ಕೋಳಿಗಳು ಸಾಮನ್ಯವಾಗಿ ಒಂದು ದಿನದಲ್ಲಿ ಒಂದೆರಡು ಅಥವಾ ಹೆಚ್ಚೆಂದರೆ ಮೂರು ಮೊಟ್ಟೆ ಇಡುತ್ತವೆ. ಆದರೆ ಈ ಕೋಳಿ ಅದ್ಭುತವನ್ನು ಸೃಷ್ಟಿಸಿದೆ. ಜೈಪುರದ ಘಾಟ್‌ಗೇಟ್‌ನಲ್ಲಿರುವ ಹುಝೂರಿ ಛೋಟಾ ಪಾರ್ಕ್‌ನಲ್ಲಿ ಈ ಅದ್ಭುತ ಕಾಣಲು ಸಿಕ್ಕಿದೆ.
ಇಲ್ಲೊಂದು ಕೋಳಿ ಒಂದು ದಿನದಲ್ಲಿ ಒಂದೆರಡಲ್ಲ ಬರೋಬರಿ 36 ಮೊಟ್ಟೆಗಳನ್ನು ಇಟ್ಟು ಪವಾಡ ಸೃಷ್ಟಿಸಿದೆ. ರಯೀಸ್ ಖಾನ್ ಎನ್ನುವ ವ್ಯಕ್ತಿ ಈ ಕೋಳಿಯನ್ನುತಾನು ಮಾರುಕಟ್ಟೆಯಿಂದ ಖರೀದಿಸಿ ತಂದಿದ್ದೇನೆ ಎಂದು ಹೇಳಿದ್ದಾರೆ. ಹೀಗೆ ಖರೀದಿಸಿ ತಂದಿದ್ದ ಕೋಳಿಗಳಲ್ಲಿ ಒಂದು ಕೋಳಿ 36 ಮೊಟ್ಟೆ ಇಟ್ಟಿದೆ.
ರಯೀಸ್‌ರ ಮನೆಗೆ ಈ ಕೋಳಿಯನ್ನು ನೋಡಲು ಜನರು ಬರುತ್ತಿದ್ದಾರೆ. ಮನೆಯವರು ಇದು ಪವಾಡ ಎಂದು ಹೇಳುತ್ತಿದ್ದಾರೆ. ಈ ಕೋಳಿಯನ್ನು ಪದಾರ್ಥಮಾಡಲಿಕ್ಕಾಗಿ ರಯೀಸ್ ಖರೀದಿಸಿದ್ದರಂತೆ. ಮನೆಯಲ್ಲಿ ಕೂಡಿಟ್ಟು ಅವರು ಬೇರೆ ಕೆಲಸಕ್ಕೆ ಹೋಗಿದ್ದರು. ಮತ್ತೆ ಅವರು ಮನೆಗೆ ಬಂದಾಗ ಕೋಳಿ ಮೊಟ್ಟೆ ಇಟ್ಟಿತ್ತು. ಹನ್ನೆರಡು ಗಂಟೆಯಲ್ಲಿ 16 ಮೊಟ್ಟೆ ಇಟ್ಟಿತ್ತು. ಒಂದು ದಿನದ ನಂತರ ನೋಡಿದಾಗ 36 ಮೊಟ್ಟೆಇಟ್ಟಿತ್ತು ಇದನ್ನು ನೋಡಿ ರಯೀಸ್‌ರ ಕುಟುಂಬ ಆಶ್ಚರ್ಯ ಚಕಿತವಾಗಿದೆ.
ಯಾಕೆಂದರೆ ಒಂದು ಕೋಳಿ ಎರಡು ಮೂರು ಮೊಟ್ಟೆ ಇಡುತ್ತವೆ ಅಷ್ಟೇ. ಈಗ ಈ ಕೋಳಿ ಎಲ್ಲರಿಗೂ ಈಗ ಕುತೂಹಲದ ವಿಷಯವೆನಿಸಿಕೊಂಡಿದೆ.