ಬಾಯಿಯಿಂದ ನಿಮ್ಮ ಉಗುರುಗಳನ್ನು ಕಚ್ಚುತ್ತಿದ್ದರೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ಗೊತ್ತಿರುವ ವಿಚಾರವೇ, ಆದರೆ ಇಲ್ಲಿ ಉಗುರು ಕಚ್ಚುವುದರಿಂದ ದೇಹದ ಮೇಲೆ ಯಾವ ರೀತಿಯೆಲ್ಲಾ ಪರಿಣಾಮ ಬೀರುತ್ತದೆ ಎಂಬ ಅಂಶ ಕೊಡಲಾಗಿದೆ ಓದಿ.
ನೋಡಲು ಅಸಹ್ಯಕರವಾಗಿ ಕಾಣುತ್ತದೆ. ಯಾವಾಗಲೂ ಉಗುರುಗಳನ್ನು ಕಚ್ಚುವುದರಿಂದ ನಿಮ್ಮ ಬೆರಳುಗಳಿಗೆ ಹಾನಿಯಾಗುತ್ತದೆ. ನಿಮ್ಮ ಬಾಯಿಯಿಂದ ಹೊರಬರುವ ಲಾಲಾರಸದಲ್ಲಿರುವ ರಾಸಾಯನಿಕಗಳು ಬೆರಳುಗಳಿಗೆ ಸಾಕಷ್ಟು ಹಾನಿಯನ್ನು ಉಂಟುಮಾಡುತ್ತವೆ. ಇದು ನಿಮ್ಮ ಬೆರಳಿನ ಚರ್ಮದ ಮೇಲೆ ಸ್ಕ್ರಾಚಿಂಗ್ ಗುರುತುಗಳನ್ನು ಉಂಟುಮಾಡಲಿದ್ದು, ನೋಡಲು ಸಾಕಷ್ಟು ಅಸಹ್ಯಕರವಾಗಿ ಕಾಣುತ್ತದೆ.
ಪರೋನಾಸ್ಸಿಯಾ ಸೋಂಕು ಉಗುರುಗಳನ್ನು ಕಚ್ಚುವಾಗ ಉಗುರಿನಲ್ಲಿರುವ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಿಗೆ ಹೋಗಿ, ಹೊಟ್ಟೆಯಲ್ಲಿ ಸೋಂಕು ಹರಡುವ ಅಪಾಯವಿದೆ. ಇದು ಪರೋನಾಸ್ಸಿಯಾ ಎಂಬ ಸೋಂಕಿಗೆ ಕಾರಣವಾಗಲಿದ್ದು, ಇದು ಊತ, ನೋವು, ಕೆಂಪು ಮತ್ತು ಕೀವು ತುಂಬಿದ ಗಾಯಗಳನ್ನೂ ಉಂಟುಮಾಡುತ್ತದೆ.
ಜಿಂಗೈವಿಟಿಸ್ ಸಮಸ್ಯೆ ಉಗುರು ಕಚ್ಚುವುದರಿಂದ ಹಲ್ಲುಗಳ ಬೇರುಗಳಲ್ಲಿನ ಸಾಕೆಟ್ಗಳು ಹಾಳಾಗುತ್ತವೆ. ಇದರಿಂದಾಗಿ ನಿಮ್ಮ ಹಲ್ಲುಗಳು ವಕ್ರವಾಗುತ್ತವೆ. ಅಮೆರಿಕಾದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಪದೇ ಪದೇ ಉಗುರು ಕಚ್ಚುವ ಅಭ್ಯಾಸ ಹೊಂದಿವರಿಗೆ ಜಿಂಗೈವಿಟಿಸ್ನಂತಹ ಸಮಸ್ಯೆ ಕಾಣಿಸಿಕೊಂಡಿದೆ.