ಸುದ್ದಿ

ಎಲೆಕ್ಷನ್ ಅಕ್ರಮ ಹಣ ಸಾಗಾಟಕ್ಕೆ ಬ್ರೆಕ್ ಹಾಕಲು ಐಪಿಎಸ್ ಅಧಿಕಾರಿ ರೂಪಾರವರ ಮಾಸ್ಟರ್ ಪ್ಲಾನ್ ಏನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

By admin

April 20, 2018

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಇನ್ನೇನು ಕರ್ನಾಟಕದಲ್ಲಿ ಚುನಾವಣಾ ದಿನಾಂಕ ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ. ಎಲೆಕ್ಷನ್ ಅಂದ್ರೆ ನಿಮ್ಗೆ ಗೊತ್ತೇ ಇರುವ ಹಾಗೆ, ಹಣದ ಹೊಳೇನೇ ಹರಿಯುತ್ತದೆ. ದೊಡ್ಡ ದೊಡ್ಡ ವ್ಯಕ್ತಿಗಳು ಹಣವನ್ನು ಮತದಾರರಿಗೆ ತಲುಪುವಂತೆ ಮಾಡಲು ಹಲವಾರು ತಯಾರಿಗಳನ್ನೇ ಮಾಡಿರುತ್ತಾರೆ.ಇದು ಕಾನೂನು ಬಾಹಿರ ಅಂತ ಗೊತ್ತಿದ್ರು ವಿವಿಧ ರೀತಿಯಲ್ಲಿ ಹಣ ಸಾಗಾಟ ಮಾಡುತ್ತಾರೆ.

ಆಂಬುಲೆನ್ಸ್ ಗಳಲ್ಲಿ ಹಣ ಸಾಗಾಟ…

ಈ ಹಣದ ಸಾಗಾಟ ಮಾಡಲು ರೋಗಿಗಳನ್ನು ಕರೆದೋಯ್ಯುವ ಆಂಬುಲೆನ್ಸ್ ಗಳನ್ನೂ ಬಿಟ್ಟಿಲ್ಲ.ಇದಕ್ಕೆ ಪ್ರಮುಖ ಕಾರಣ ಸಾಮಾನ್ಯವಾಗಿ ಆಂಬುಲೆನ್ಸ್ ಗಳನ್ನು ಪೊಲೀಸರು ಚೆಕ್ ಮಾಡೋದಿಲ್ಲ. ಈಗಾಗಿ ಎಲೆಕ್ಷನ್ ಬರುತ್ತಲೇ  ಆಂಬುಲೆನ್ಸ್’ಗಳಲ್ಲಿ ಹಣದ ಸಾಗಾಟ ಹೆಚ್ಚಾಗುತ್ತದೆ.ಹಾಗಾಗಿ ಪೊಲೀಸರಿಗೆ ಕಣ್ಣು ತಪ್ಪಿಸಿ ಮಾಡುವ ಇಂತಹ ಎಲ್ಲಾ  ಅಕ್ರಮ ಸಾಗಾಟಕ್ಕೆ ಬ್ರೆಕ್ ಹಾಕಲು ಐಪಿಎಸ್ ಅಧಿಕಾರಿ ರೂಪಾ ಅವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಇನ್ನೇನು ಕೆಲವೇ ವಾರಗಳಲ್ಲಿ ಎಲೆಕ್ಷನ್ ನಡೆಯುವುದರಿಂದ ಆಂಬುಲೆನ್ಸ್ ನಲ್ಲಿ ಕೂಡ ದುಡ್ಡು ಸಾಗಿಸೋ ಸಾಧ್ಯತೆ ಇರೋದ್ರಿಂದ ಈಗ ಇದಕ್ಕೆ ಬ್ರೇಕ್ ಹಾಕೋದಕ್ಕೆ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಅಯುಕ್ತೆ ರೂಪಾ ಮುಂದಾಗಿದ್ದಾರೆ.

ಅಯುಕ್ತೆ ರೂಪಾರವರ ಪ್ಲಾನ್ ಏನು..?

ಎಮರ್ಜೆನ್ಸಿ ಕೇಸ್‍ಗಳಿಗೆ ರೆಡ್‍ ಲೈಟ್ ಮತ್ತು ಲಾಂಗ್ ಸೈರನ್ ಇದ್ರೆ, ನಾರ್ಮಲ್ ಕೇಸ್‍ಗಳಾದ್ರೆ ನೀಲಿ ಬಣ್ಣದ ಲೈಟ್ ಹಾಗೂ ಸಪರೇಟ್ ಸೈರನ್ ನೀಡಲು ಚಿಂತನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಂಬುಲೆನ್ಸ್ ಗಳನ್ನ ಕೆಲವು ಸಂದರ್ಭದಲ್ಲಿ ಚೆಕ್ ಮಾಡುವಂತೆ ಟ್ರಾಫಿಕ್ ಪೊಲೀಸರಿಗೂ ಸೂಚನೆ ನೀಡಿದ್ದಾರೆ.

ಟ್ರಾಫಿಕ್‍ನಲ್ಲಿ ತುರ್ತು ಸಮಯದಲ್ಲಿ ಪ್ರಾಣ ಹೋಗುವುದನ್ನು ತಡೆಯಲು ಹಾಗೂ ಆಂಬುಲೆನ್ಸ್ ಮಿಸ್ ಯೂಸ್ ಆಗದಂತೆ ತಡೆಯಲು ಈ ನಿರ್ಧಾರವನ್ನು ಮಾಡಲಾಗಿದೆ ಎಂಬುದಾಗಿ ತಿಳಿಸುತ್ತಾರೆ.