್ಸ್ಬರ್ಗ್ ನ ಸ್ಟ್ರಾಫೇರಿ ಸಂಸ್ಥೆ ಈ ರೋಬೋಟ್ ಸಿದ್ಧಪಡಿಸಿದೆ. ಕೃತಕ ಬುದ್ಧಿ ಮತ್ತೆ ಮೂಲಕ ವೇರಾ ಇಂಟರ್ವ್ಯೂ ಪಡೆಯಲಿದೆ.

ಜಾಬ್ ಸೈಟ್ ಗಳಲ್ಲಿ ರೆಸ್ಯೂಮ್ ಸ್ಕ್ಯಾನ್ ಮಾಡುವ ವೇರಾ ನಂತ್ರ ಶಾರ್ಟ್ ಲಿಸ್ಟ್ ಸಿದ್ಧಪಡಿಸುತ್ತದೆ. ಅಭ್ಯರ್ಥಿಗೆ ಕರೆ ಮಾಡಿ ಅಥವಾ ಇ-ಮೇಲ್ ಮಾಡಿ ಈ ಬಗ್ಗೆ ಮಾಹಿತಿ ನೀಡುತ್ತದೆ. ರೋಬೋಟ್ ವೇರಾ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೋಪ, ಖುಷಿ, ದುಃಖ ಇದ್ರ ಬಗ್ಗೆ ವೇರಾಗೆ ಹೇಳಿ ಕೊಡಲಾಗ್ತಿದೆ.