ಸಿನಿಮಾ

ಒಳ್ಳೆ ಹುಡುಗ ಪ್ರಥಮ್’ನ ಹುಚ್ಚಾಟ!ಭುವನ್ ತೊಡೆ ಕಚ್ಚಿದ ಪ್ರಥಮ್! ಅಲ್ಲಿ ನಡೆದಿದ್ದಾದರು ಏನು ಗೊತ್ತಾ?

By admin

July 24, 2017

ಒಳ್ಳೆ ಹುಡುಗ ಪ್ರಥಮ್ ಹಾಗೂ ನಟ ಭುವನ್ ನಡುವೆ ಖಾಸಗಿ ವಾಹಿನಿಯೊಂದರ ಧಾರಾವಾಹಿ ಚಿತ್ರೀಕರಣದ ವೇಳೆ  ಜಗಳವಾಗಿದ್ದು, ಪ್ರಥಮ್ ನನ್ನ ತೊಡೆ ಕಚ್ಚಿದ್ದಾರೆಂದು ಭುವನ್ ಆರೋಪ ಮಾಡಿದ್ದಾರೆ.

ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಸಂಜು ಮತ್ತು ನಾನು ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಭುವನ್ ಮತ್ತು ಸಂಜನಾ ನಟಿಸುತ್ತಿದ್ದಾರೆ. ಧಾರಾವಹಿಯ ಚಿತ್ರೀಕರಣದ ವೇಳೆ ಭುವನ್ ಹಾಗೂ ಪ್ರಥಮ್ ನಡುವೆತ ಮಾರಾಮಾರಿ ನಡೆದಿದ್ದು, ಈ ವೇಳೆ ಪ್ರಥಮ್ ನೇರವಾಗಿ ಬಂದು ಭುವನ್‍ರ ತೊಡೆಯ ಭಾಗವನ್ನು ಕಚ್ಚಿ ಗಾಯಗೊಳಿಸಿದ್ದಾರೆ.

ಚಿತ್ರೀಕರಣದ ವೇಳೆ ಪ್ರಥಮ್ ಅವರು ಸಂಜನಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ವೇಳೆ ಆಕ್ರೋಶಗೊಂಡಿರುವ ಭುವನ್ ಅವರು ಆ ರೀತಿ ಮಾತನಾಡದಂತೆ ತಾಕೀತು ಮಾಡಿದ್ದಾರೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಜಗಳ ವಿಕೋಫಕ್ಕೆ ತಿರುಗಿದೆ. ನಂತರ ಪ್ರಥಮ್ ಅವರು ಭುವನ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಚಿತ್ರೀಕರಣದ ಸಿಬ್ಬಂದಿಗಳು ಮಧ್ಯೆ ಪ್ರವೇಶ ಮಾಡಿದ್ದಾರೆ. ಆದರೂ ಸುಮ್ಮನಾಗದ ಪ್ರಥಣ್ ಅವರು ಭುವನ್ ಅವರ ತೊಡೆಗೆ ಕಚ್ಚಿದ್ದಾರೆಂದು ವರದಿಯಾಗಿದೆ.

 

ಪ್ರಥಮ್ ಮತ್ತು ಭುವನ್ ನಡುವೆ ಜಗಳ ನಡೀತಾಯಿದ್ದಾಗ ನಾನು ಅಲ್ಲಿರಲಿಲ್ಲ, ಸೆಟ್ ಒಳಗಡೆ ನಾನು ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದೆ ಹಾಗಾಗಿ ನಾನು ಜಗಳ ನೋಡಿಲ್ಲ. ನಾನು ಹೊರ ಬಂದಾಗ ಭುವನ್ ಪ್ರಥಮ್ ಕತ್ತನ್ನು ಹಿಡಿದಿದ್ರು. ಇಬ್ಬರ ನಡುವೆ ಗಲಾಟೆ ನಡೆಯುತಿತ್ತು, ಕೂಡಲೇ ಪಕ್ಕದ ರೂಮಿನಲ್ಲಿ ಕರೆದುಕೊಂಡು ಹೋಗಿ ನೋಡಿದಾಗ ಭುವನ್ ತೊಡೆಯ ಭಾಗದಲ್ಲಿ ಹಲ್ಲಿನ ಗುರುತುಗಳಿದ್ದವು. ಈ ವೇಳೆ ನಾನು, ಭುವನ್ ಹಾಗೂ ವಿಶಾಲಮ್ಮ ಎಂಬವರು ಸಹ ಇದ್ದರು. ಭುವನ್ ಗೆ ಯಾವ ನಾಯಿಯೂ ಕಚ್ಚಿಲ್ಲ. ಪ್ರಥಮ್ ಕಚ್ಚಿದ್ದು ಎಂದು ಸೆಟ್‍ನಲ್ಲಿ ಎಲ್ರೂ ಹೇಳ್ತಾಯಿದ್ರು. ಪ್ರಥಮ್ ಯಾವಗಲೂ ಕೆಟ್ಟದಾಗಿ ಕಮೆಂಟ್, ಟಾಂಟ್ ಮಾಡ್ತಾಯಿದ್ದ ಎಂದು ನಟಿ ಸಂಜನಾ ಹೇಳಿದ್ದಾರೆ.

ಇನ್ನು ಭುವನ್ ಅವರ ಆರೋಪಕ್ಕೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪ್ರಥಮ್ ಅವರು, ನಾನು ಅಪ್ಪಟ ಸಸ್ಯಹಾರಿ, ನಾನು ಯಾರಿಗೂ ಕಚ್ಚಿಲ್ಲ. ಮೊದಲು ಭುವನ್ ಅವರೇ ನನ್ನ ಮೇಲೆ ಕೈ ಮಾಡಿದ್ದು, ಅಲ್ಲಿದ್ದ ಸಿಬ್ಬಂದಿಗಳು ನಮ್ಮ ಜಗಳ ಬಿಡಿಸಿದ್ದರು ಎಂದು ಹೇಳಿಕೊಂಡಿದ್ದಾರೆ.