ಸುದ್ದಿ

ಎರಡಕ್ಕಿಂತ ಹೆಚ್ಚು ಮದ್ವೆ ಆಗಿಲ್ಲ ಅಂದ್ರೆ, ಜೈಲಿಗೆ ಹೋಗಲು ರೆಡಿಯಾಗಿ!ಎಲ್ಲಿ ಗೊತ್ತಾ?ಮುಂದೆ ಓದಿ…

By admin

January 26, 2018

ಭಾರತ ಸೇರಿದಂತೆ ಕೆಲವೊಂದು ದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ಕಾನೂನಿನ ಪ್ರಕಾರ ಅಪರಾಧ.ಅದ್ರಲ್ಲೂ ನಮ್ಮ ದೇಶದಲ್ಲಿ ಅಂತೂ ಏನೇ ಕಾನೂನಿದ್ರೂ ಎರಡು ಮದುವೆ ಆಗ್ತಾರೆ.ಇನ್ನೂ ಕೆಲವರು ಮೋಸದಿಂದ ಎರಡಕ್ಕಿಂತ ಹೆಚ್ಚು ಮದ್ವೆಯಾಗಿ ಜೈಲಿಗೆ ಕೂಡ ಹೋಗ್ತಾರೆ.

ಇದೆಲ್ಲಾ ಪೀಟಿಕೆ ಯಾಕಪ್ಪಾ ಅಂತೀರಾ…ಮುಂದೆ ಓದಿ ಶಾಕ್ ಆಗ್ತೀರಾ…ಜೊತೆಗೆ ತುಂಬಾ ಖುಷಿ ಪಡ್ತೀರಾ…

ನಿಮಗೇನಾದ್ರೂ ಎರಡಕ್ಕಿಂತ ಹೆಚ್ಚು ಮದುವೆ ಆಗ್ಲೇ ಬೇಕು ಅಂತ ಕಾನೂನು ಮಾಡಿದ್ರೆ, ನೀವ್ ಎಷ್ಟು ಖುಷಿ ಪಡ್ತೀರಾ ಅಲ್ವಾ.‌..

ಹೌದು,ಒಂದು ಮದುವೆಯಾಗಿ ಸಂಸಾರ ಹೇಗಪ್ಪಾ ಮಾಡೋದು ಅನ್ನುತ್ತಿರುವ ಈ ದೇಶದ ಪುರುಷರಿಗೆ ಈ ದೇಶದ ಒಂದು ಕಾನೂನು ಬಿಸಿ ತುಪ್ಪದಂತಾಗಿದೆ.ಏಕೆಂದ್ರೆ ಒಂದು ಮದುವೆಯಾಗಿರುವ ಈ ದೇಶದ ಗಂಡಸರು ಎರಡನೇ ಮದ್ವೆ ಆಗಿಲ್ಲ ಅಂದ್ರೆ ಅಂತಹವರು ಜೈಲಿಗೆ ಹೋಗಲು ರೆಡಿ ಅಗ್ಬಿರಬೇಕು.

ನಿಮ್ಗೆ ಶಾಕ್ ಜೊತೆಗೆ,ನಮ್ಮ ದೇಶದಲ್ಲಿ ಈತರ ಕಾನೂನಿಲ್ಲ ಅಂತ ಬೇಜಾರಾಗ್ಬಿರಬೇಕು ಅಲ್ವಾ.ನೀವ್ ಕೇಳಿದ್ದು ನಿಜ.

ಕನಿಷ್ಠ ಎರಡಕ್ಕಿಂತ ಹೆಚ್ಚು ಮದುವೆಯಾಗಬೇಕು ಇಲ್ಲದಿದ್ದರೆ ಜೈಲಿಗೆ ಹೋಗಬೇಕು ಎನ್ನುವ ಕಾನೂನನ್ನು ಆಫ್ರಿಕಾ ಖಂಡದ ಚಿಕ್ಕ ದೇಶ ಇರಿಟ್ರಿಯಾದಲ್ಲಿ ಕಡಿಮೆ ಅಂದ್ರು ಎರಡಕ್ಕಿಂತ ಜಾಸ್ತಿ ಮದುವೆಯಾಗಬೇಕು ಅಂತ ಕಾನೂನು ಮಾಡಿದ್ದಾರೆ.

ಏಕೆ ಈ ಕಾನೂನು…

ಇರಿಟ್ರಿಯಾ ಮತ್ತು ಇಥಿಯೋಪಿಯಾ ದೇಶಗಳ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಪುರುಷರು ಸಾವನ್ನಪ್ಪಿದ್ದರು. ಇದರಿಂದಾಗಿ ದೇಶದಲ್ಲಿ ಪುರುಷರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರಿಂದ ಸರ್ಕಾರವೇ ಕನಿಷ್ಠ ಎರಡು ಮದುವೆಯಾಗಬೇಕೆಂಬ ನಿಯಮ ಜಾರಿಗೆ ತಂದಿದೆ.

ವಿರೋಧ ಮಾಡುವ ಹೆಣ್ಣುಮಕ್ಕಳಿಗೆ ಜೀವಾವಧಿ ಶಿಕ್ಷೆ…

ಎರಡು ಮದುವೆಯನ್ನು ಆಗಲು ಇಷ್ಟಪಡದವರು  ಜೈಲು ಸೇರಬೇಕು. ತನ್ನ ಗಂಡ ಎರಡನೇ ಮದುವೆಯಾಗುವುದನ್ನು ವಿರೋಧಿಸಿದ ಹೆಣ್ಣುಮಕ್ಕಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ. ಸರ್ಕಾರದ ಈ ತೀರ್ಮಾನದಿಂದ ಕೆಲವರಿಗೆ ಖುಷಿಯಾಗಿದ್ದರೆ, ಮತ್ತೆ ಕೆಲವರಿಗೆ ಬೇಸರವಾಗಿದೆ.