inspirational

ಉಬ್ಬಸ ಸಮಸ್ಯೆಗೆ ಮನೆ ಮದ್ದು

By DRM

May 20, 2021

ಸಮಸ್ಯೆಯುಳ್ಳ ರೋಗಿಗಳು ಸಾಮಾನ್ಯವಾಗಿ ಇನ್ಹೇಲರ್ ಬಳಕೆ ಮಾಡುತ್ತಾರೆ. ಅಥವಾ ವೈದ್ಯರ ಸಲಹೆ ಮೇರೆಗೆ ಹಲವು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇನ್ಹೇಲರ್ ಬಳಸದೆ ಮನೆಯಲ್ಲೇ ಉಬ್ಬಸದ ತೊಂದರೆಯನ್ನು ನಿವಾರಿಸಲು ಹಲವು ಮಾರ್ಗಗಳಿವೆ. ಈ ಪೈಕಿ, ಪ್ರಮುಖ ಅಥಾ ಸುಲಭವಾದ 6 ವಿಧಾನಗಳ ಮೂಲಕ ಉಬ್ಬಸ ಸಮಸ್ಯೆಗೆ ನಿವಾರಣೆ ಮಾಡಿಕೊಳ್ಳಬಹುದು. ಅದು ಹೇಗೆ ಗೊತ್ತಾ? ಈ ಕೆಳಗಿನ ವಿವರ ನೋಡಿದರೆ ನಿಮಗೆ ಗೊತ್ತಾಗುತ್ತದೆ.

ನೀಲಗಿರಿ ಎಣ್ಣೆಯಲ್ಲಿದೆ ಪರಿಹಾರಬಿಸಿ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆ ಹಾಕಿ ಅದರ ಆವಿಯನ್ನು ಉಸಿರಾಟದ ಮೂಲಕ ದೇಹದೊಳಕ್ಕೆ ಎಳೆದುಕೊಂಡರೆ ಉಬ್ಬಸ ಸಮಸ್ಯೆಗೆ ಉತ್ತಮ ಪರಿಣಾಮ ಬೀರುತ್ತದೆ.

ಬಿಸಿ ನೀರಿನಿಂದ ಶವರ್‌ ಬಾತ್‌ ಮಾಡಿಉಸಿರಾಡಲು ಕಷ್ಟವಾದಾಗ ಬಿಸಿ ನೀರಿನಿಂದ ಶವರ್‌ ಬಾತ್‌ ಮಾಡಿದರೆ ಉಬ್ಬಸದ ತೊಂದರೆಯಿಂದ ರಿಲ್ಯಾಕ್ಸ್‌ ಅನಿಸುತ್ತದೆ.

ಉಗುರು ಬೆಚ್ಚನೆಯ ನೀರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಕುಡಿದರೆ ಸಾಕು ಉಸಿರಾಟ ಸರಾಗವಾಗುತ್ತದೆ. ಇದರಿಂದ ಉಬ್ಬಸ ಸಮಸ್ಯೆಯಿಂದ ರಿಲೀಫ್‌ ನೀಡುತ್ತದೆ.

– ಆ್ಯಪಲ್‌ ಸೈಡರ್‌ ವಿನೆಗರ್‌ನಿಂದ ಉಬ್ಬಸ ತೊಂದರೆಗೆ ಮುಕ್ತಿಬಿಸಿ ನೀರಿಗೆ ಎರಡು ಟೇಬಲ್‌ ಸ್ಪೂನ್‌ ಆ್ಯಪಲ್‌ ಸೈಡರ್‌ ವಿನೆಗರ್‌ ಮತ್ತು ಒಂದು ಟೇಬಲ್‌ ಸ್ಪೂನ್‌ ಜೇನುತುಪ್ಪ ಬೆರೆಸಿ ಆಗಾಗ ಕುಡಿದರೆ ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ. ಇದರಿಂದ ಉಬ್ಬಸದ ತೊಂದರೆ ಕಡಿಮೆಯಾಗುವುದು.

ಉಬ್ಬಸ ಸಮಸ್ಯೆಗೆ ಶುಂಠಿ ಪರಿಣಾಮಕಾರಿಉಬ್ಬಸ ಸಮಸ್ಯೆಗೆ ಶುಂಠಿ ತುಂಬಾ ಒಳ್ಳೆಯದು. ಇದರಲ್ಲಿರುವ ಉರಿ ನಿರೋಧಕ ಗುಣ ಉಸಿರಾಟಕ್ಕೆ ಇರುವ ಅಡೆತಡೆಗಳನ್ನು ದೂರ ಮಾಡುತ್ತದೆ. ಎದೆಯಲ್ಲಿ ಉಂಟಾಗುವ ಬಿಗಿತವನ್ನು ಇದು ಕಡಿಮೆ ಮಾಡುತ್ತದೆ. ಜತೆಗೆ, ಶುಂಠಿ ಹಾಕಿದ ಹರ್ಬಲ್‌ ಚಹಾ ಮತ್ತು ಬಿಸಿ ಬಿಸಿ ಸೂಪ್‌ ಕುಡಿದರೂ ಸಹ ಉಬ್ಬಸದ ಸಮಸ್ಯೆ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿಯಿಂದಲೂ ಉಬ್ಬಸ ಸಮಸ್ಯೆಗೆ ಪರಿಹಾರ– ಒಂದು ಕಪ್‌ ಹಾಲು ಅಥವಾ ನೀರಿನಲ್ಲಿ ಬೆಳ್ಳುಳ್ಳಿಯ ನಾಲ್ಕು ಎಸಳುಗಳನ್ನು ಬೇಯಿಸಿ. ಈ ನೀರನ್ನು ಪ್ರತಿದಿನ ಎರಡು ಮೂರು ಬಾರಿ ಕುಡಿದರೆ ಉಬ್ಬಸದ ತೊಂದರೆ ಕಡಿಮೆಯಾಗುವುದು ಎಂದು ತಜ್ಞರು ಹೇಳುತ್ತಾರೆ.

published by

Mayoon N / Biotechnologist / DRM Career Build Center , Kolar