ಬ್ಯಾಂಕ್ ಗ್ರಾಹಕರಿಗೆ ಶುಭ ಸುದ್ದಿ ನೀಡಿರುವ ಆರ್ಬಿಐ.
ಮೊಬೈಲ್ ನಂಬರ್ ವರ್ಗಾವಣೆಯಂತೆ ಈಗ ನಿಮ್ಮ ಬ್ಯಾಂಕ್ ಖಾತೆ ವರ್ಗಾವಣೆಗೂ ಮುಂದಾಗಿದೆ. ಅಂದರೆ ತಮಗಿಷ್ಟ ಬಂದ ಬ್ಯಾಂಕ್‌ನಲ್ಲಿ ಖಾತೆ ಹೊಂದಬಹುದಾಗಿದೆ.
ಅಂದುಕೊಂಡಂತೆ ನಡೆದರೆ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಇನ್ನೊಂದು ಬ್ಯಾಂಕ್ಗೆ ವರ್ಗಾಹಿಸಿಕೊಳ್ಳಬಹುದಾಗಿದೆ. ಯಾವುದೇ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ತಮ್ಮ ಅನುಕೂಲತೆಗೆ ತಕ್ಕಂತೆ ಬ್ಯಾಂಕ್ಗಳ ವರ್ಗಾವಣೆಗೆ ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ.
ಗ್ರಾಹಕರು ಚಾಲ್ತಿಯಲ್ಲಿರುವ ತಮ್ಮ ಖಾತೆಯನ್ನು ತಮಗೆ ಇಷ್ಟಬಂದ/ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ವರ್ಗಾಹಿಸಿಕೊಳ್ಳಬಹುದಾಗಿದೆ.
ನಿಮ್ಮ ಮೊಬೈಲ್ ಸೇವಾ ಕಂಪನಿಯಂತೆ (ಮೊಬೈಲ್ ಆಪರೇಟರ್) ನಿಮ್ಮ ಬ್ಯಾಂಕ್ ಅನ್ನು ನೀವು ಬದಲಾಯಿಸಿದರೂ ಕೂಡಾ ನಿಮ್ಮ ಹಳೆಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಲು ಸಾಧ್ಯವಾಗುತ್ತದೆ.
ಈ ಬಗ್ಗೆ ಮಾತನಾಡಿರುವ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಎಸ್.ಎಸ್.ಮುಂದ್ರ, ಭಾರತದಲ್ಲಿ ಬ್ಯಾಂಕ್ ಖಾತೆಯ ಪೋರ್ಟಬಿಲಿಟಿ ಪರಿಚಯಿಸಲು ಆರ್ಬಿಐ ಸಿದ್ದತೆ ನಡೆಸಿದೆ. ಪಾವತಿಯ ವ್ಯವಸ್ಥೆಯಲ್ಲಿನ ತಂತ್ರಜ್ಞಾನದ ಪ್ರಗತಿಗಳೊಂದಿಗೆ ಖಾತೆಯ ವರ್ಗಾವಣೆಗೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಎಂಪ್ಲಾ ಯೀಸ್ ಫೆಡರೇಷನ್ ಅಧ್ಯಕ್ಷ ವಸಂತ ಪೈ, ಕೇಂದ್ರದ ಈ ನಿರ್ಧಾರ ಉತ್ತಮವಾಗಿದೆ. ಇದರಿಂದ ತಮಗಿಷ್ಟ ಬಂದ ಬ್ಯಾಂಕ್‌ನಲ್ಲಿ ಖಾತೆ ಹೊಂದಬಹುದಾಗಿದೆ. ಇದರ ಜತೆಗೆ ಕಟ್ಟುನಿಟ್ಟಿನ ಷರತ್ತು ಜಾರಿಗೊಳಿಸಬೇಕು.
ಗ್ರಾಹಕರನ್ನು ಸೆಳೆಯೋಕೆ ಬ್ಯಾಂಕ್‌ಗಳು ಆಮಿಷ ಒಡ್ಡಬಹುದು. ಇಲ್ಲವಾದರೆ ಭ್ರಷ್ಟಾಚಾರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.