ದೇಶ-ವಿದೇಶ

ಉತ್ತರ ಪ್ರದೇಶದಲ್ಲಿ ತಲೆ ಎತ್ತಲಿದೆ, ಮೋದಿಯ ಅತೀ ಎತ್ತರವಾದ ಪ್ರತಿಮೆ ಮತ್ತು ಮಂದಿರ..!ಹೇಗಿದೆ ಗೊತ್ತಾ ಪ್ರತಿಮೆ?ತಿಳಿಯಲು ಮುಂದೆ ಓದಿ…

By admin

October 12, 2017

ಪ್ರಧಾನಿ ನರೆಂದ್ರ ಮೋದಿಯವರ 1೦೦ ಅಡಿ ಎತ್ತರದ ಪ್ರತಿಮೆ ಮತ್ತು 3೦ ಕೋಟಿ ರೂಪಾಯಿ ವೆಚ್ಚದ ಮಂದಿರ ನಿರ್ಮಿಸಲು ಉತ್ತರ ಪ್ರದೇಶದ ಮೀರತ್‌ನಲ್ಲಿ ನಿವೃತ್ತ ಅಧಿಕಾರಿಯೋರ್ವರು ಮುಂದಾಗಿದ್ದಾರೆ.

ಇಂತಹದ್ದೊಂದು ಕಾರ್ಯಕ್ಕೆ ಕೈಹಾಕಿರುವುದು ಉತ್ತರ ಪ್ರದೇಶದ ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್  ಜೆಪಿ ಸಿಂಗ್ ಎಂಬುವವರು. ಮೀರತ್‌ನ ಸರ್ಧಾನ್ ನಲ್ಲಿ ಪ್ರಧಾನಿ ಮೋದಿ ಅವರ 1೦೦ ಅಡಿ ಎತ್ತರದ ಪ್ರತಿಮೆ ಮತ್ತು 3೦ ಕೋಟಿ ರೂಪಾಯಿ ವೆಚ್ಚದ ದೇವಸ್ಥಾನ ಕಟ್ಟಲು ಮುಂದಾಗಿದ್ದಾರೆ.

ಪ್ರತಿಮೆ ಹಾಗೂ ದೇವಸ್ಥಾನ ನಿರ್ಮಾಣ ಅಕ್ಟೋಬರ್ 23 ರಂದು ಭೂಮಿಪೂಜೆ ನೆರವೇರುವ ಸಾಧ್ಯತೆ. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಭಾಗವಹಿಸುವ ನಿರೀಕ್ಷೆ ಇದೆ.

ನಾನು ಮೋದಿ ಅಭಿಮಾನಿಯಾಗಿದ್ದು, ದಶಕಗಳಿಂದಲೂ ಮೋದಿ ಅವರ ನೀತಿಗಳು ನನಗೆ ಇಷ್ಟ. ನಾನು ಉದ್ಯೋಗದಲ್ಲಿದ್ದಾಗಲೂ ಅವರನ್ನು ಇಷ್ಟಪಟ್ಟಿದ್ದೇನೆ. ಅವರಿಗಾಗಿ ನಾನು ಏನಾದ್ರೂ ಮಾಡಬೇಕೆಂಬ ನಿಟ್ಟಿನಲ್ಲಿ ಈ ಯೋಜನೆ ಹಾಕಿಕೊಂಡಿದ್ದೇನೆ. ಪ್ರತಿಮೆ ಮತ್ತು ದೇವಸ್ಥಾನ ನಿರ್ಮಾಣವನ್ನು ೨ವರ್ಷ ಗಳಲ್ಲಿ ಪೂರ್ಣಗೊಳಿಸುವ ಇಚ್ಛೆ ಇದೆ ಎಂದು ಜೆ ಪಿ ಸಿಂಗ್ ಹೇಳಿದ್ದಾರೆ.