ಸುದ್ದಿ

ಈ ಸಮ್ಮಿಶ್ರ ಸರ್ಕಾರಕ್ಕಿಂತ ಕುಮಾರಸ್ವಾಮಿ ಸರ್ಕಾರ ಸಾವಿರ ಪಟ್ಟು ಒಳ್ಳೆಯದು – ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಎಂ.ಬಿ ಪಾಟೀಲ್- ಇದಕ್ಕೆ ನಿಮ್ಮ ಉತ್ತರ.!

By admin

September 26, 2019

ಸಮ್ಮಿಶ್ರ ಸರ್ಕಾರದಲ್ಲಿ ತಪ್ಪುಗಳಾಗಿವೆ ಅದು ಜೆಡಿಎಸ್ ಸರ್ಕಾರದ ಸಚಿವರು ಹಾಗೂ ಶಾಸಕರಿಂದ ಆಗಿವೆ ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಬುಧವಾರ ಹೇಳಿದರು. ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರ ನಿನ್ನೆ ಹದ್ದು ಗಿಣಿ ಟ್ವೀಟ್​ಗೆ ಬಗ್ಗೆ ಕಾಗವಾಡ ಮತಕ್ಷೇತ್ರದ ಮಂಗಸೂಳಿ ಗ್ರಾಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇದ್ದಾಗೊಂದು, ಇಲ್ಲದಾಗೊಂದು ಹೇಳಿಕೆ ಸರಿಯಲ್ಲ, 14 ತಿಂಗಳು ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಮಾತನ್ನು ಹೇಳಬೇಳಕಿತ್ತು. ಆಗ ಹೇಳಿದರೆ ಒಂದು ಬೆಲೆ ಇರ್ತಿತ್ತು. ಆದರೆ, ಅವರು ಈಗ ಹೇಳುವುದನ್ನು ಬಿಡಬೇಕು. ನಮ್ಮ ಬೆಂಬಲದಿಂದ ಸರ್ಕಾರ ರಚಿಸಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ಎಂಬಿ ಪಾಟೀಲ್​ ಅವರು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಇನ್ನು ಬಿಜೆಪಿ ಸರ್ಕಾರ ನೆರೆ ಪರಿಹಾರಕ್ಕೆ ಒಂದೇ ಒಂದು ರೂಪಾಯಿ ಹಣ ಇಲ್ಲಿತನಕ ಬಿಡುಗಡೆ ಮಾಡಿಲ್ಲ, ಈ ಸರ್ಕಾರ ನೋಡಿದ್ರೆ ಕುಮಾರಸ್ವಾಮಿ ಸರ್ಕಾರ ಸಾವಿರ ಪಟ್ಟು ಒಳ್ಳೆಯದು ಎಂದ ಅವರು, ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಏಜೆಂಟ್ ಆಗಿ ಕಾರ್ಯ ನಿರ್ವಸುತ್ತಿರುವುದು ನಿಶ್ಚಿತವಾಗಿದೆ ಜೊತೆಗೆ ಇಡಿ, ಐಟಿ ಕೂಡ ಕೇಂದ್ರದ ಕೈಗೊಂಬೆಯಾಗಿದೆ ಎಂದರು.

ಅಂತೆಯೇ ಇತ್ತೀಚಿಗೆ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರದ ಅನುದಾನ ಬೇಡ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತೇಜಸ್ವಿ ಸೂರ್ಯ ಒಬ್ಬ ಮೂರ್ಖ ಮನುಷ್ಯ. ಸೋಸಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಹೋಗುತ್ತಾರೆ ಎಂದು ಎಂಬಿ ಪಾಟೀಲ್​ ಅವರು ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಅಷ್ಟೇ ಅಲ್ಲದೇ, ಕೇಂದ್ರ ಸರ್ಕಾರ, ವಿಪತ್ತು ಪರಿಹಾರ ಎಂದರೆ ಏನು ಗೊತ್ತಿದೆಯಾ(?) ಪ್ರಬದ್ಧತೆ ಇಲ್ಲದವರು. ರಾಜ್ಯದ ಸಂಸದರಾಗಿ ಹೆಚ್ಚಿನ ಅನುದಾನ ತರುತ್ತೇನೆ ಎಂದು ಹೇಳಬೇಕು. ಅದು ಬೆಳಗಾವಿಯಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ, ಆದಷ್ಟು ಬೇಗನೆ ಸಂತ್ರಸ್ಥರಿಗೆ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಇದು ಕಪ್ಪು ಚುಕ್ಕೆಯಾಗುತ್ತದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಆಗ್ರಹಿಸಿದರು.