ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ.
ಮನೆಯಲ್ಲಿಯೇ ಅಡುಗೆ ಮಾಡಿ ತಿಂದರೆ ಮತ್ತು ಊಟ, ತಿಂಡಿ ಮಾಡುವಾಗ ಟಿವಿ, ವಿಡಿಯೋಗಳನ್ನು ವೀಕ್ಷಿಸದವರಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು ಕಡಿಮೆ ಎನ್ನುತ್ತದೆ ಅಧ್ಯಯನವೊಂದು. ಅಮೆರಿಕಾದ ಒಹಿಯೊ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು 12,842 ಮಂದಿ ಮೇಲೆ ಅಧ್ಯಯನ ನಡೆಸಿದ್ದರು. ಅಧ್ಯಯನಕ್ಕೊಳಪಟ್ಟವರು ತಮ್ಮ ಸಂದರ್ಶನಕ್ಕೆ ಮುನ್ನ ವಾರಕ್ಕೊಮ್ಮೆಯಾದರೂ ಕುಟುಂಬದವರ ಜೊತೆ ಸೇರಿ ಊಟ ಮಾಡುತ್ತಿದ್ದರು.
ಸ್ಥೂಲಕಾಯ 30 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಲ್ಲಿ ಕಾಣುವ ಭೌತಿಕ ದ್ರವ್ಯರಾಶಿ ಸೂಚಿ .ಇದನ್ನು ವ್ಯಕ್ತಿಯ ಎತ್ತರದ ಆಧಾರದ ಮೇಲೆ ತೂಕವನ್ನು ಅಳೆಯಲಾಗುತ್ತದೆ. ಅಧ್ಯಯನಕ್ಕೊಳಪಟ್ಟ ವಯಸ್ಕರಲ್ಲಿ, ಕುಟುಂಬದವರ ಜೊತೆ ಸೇರಿ ಊಟ ಮಾಡುವಾಗ ಟಿವಿ, ವಿಡಿಯೋ ವೀಕ್ಷಣೆ ಮಾಡದೆ ಆಹಾರದ ಮೇಲೆ ಗಮನ ನೀಡಿ, ಅಕ್ಕಪಕ್ಕದವರ ಜೊತೆ ಮಾತನಾಡುತ್ತಾ ತಿಂದರೆ ಸ್ಥೂಲಕಾಯ ಸಮಸ್ಯೆ ಕಡಿಮೆ ಕಾಣಿಸಿಕೊಳ್ಳುತ್ತದೆ.
ಅಲ್ಲದೆ ಹೊರಗಿನ ಆಹಾರವನ್ನು ಆದಷ್ಟು ಕಡಿಮೆ ಮಾಡಿ ಮನೆಯಲ್ಲಿ ತಯಾರಿಸಿದ ಆಹಾರ ತಿಂದರೆ ಕೂಡ ಬೊಜ್ಜು ಉಂಟಾಗುವ ಸಾಧ್ಯತೆ ಕಡಿಮೆ. ಕುಟುಂಬದವರ ಜೊತೆ ಎಷ್ಟು ಸಲ ತಿನ್ನುತ್ತೀರಿ ಎಂಬುದು ಮುಖ್ಯವಾಗುವುದಿಲ್ಲ ಬದಲಿಗೆ ಆಹಾರ ತಿನ್ನುವಾಗ ಎಷ್ಟು ತಿನ್ನುತ್ತೀರಿ, ಏನು ತಿನ್ನುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ ಎಂದು ಒಹಿಯೊ ರಾಜ್ಯ ವಿಶ್ವವಿದ್ಯಾಲಯದ ರಚೆಲ್ ಟುಮಿನ್ ಹೇಳುತ್ತಾರೆ.
ಹೆಚ್ಚಾಗಿ ಹೊರಗಿನ ಹೊಟೇಲ್ ಆಹಾರ ತಿನ್ನುವವರಲ್ಲಿ ಸ್ಥೂಲಕಾಯದ ಸಮಸ್ಯೆ ಅಧಿಕವಾಗಿ ಕಂಡುಬರುತ್ತದೆ. ಮನುಷ್ಯನ ಜೀವನಶೈಲಿಯೂ ಕಾರಣವಾಗುತ್ತದೆ ಎಂದು ಒಹಿಯೊ ರಾಜ್ಯ ವಿಶ್ವವಿದ್ಯಾಲಯದ ಸರಹ್ ಆಂಡೆರ್ಸನ್ ಹೇಳುತ್ತಾರೆ. ಅಕಾಡೆಮಿ ಆಫ್ ನ್ಯೂಟ್ರಿಶನ್ ಅಂಡ್ ಡಯಟೆಟಿಕ್ಸ್ ಪತ್ರಿಕೆಯಲ್ಲಿ ಅಧ್ಯಯನ ಪ್ರಕಟವಾಗಿದೆ.