ಸ್ಪೂರ್ತಿ

ಓದಿಲ್ಲ,ಬರೆದಿಲ್ಲ ಈ ಅಜ್ಜಿಗೆ ಸಿಕ್ಕಿದೆ ರಾಷ್ಟ್ರ ಪ್ರಶಸ್ತಿ ಗರಿಮೆ..!ಎಲ್ಲರಿಗೂ ಸ್ಪೂರ್ತಿ ಈ ಅಜ್ಜಿ…ತಿಳಿಯಲು ಈ ಲೇಖನ ಓದಿ…

By admin

March 14, 2018

ಈ ಅಜ್ಜಿಗೆ ಬರೋಬ್ಬರಿ 80 ವರ್ಷ ವಯಸ್ಸು ಆದ್ರೂ ಇವರು ಛಲ ಬಿಡದೆ ಕೃಷಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ. ಇವರ ಒಂದು ಸಾಧನೆಯು ಪ್ರತಿಯೊಬ್ಬ ರೈತನಿಗೆ ಸ್ಫೂರ್ತಿ ಅನ್ನಬಹುದು .ಈ ಅಜ್ಜಿಯ ಹೆಸರು ಲಕ್ಷ್ಮೀಬಾಯಿ ಮಲ್ಲಪ್ಪ ಜುಲ್ಪಿ ಎಂಬುದಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದವರು ಇವರಿಗೆ 80 ವರ್ಷ ವಯಸ್ಸು. ಮತ್ತೆ ಇವರಿಗೆ ಹೆಣ್ಣು ಮಕ್ಕಳು ಸೇರಿದಂತೆ ಮೊಮ್ಮಕ್ಕಳಿದ್ದಾರೆ. ಈ ವಯಸ್ಸಿನಲ್ಲೂ ಕೂಡ ಇವರ ಕಾರ್ಯ ವೈಖರಿಯನ್ನು ನೋಡಿದರೆ ಎಂತವರಿಗೂ ಕೂಡ ಅಚ್ಚರಿ ಮೂಡಿಸುತ್ತದೆ. ಆ ರೀತಿಯಲ್ಲಿ ಕೃಷಿ ಚಟುವಟಿಕೆಯ ಕೆಲಸವನ್ನು ಮಾಡುತ್ತಾರೆ ಈ ಲಕ್ಶ್ಮಿಬಾಯಿ.

ಲಕ್ಶ್ಮಿಬಾಯಿಯವರು ತಮ್ಮ ತವರುಮನೆಯ ಸೋರಗಾಂವಿ ಗ್ರಾಮದಿಂದ ದೇಶೀಯ ಬದನೆ ತಳಿಗಳನ್ನ ತಂದು ತಮ್ಮ ಗಂಡನ ಮನೆಯಲ್ಲಿ ಬೆಳೆಯುವ ಮೂಲಕ ಅದ್ಭುತ ಸಾಧನೆಯನ್ನ ಮಾಡಿದ್ದಾರೆ. ಇವರು ಬೆಳೆಯುವಂತ ದೇಶಿಯ ಬದನಕಾಯಿಗೆ ಉತ್ತಮ ಮಾರ್ಕೆಟಿಂಗ್ ಇದ್ದು ಸುತ್ತ ಮುತ್ತಲಿನ ರೈತರೆಲ್ಲರೂ ಇವರನ್ನು ನೋಡಿ ಪ್ರೇರೇಪಿತರಾಗಿದ್ದರೆ ಎನ್ನಲಾಗುತ್ತದೆ.

ಲಕ್ಷ್ಮೀಬಾಯಿಯವರ ನಿತ್ಯದ ಕಾಯಕ:-

ದಿನಾ ಬೆಳಗಾದರೆ ಸಾಕು ಎದ್ದು ದನಕರುಗಳಿಗೆ ನೀರು ಹಾಕೋದು, ಹೊಲಗದ್ದೆಗಳಲ್ಲಿ ಬದನೆಕಾಯಿಗಳ ಬೆಳೆ ನೋಡಿಕೊಳ್ಳೋದು ಮತ್ತು ದೇಶಿಯ ಬೀಜಗಳನ್ನ ಸಂರಕ್ಷಣೆ ಮಾಡೋದು ಹಾಗು ನಿತ್ಯವೂ ಕೃಷಿ ಕಾರ್ಯದಲ್ಲಿ ತೊಡಗುವಂತ ಕೆಲಸವನ್ನು ಮಾಡುತ್ತಾರೆ.

ಹೊಲದಲ್ಲಿ ಬದನೆಕಾಯಿ ಹೆಚ್ಚೋದು, ಬೆಳೆಗೆ ನೀರುಣಿಸೋದು, ಕಸ ಕೀಳೋದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿರುತ್ತಾರೆ. ಅಲ್ಲದೆ ಹೊಲದಲ್ಲಿ ಕೆಲ್ಸ ಮಾಡೋರನ್ನ ತಮ್ಮ ಮಕ್ಕಳಂತೆ ನೋಡಿಕೊಳ್ತಾರೆ.

ವಿಶೇಷ ಕಾಯಕ:-

ಲಕ್ಷ್ಮೀಬಾಯಿಯವರು ಬೀಜ ಬ್ಯಾಂಕ​ನ್ನು ತಮ್ಮ ಮನೆಯಲ್ಲಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಜಾತಿಯ ದೇಶಿಯ ತಳಿಗಳ ಬೀಜಗಳನ್ನ ಮಣ್ಣಿನ ಮಡಿಕೆಗಳಲ್ಲಿಟ್ಟು ಸಂರಕ್ಷಿಸಿ ಇತರರಿಗೆ ಮಾದರಿಯಾಗಿದ್ದಾರೆ. ಇನ್ನು ಕೃಷಿ ಸಾಧನೆ ಮಾಡಿರೋ ಕುಟುಂಬದಲ್ಲಿ ಪತಿ ಮಲ್ಲಪ್ಪಗೆ ರಾಜ್ಯ ಪ್ರಶಸ್ತಿ, ಪುತ್ರ ರುದ್ರಪ್ಪಗೆ ಮಹಿಂದ್ರಾ ನ್ಯಾಷನಲ್ ಅವಾರ್ಡ, ಐಎಆರ್ಐ ಪ್ರಶಸ್ತಿಗಳು ಬಂದಿದ್ದು, ಇಡಿ ಕುಟುಂಬ ಕೃಷಿ ಸಾಧಕ ಕುಟುಂಬವಾಗಿ ಹೆಸರುವಾಸಿಯಾಗಿದೆ.

ಕಳೆದ ಹಲವು ವರ್ಷಗಳ ಸಾಧನೆ ಮತ್ತು ಬದನೆ ಸಂಶೋಧನೆಗಾಗಿ ನ್ಯೂ ದೆಹಲಿಯ ನ್ಯಾಷನಲ್​ ಇನೋವೇಷನ್​ ಪೌಂಡೇಶನ್ ವತಿಯಿಂದ ಪ್ರಶಸ್ತಿಗೂ ಭಾಜನರಾಗಿದ್ದು, ದೇಶಿಯ ತಳಿ ಸಂರಕ್ಷಣೆಗಾಗಿ 2015ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರಿಂದ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.