ನಾವು ದಿನವೂ ಉಪಯೋಗಿಸುವ ತರಕಾರಿಗಳಲ್ಲಿ ಬೆಂಡೆಕಾಯಿಯೂ ಒಂದು. ಇದು ಋತುಮಾನಗಳೊಂದಿಗೆ ಸಂಬಂಧವಿಲ್ಲದೆ ಯಾವಾಗಲೂ ದೊರೆಯುತ್ತದೆ. ಇದರಿಂದ ಪಲ್ಯ, ಬೆಂಡೆಕಾಯಿ ಫ್ರೈ, ಗೊಜ್ಜು, ಹುಳಿ ಎಲ್ಲವನ್ನೂ ಮಾಡಿಕೊಂಡು ತಿನ್ನುತ್ತೇವೆ. ಬೆಂಡೆಕಾಯಿಯಿಂದ ಯಾವುದೇ ರೀತಿಯ ಅಡುಗೆ ಮಾಡಿದರೂ ರುಚಿಕರವಾಗಿರುತ್ತದೆ.
ನಮ್ಮ ಆರೋಗ್ಯವನ್ನು ರಕ್ಷಿಸುವ ಕೆಲವು ಗುಣಗಳೂ ಸಹ ಬೆಂಡೆಕಾಯಿಯಲ್ಲಿವೆ. ಅದೇರೀತಿ ಕೆಲವು ರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಬೆಂಡೆಕಾಯಿ ಉಪಯೋಗಿಸುವುದರಿಂದ ನಮಗಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಎರಡು ಬೆಂಡೆಕಾಯಿಗಳನ್ನು ಚೆನ್ನಾಗಿತೊಳೆಯಿರಿ. ಎರಡೂ ಕೊನೆಗಳನ್ನು ಕತ್ತರಿಸಿ ತೆಗೆಯಿರಿ. ಆನಂತರ ಉದ್ದಕ್ಕೆ ಸೀಳಿರಿ. ನಂತರ ಒಂದು ಗ್ಲಾಸ್ ನೀರಿನಲ್ಲಿ ಈ ಎರಡೂ ಬೆಂಡೆಕಾಯಿಗಳನ್ನು ಹಾಕಿ ಮುಚ್ಚಳ ಮುಚ್ಚಿ. ರಾತ್ರಿಯೆಲ್ಲಾ ಹಾಗೇ ಬಿಟ್ಟು ಬೆಳಿಗ್ಗೆ ಖಾಲೀ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸಿ. ಈ ರೀತಿ ತಯಾರಿಸಿದ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.
- ಕರುಳು, ಜೀರ್ಣಾಶಯ ಶುಭ್ರವಾಗುತ್ತದೆ. ಒಂದು ವೇಳೆ ಅಲ್ಸರ್ ಇದ್ದಲ್ಲಿ ಕಡಿಮೆಯಾಗುತ್ತದೆ. ಗ್ಯಾಸ್, ಅಸಿಡಿಟಿ, ಮಲಬದ್ಧತೆ ದೂರವಾಗುತ್ತವೆ.
2.ಫೈಬರ್, ವಿಟಮಿನ್ E, C, K, ಮೆಗ್ನೀಷಿಯಂ, ಫಾಸ್ಫರಸ್ ಹೇರಳವಾಗಿ ದೊರೆಯುತ್ತವೆ. ಇದರಿಂದಾಗಿ ದೇಹಕ್ಕೆ ಒಳ್ಳೆಯ ಪೋಷಕಾಂಶಗಳು ದೊರೆಯುತ್ತವೆ.
- ರಕ್ತ ಪ್ರಸಾರ ಹೆಚ್ಚುತ್ತದೆ. ಹೃದಯದ ಕಾರ್ಯ ವೈಖರಿ ಚೆನ್ನಾಗಿರುತ್ತದೆ. ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.
- ಮಧುಮೇಹ ರೋಗ ಗುಣವಾಗುತ್ತದೆ. ರಕ್ತದಲ್ಲಿರುವ ಸಕ್ಕರೆಯ ಅಂಶ ಹತೋಟಿಯಲ್ಲಿರುತ್ತದೆ.
- ಮೂಳೆಗಳು ಗಟ್ಟಿಗೊಳ್ಳುತ್ತವೆ. ಸ್ತ್ರೀಯರಿಗೆ ಋತು ಸಮಯದಲ್ಲಿ ಉಂಟಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ.
- ಅಧಿಕ ಉಷ್ಣ ಶರೀರವುಳ್ಳವರು ಈ ನೀರನ್ನು ಕುಡಿದರೆ, ಶರೀರದ ಉಷ್ಣತೆ ಕಡಿಮೆಯಾಗುತ್ತದೆ.
- ದೇಹದಲ್ಲಿರುವ ಅಧಿಕ ಕೊಬ್ಬು ಕರಗಿ, ದೇಹದ ತೂಕ ಕಡಿಮೆಯಾಗುತ್ತದೆ.
- ಚರ್ಮ ಕಾಂತಿಯುತವಾಗುತ್ತದೆ. ಕೂದಲು ದೃಡವಾಗಿ, ಒತ್ತಾಗಿ ಬೆಳೆಯುತ್ತವೆ.
- ಶರೀರದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ. ಕಣ್ಣಿನ ದೃಷ್ಟಿ ತಿಕ್ಷ್ಣವಾಗುತ್ತದೆ…