ಆರೋಗ್ಯ

‘ಒಣ ದ್ರಾಕ್ಷಿ’ಯಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

By admin

November 24, 2017

ಒಣದ್ರಾಕ್ಷಿ ಎಂದರೆ ಒಣಗಿಸಿದ ದ್ರಾಕ್ಷಿ. ಒಣದ್ರಾಕ್ಷಿಯನ್ನು ವಿಶ್ವದ ಹಲವು ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಅಡುಗೆ, ಬೇಕಿಂಗ್ ಮತ್ತು ಮದ್ಯ ತಯಾರಿಕೆಯಲ್ಲಿ ಬಳಸಬಹುದು.

ಪ್ರಯೋಜನಗಳು:-

ಕೆಮ್ಮು, ಕಫ ನಿವಾರಣೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ, ಶುಂಠಿ, ಕಾಳುಮೆಣಸಿನ ಕಷಾಯದಲ್ಲಿ 3-4 ಒಣದ್ರಾಕ್ಷಿಯನ್ನು ಜಜ್ಜಿ ಹಾಕಬೇಕು. ಆಗಾಗ ಹುಳಿ ದ್ರಾಕ್ಷಿಯನ್ನು ತಿನ್ನುತ್ತಿದ್ದರೆ ಹೊಟ್ಟೆಯ ಉರಿ, ಆಹಾರ ಪಚನವಾಗದ ಸಮಸ್ಯೆ ದೂರವಾಗುತ್ತದೆ. 2 ಚಮಚ ಒಣದ್ರಾಕ್ಷಿಯನ್ನು 1 ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ ಆ ನೀರನ್ನು ತಣಿಸಿ ಕುಡಿದರೆ ಹಸಿವೆ ಇಲ್ಲದಿರುವ ಸಮಸ್ಯೆ ದೂರವಾಗುತ್ತದೆ. ಅಲ್ಸರ್ ನಿಂದ ಬಳಲುವವರು 1 ಬಟ್ಟಲು ದ್ರಾಕ್ಷಾರಸವನ್ನು ದಿನಕ್ಕೆರಡು ಬಾರಿ ಕುಡಿಯುವುದರಿಂದ ಪ್ರಯೋಜನವಾಗುತ್ತದೆ.

ಅರ್ಧ ಬಟ್ಟಲು ನೀರಿನಲ್ಲಿ 2 ಚಮಚೆ ಒಣದ್ರಾಕ್ಷಿಯನ್ನು 1 ಗಂಟೆ ಕಾಲ ನೆನೆಸಿಟ್ಟು ನಂತರ ದ್ರಾಕ್ಷಿಯನ್ನು ಚೆನ್ನಾಗಿ ಅಗಿದು ತಿಂದರೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ ಇದನ್ನು ದಿನಕ್ಕೆರಡು ಸಲ ಮಾಡಬೇಕು. ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ ಮಿದುಳು ಚುರುಕಾಗಿರುತ್ತದೆ, ಮಾನಸಿಕ ಶಕ್ತಿ ಹೆಚ್ಚುತ್ತದೆ.

ಪ್ರತಿ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನಾಲ್ಕೈದು ಒಣದ್ರಾಕ್ಷಿಯನ್ನು ತಿನ್ನುವುದರಿಂದ ನಿಶ್ಯಕ್ತಿ, ದೈಹಿಕ ದೌರ್ಬಲ್ಯ ದೂರವಾಗುತ್ತದೆ. ಪಿತ್ತಕೋಶದ ಸಮಸ್ಯೆ , ಕಾಮಾಲೆಯಂತಹ ಸಮಸ್ಯೆ ಇದ್ದಾಗ ಪ್ರತಿನಿತ್ಯ ದ್ರಾಕ್ಷಾರಸವನ್ನು ಕುಡಿಯಬೇಕು.

ದೇಹಕ್ಕೆ ಪುಷ್ಠಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಮುಂಜಾನೆ 4-5 ಒಣದ್ರಾಕ್ಷಿ ಮತ್ತು 2-3 ಬಾದಾಮಿಯನ್ನು ಚೆನ್ನಾಗಿ ಅಗಿದು ತಿನ್ನಬೇಕು.

ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನಸಿ ನಂತರ ಅದೇ ಹಾಲಲ್ಲಿ ಅರೆದು ಚಿಕ್ಕಮಕ್ಕಳಿಗೆ ಪ್ರತಿನಿತ್ಯ ತಿನ್ನಿಸಿದರೆ ಮಕ್ಕಳು ದೃಡಕಾಯರಾಗಿ ಬೆಳೆಯುತ್ತಾರೆ.

1 ಲೋಟ ಹಾಲಿನಲ್ಲಿ1 ಚಮಚ ಒಣದ್ರಾಕ್ಷಿಯನ್ನು ಸೆರಿಸಿ ಬೇಯಿಸಿ ದಿನಕ್ಕೆರಡು ಬಾರಿ ತಿನ್ನಬೇಕು ಇದರಿಂದ ಕಣ್ಣಿನ ಸಮಸ್ಯೆ ದೂರವಾಗುವುದಲ್ಲದೆ ದೃಷ್ಠಿ ಶಕ್ತಿ ಚುರುಕಾಗುತ್ತದೆ.

ಹಾಲಲ್ಲಿ ಒಣದ್ರಾಕ್ಷಿಯನ್ನು ಅರೆದು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಮುಖ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

1 ಚಮಚ ಒಣದ್ರಾಕ್ಷಿ 2 ಒಣ ಅಂಜೂರವನ್ನು 1ಲೋಟ ಹಾಲಿನಲ್ಲಿ ಬೇಯಿಸಿ ಹಣ್ಣನ್ನು ತಿಂದು ಆ ಹಾಲನ್ನು ಕುಡಿದರೆ ಕಣ್ಣಿನ ದೃಷ್ಠಿಶಕ್ತಿ ಹೆಚ್ಚುತ್ತದೆ, ಇದನ್ನು ಪ್ರತಿ ನಿತ್ಯ ಮಾಡಿದರೆ ಕಣ್ಣಿನ ಆರೋಗ್ಯ ಹೆಚ್ಚುತ್ತದೆ.

ಒಣ ಕೆಮ್ಮು ಕಾಡುತ್ತಿರುವಾಗ 3 ಚಮಚೆ ಒಣದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ತಿನ್ನಬೇಕು ರಕ್ತದ ಒತ್ತಡ ಇರುವವರು ಪ್ರತಿನಿತ್ಯ ದ್ರಾಕ್ಷಾರಸ ಕುಡಿಯುವುದರಿಂದ ರಕ್ತದ ಒತ್ತಡದ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು.

ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ರಾತ್ರಿ ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನಸಿಟ್ಟು ಬೆಳ್ಳಿಗೆ ಹಾಲಿನೊಂದಿಗೆ ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.

2 ಚಮಚೆಯಷ್ಟು ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳ್ಳಿಗೆ ಸೇವಿಸುವುದರಿಂದ ಎದೆ ಉರಿ, ಮಲಬದ್ದತೆ, ರಕ್ತಹೀನತೆ ಪರಿಹಾರವಾಗುತ್ತದೆ.