ಸ್ಪೂರ್ತಿ

ಉಚಿತ ಚಿಕಿತ್ಸೆ ಕೊಟ್ಟು ಬಡವರ ಪಾಲಿಗೆ ದೇವರಂತಾಗಿರುವ ಡಾ.ರಮಣರಾವ್..!ತಿಳಿಯಲು ಈ ಲೇಖನ ಓದಿ..

By admin

March 12, 2018

ಡಾಕ್ಟರ್ ಅಂದ್ರೆ ಸಾಕು ಜನ ಮೂಗು ಮುರಿತಾರೆ. ಆಸ್ಪತ್ರೆಗಳು ಸುಮಸುಮ್ಮನೆ ಇಲ್ಲ ಸಲ್ಲದ ಟಾರ್ಜ್ ಹಾಕಿ ಟ್ರೀಟ್ಮೆಂಟ್ ಹೆಸರಲ್ಲಿ ಹಣ ಪೀಕುತ್ತಾರೆ. ಇನ್ನು ವೈದ್ಯರೋ ಹೇಳಂಗಿಲ್ಲ. ಒಂದಲ್ಲ ಒಂದು ರೋಗದ ಬಗ್ಗೆ ಹೇಳಿ ಹೆದರಿಸ್ತಾರೆ. ಧನರಾಕ್ಷಸರಾಗಿದ್ದಾರೆ ಅಂತ ಜನರಲ್ಲಿ ಅಚ್ಚಾಗಿದೆ. ಆದರೆ ಈ ಅಭಿಪ್ರಾಯಗಳಿಗೆ ತದ್ವಿರುದ್ಧವಾಗಿದ್ದಾರೆ ಡಾ.ರಮಣರಾವ್.

700-1200 ಜನ ರೋಗಿಗಳು ಆಗಮಿಸಿ ಫ್ರೀ ಟ್ರಿಟ್ಮೆಂಟ್ ತಗೊಳ್ತಾರೆ. ಡಾ.ರಮಣರಾವ್ ಅವರ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯಲು ಬೆಂಗಳೂರಿನ 100 ಕಿಲೋಮೀಟರ್ ಆಲುಪಾಸಿನಲ್ಲಿರುವವರು ಬರುತ್ತಾರೆ. ಅದೂ ಕೂಡಾ ಶನಿವಾರ ರಾತ್ರಿಯಿಂದಲೇ ಇವರ ಕ್ಲಿನಿಕ್ ಎದುರು ಕ್ಯೂ ಆರಂಭವಾಗಿರುತ್ತದೆ. ಇನ್ನು ಡಾ.ರಮಣರಾವ್, ಶಾಲೆಗಳಿಗೂ ತೆರಳಿ ಮಕ್ಕಳಿಗಾಗಿ ಉಚಿತ ಆರೋಗ್ಯ ಸೇವೆ ಕಲ್ಪಿಸುತ್ತಿದ್ದಾರೆ.

1974 ರಲ್ಲಿ ಬಡವರಿಗೆಂದೇ ಬೆಂಗಳೂರಿನ ಬೇಗುರ್ ನಲ್ಲಿ ಉಚಿತ ಕ್ಲಿನಿಕ್ ಓಪನ್ ಮಾಡಿರುವ ಡಾ.ರಮಣರಾವ್, ಸತತ 43 ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದಾರೆ. ಈ ಕ್ಲಿನಿಕ್ ನಡೆಸಲು ಡಾ.ರಮಣರಾವ್, ವಾರಕ್ಕೆ 2 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. ಇವರ ಪುತ್ರರಾದ ಡಾ.ಚರಿತ್ ಭೋಜರಾಜ್ ಮತ್ತು ಡಾ.ಅಭಿಜಿತ್ ಭೋಜರಾಜ್ ಕೂಡಾ ಗ್ರಾಮೀಣ ಜನರ ಸೇವೆ ಮಾಡುತ್ತಿದ್ದಾರೆ.

ಈ ಉಚಿತ ಕ್ಲಿನಿಕ್ ನಲ್ಲಿ 10 ಜನ ಡೆಂಟಿಸ್ಟ್, ಚರ್ಮ ರೋಗ ತಜ್ಞರು ಸೇರಿದಂತೆ ಒಟ್ಟು 25 ಜನ ಸಿಬ್ಬಂದಿಯಿದ್ದಾರೆ. ಅಲ್ಲದೇ ಡಾ.ರಮಣರಾವ್, ಕ್ಲಿನಿಕ್ ಗೆ ಆಗಮಿಸುವ ರೋಗಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಕಲ್ಪಿಸಿಕೊಟ್ಟಿದ್ದಾರೆ. ಸಧ್ಯ ಡಾ.ರಮಣರಾವ್ ಅವರ ಕಾರ್ಯಕ್ಕೆ ಹಿಮಾಲಯ ಮತ್ತು ಮೈಕ್ರೋಲ್ಯಾಬ್ ಸಹಾಯ ಮಾಡುತ್ತಿದೆ.

ಸುತ್ತಮುತ್ತಲ ಪ್ರದೇಶದಲ್ಲಿ 7000 ಶೌಚಾಲಯ ನಿರ್ಮಿಸಿದ್ದಾರೆ. 60 ಹಳ್ಳಿಗಳಿಗೆ ಸಹಾಯವಾಗುವಂತೆ ನಾಲ್ಕು ಬೋರ್ ವೆಲ್ ಗಳನ್ನು ಕೊರೆಸಿದ್ದಾರೆ. ನಗರದಲ್ಲಿ 50 ಶಾಲೆಗಳನ್ನು ದತ್ತು ಪಡೆದಿದ್ದು, ಮಕ್ಕಳಿಗೆ ಯೂನಿಫಾರ್ಮ್, ಬುಕ್ಸ್ ಅನ್ನು ನೀಡುತ್ತಿದ್ದಾರೆ. ಡಾ.ರಮಣರಾವ್ ಅವರ ವೈದ್ಯಕೀಯ ಸೇವೆಗೆ ಮೆಚ್ಚಿ 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.