ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದಾರೆ. ಈ ಯೋಜನೆ ಮೂಲಕ ಐದು ಕೋಟಿ ಎಲ್ಪಿಜಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂದರೇನು?
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಕ್ಕೆ 1,600 ಸಹಾಯಧನ ನೀಡಲಾಗುತ್ತದೆ. ಆದ್ದರಿಂದ ಎಲ್‌ಪಿಜಿ ಸಂಪರ್ಕ ಪಡೆಯಲು ಹಣ ನೀಡುವ ಅಗತ್ಯವಿಲ್ಲ. ಆದರೆ ಬಳಿಕ ಬಳಸುವ ಸಿಲಿಂಡರ್‌ಗಳಿಗೆ ಹಣ ನೀಡಬೇಕಾಗುತ್ತದೆ.
ಹಾಗಾದ್ರೆ ಈ ಯೋಜನೆಯನ್ನು ಉಚಿತವಾಗಿ ಪಡೆದುಕೊಳ್ಳುವ ಬಗೆ ಹೇಗೆ ಮತ್ತು ಯಾರೆಲ್ಲಾ ಈ ಯೋಜನೆಗೆ ಅರ್ಹರು ತಿಳಿಯಲು ಮುಂದೆ ಓದಿ…
ಅರ್ಹತೆ ಮಾನದಂಡ ಏನು?
- ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಹರಾಗಿದ್ದು, 18 ವರ್ಷ ಮೇಲ್ಪಟ್ಟಿರಬೇಕು.
- ರಾಜ್ಯಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ನೀಡುವ ಬಿಪಿಎಲ್ ಕಾರ್ಡ್’ನ್ನು ಹೊದಿರಬೇಕು.
ನೊಂದಾಯಿಸುವ ಸಮಯದಲ್ಲಿ ಈ ದಾಖಲಾತಿಗಳನ್ನು ಸಲ್ಲಿಸಬೇಕು…
- ಆಧಾರ್ ಕಾರ್ಡ್, ಎಲೆಕ್ಷನ್ ಕಾರ್ಡ್, ಅಥವಾ ಚಾಲನಾ ಪರವಾನಿಗೆ ಪತ್ರ ಇವುಗಳಲ್ಲಿ ಯಾವುದಾದರು ಒಂದು ನಕಲು ಪ್ರತಿಯನ್ನು ಒದಗಿಸಬೇಕು.
- ರಾಜ್ಯಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುವ . ಬಿಪಿಎಲ್ ಕಾರ್ಡ್’ನ್ನು ಒದಗಿಸಬೇಕು.
- ಅಡ್ರೆಸ್ ಪ್ರೂಫ್’ಗಾಗಿ ಆಧಾರ್ ಕಾರ್ಡ್, ಎಲೆಕ್ಷನ್ ಕಾರ್ಡ್, ಅಥವಾ ಚಾಲನಾ ಪರವಾನಿಗೆ ಪತ್ರ ಇವುಗಳಲ್ಲಿ ಯಾವುದಾದರೊಂದು ಒದಗಿಸಬೇಕು.
- ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಹ ಕೊಡಬೇಕಾಗುತ್ತದೆ.
ಇಷ್ಟೆಲ್ಲಾ ಇದ್ರೂ ಎಲ್ಪಿಜಿ ಸಂಪರ್ಕ ಪಡೆಯುವುದು ಹೇಗೆ ಗೊತ್ತಾ?
ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಿಪಿಎಲ್ ಕುಟುಂಬಗಳ ಪಟ್ಟಿ ಆನ್ಲೈನ್ ಮೂಲಕ ಲಭ್ಯವಾಗುವಂತೆ ಮಾಡಿವೆ.
ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಬಿಪಿಎಲ್ ಕಾರ್ಡ್ ಹೊದಿರುವವರು ಅಂದ್ರೆ ಬಡತನ ರೇಖೆಗಿಂತ ಕೆಳಗಿನವರು ಎಂದು ನೋಂದಾಯಿಸಲ್ಪಟ್ಟವರು ತಮ್ಮ ಬಿಪಿಎಲ್ ಕಾರ್ಡ್ ಅನ್ನು ಹತ್ತಿರದ ಎಲ್ಪಿಜಿ ವಿತರಕರಲ್ಲಿ ಉಚಿತ ಎಲ್ಪಿಜಿ ಸಿಲಿಂಡರ್ ಗಾಗಿ ನೋಂದಾಯಿಸಿಕೊಳ್ಳಬಹುದು.
ಇಲ್ಲಿ ಓದಿ :- “ಪ್ರಧಾನ ಮಂತ್ರಿ ಆವಾಸ್ ಯೋಜನೆ”ಯಲ್ಲಿ ಉಚಿತವಾಗಿ ಮನೆ ಪಡೆಯುವುದು ಹೇಗೆ..?
ಉಚಿತ ಯೋಜನೆಯಲ್ಲಿ ಏನೆಲ್ಲಾ ಸಿಗುತ್ತೆ?
* 14.2 ಕೆಜಿ
* ಗ್ಯಾಸ್ ಸ್ಟೋವ್,
* ISI ಸ್ಟಾಡಂರ್ಡ್ ಪೈಪ್ ಸಹ ನೀಡಲಾಗುತ್ತದೆ.
ಅರ್ಜಿ ಪಡೆದುಕೊಳ್ಳುವುದು ಹೇಗೆ?
ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಸಂಬಂಧಿತ ಅರ್ಜಿಯನ್ನು ಎಲ್ಪಿಜಿ ಹಂಚಿಕೆದಾರರು ಅಥವಾ ಅಂತರ್ಜಾಲದಿಂದ ಡೌನ್ಲೋಡ್ ಮಾಡಬಹುದು. ಈ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳು ಸಂಬಂಧಿತ ದಾಖಲಾತಿ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಸಲ್ಲಿಸಬೇಕಾಗುತ್ತದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಲಾಭಗಳು ಏನು?
- ದೇಶದ ಎಲ್ಲ ನಾಗರಿಕರಿಗೂ ಎಲ್ ಪಿಜಿ ಸಂಪರ್ಕ ಸಿಕ್ಕಿದಂತೆ ಆಗುತ್ತದೆ.
- ಅಡುಗೆ ಒಲೆಗಳಲ್ಲಿ ಬರುತ್ತಿದ್ದ ಹೊಗೆಯಿಂದ ಆಗುತ್ತಿದ್ದ ಮಹಿಳೆಯರ ಮೇಲಿನ ಅನಾರೋಗ್ಯದ ಪ್ರಮಾಣ ಕಡಿಮೆಯಾಗಲಿದೆ.
- ಹೊಗೆಯಿಂದ ಉದ್ಭವಿಸುವ ವಾಯು ಮಾಲಿನ್ಯ ನಿಯಂತ್ರಣ
- ಅಡುಗೆ ಮಾಡಲು ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಕಡಿಮೆಯಾಗಲಿದೆ.
- ಉಳ್ಳವರು ತ್ಯಜಿಸಿದ ಎಲ್ ಪಿಜಿ ಸಬ್ಸಿಡಿಯನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿದೆ.
- ನರೇಂದ್ರ ಮೋದಿ ಅವರ ಮಾತಿಗೆ ಬೆಲೆ ನೀಡಿ 1.13 ಕೋಟಿ ಜನ ಎಲ್ ಪಿಜಿ ಸಬ್ಸಡಿ ತ್ಯಜಿಸಿದ್ದರು.