ಜೀವನಶೈಲಿ

ಊಟದ ನಂತರ ಹೀಗೆ ಮಾಡಿದರೆ ದಾರಿದ್ಯ ಆವರಿಸಿ ಒಂದು ಹೊತ್ತು ಊಟಕ್ಕೂ ಕಷ್ಟ ಪಡುವಂತಹ ಸ್ಥಿತಿ ಬರುತ್ತದೆ..!

By admin

December 27, 2018

ನಮ್ಮ ಹಿಂದೂ ಧರ್ಮದಲ್ಲಿ ಎಲ್ಲಾ ಶಾಸ್ತ್ರ ಸಂಪ್ರದಾಯಗಳ ಹಿಂದಿಯು ಒಂದು ವೈಜ್ಞಾನಿಕ ಕಾರಣ ಅಥವಾ ಒಂದು ಮಹತ್ತರವಾದ ಉದ್ದೇಶ ಇರುತ್ತದೆ.  ಹಾಗೆಯೇ ನಾವು ಊಟ ಮಾಡುವುದಕ್ಕೂ ಒಂದಷ್ಟು ವಿಧಿ-ವಿಧಾನ  ಪದ್ಧತಿಗಳಿವೆ.

ನಮ್ಮ ಸಂಪ್ರದಾಯದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು ರೂಢಿ. ಊಟಕ್ಕಾಗಿ ಬಾಳೆ ಎಲೆ ಇಲ್ಲವೇ ಬೆಳ್ಳಿಯ ಅಥವಾ ಚಿನ್ನದ ತಟ್ಟೆಯನ್ನು ಬಳಸುತ್ತಾರೆ. ಇದರ ಹಿಂದೆಲ್ಲ ಒಂದು ಮಹತ್ವವಿದೆ. ಹಾಗೆಯೇ, ನಾವು ಊಟ ಮಾಡಿದ ಬಳಿಕ ಕೆಲವೊಂದು ತಪ್ಪುಗಳನ್ನು ಮಾಡ ಬಾರದು. ಹೀಗೆ ಮಾಡಿದಲ್ಲಿ ನಮಗೆ ಕೆಡುಕು ಉಂಟಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ.ಆ ತಪ್ಪುಗಳು ಯಾವುವೆಂದರೆ,

ಊಟ ಮಾಡಿದ ನಂತರ ನಾವು ತಿಂದ ತಟ್ಟೆಯಲ್ಲೇ ಕೈ ತೊಳೆಯುವುದು.

ನಾವು ಊಟದ ನಂತರ ತಟ್ಟೆಯಲ್ಲೇ ಕೈ  ತೊಳೆಯ ಬಾರದು. ಏನಿದ್ದರು ಊಟ ಮುಗಿಸಿ ಎದ್ದು ಹೋಗಿ ಕೈ ತೊಳೆಯುವ ಸ್ಥಳದಲ್ಲೇ ಕೈ ತೊಳೆದುಕೊಳ್ಳಬೇಕು. ಇಲ್ಲವಾದರೆ ಈ ಅಭ್ಯಾಸ ನಮಗೆ ಒಳ್ಳೆಯದಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.

ನಾವು ಊಟದ ನಂತರ ಕೈ ತೊಳೆದ ನೀರನ್ನು ಬೇರೆಯವರ ಮೇಲೆ ಚಿಮುಕಿಸುವುದು.

ಊಟದ ನಂತರ ಕೈತೊಳೆದ ನೆರನ್ನು ಬೇರೆಯವರಿಗೆ ಅಥವಾ ಅಡುಗೆ ಪಾತ್ರೆಗಳು ಸೇರಿದಂತೆ ಇರತೆ ವಸ್ತುಗಳ ಮೇಲೆ ಚುಮಿಕಿಸುವುದು ದಾರಿದ್ರ ವನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ.

ಊಟ ಮಾಡಿ ಅಲ್ಲೇ ತಟ್ಟೆಯ ಪಕ್ಕದಲ್ಲೇ ಮಲಗಿಕೊಳ್ಳುವುದು.

ಯಾವತ್ತು ನಾವು ಊಟ ಮಾಡುವ ಸ್ಥಳದಲ್ಲೇ ಊಟ ಮಾಡಬೇಕು. ಊಟ ಮಾಡಿದ ನಂತರ ಅಲ್ಲೇ ಪಕ್ಕದಲ್ಲೇ ನಿದ್ರೆಗೆ ಜಾರುವುದು ಒಳಿತಲ್ಲ. ಇದು ಅಶುಭದಾಯಕವಾದದ್ದು.

ಊಟ ಮಾಡಿದ ತಟ್ಟೆಯಲ್ಲೇ ಉಗುಳುವುದು.

ಯಾವುದೇ ಕಾರಣಕ್ಕೂ ನಾವು ಊಟ  ಮಾಡಿದ ತಟ್ಟೆಯಲ್ಲೇ ಬಾಯಿ ಮುಕ್ಕಳಿಸಿ ಅಥವಾ ಯಾವುದೋ ಕಾರಣಕ್ಕೆ ಉಗಳಬಾರದು. ಹೇಗೆ ಮಾಡುವುದರಿಂದ ದಟ್ಟ ದಾರಿದ್ರ್ಯ ಆವರಿಸುತ್ತದೆ ಎಂದು ಹೇಳಲಾಗಿದೆ.ಈ ಮೇಲಿನ ಎಲ್ಲಾ ಕೆಟ್ಟ ಅಭ್ಯಾಸಗಳು ನಮ್ಮ ಆರೋಗ್ಯಕ್ಕೂ ಹಾನಿ ಉಂಟುಮಾಡಿ ದಟ್ಟ ದಾರಿದ್ರ್ಯಕ್ಕೆ ಕಾರಣವಾಗುತ್ತವೆ.