ಸಂಬಂಧ

ಈ 6 ಗುಣಗಳು ನಿಮ್ಮಲ್ಲಿದ್ರೆ, ಯಾರಾದರಾಗಿರಲಿ ನಿಮ್ಮನ್ನು ನಂಬುತ್ತಾರೆ…

By admin

July 18, 2017

ಈಗಂತೂ ಈ ಜಗತ್ತಿನಲ್ಲಿ ಒಬ್ಬರೊನ್ನೊಬ್ಬರು ನಂಬುವುದು ತುಂಬಾ ಕಷ್ಟ. ಯಾರ ಮೇಲೂ ಯಾರಿಗೂ ನಂಬಿಕೆ ಅನ್ನುವುದೇ ಇಲ್ಲ.ಇದಕ್ಕೆ ಕಾರಣಗಳು ಬೇಕಾದಷ್ಟು ಇವೆ. ನಮ್ಮಲ್ಲಿರುವ ಅಥವಾ ಬೇರೆಯವರಲ್ಲಿರುವ ಕೆಲವೊಂದು ನ್ಯೂನತೆಗಳು ಬೇರೆಯವರನ್ನು ನಂಬದಂತೆ ಮಾಡಿರುತ್ತವೆ.

ಹಾಗಾದ್ರೆ ನಾವು ಬೇರೆಯವರ ಹತ್ತಿರ ನಂಬಿಕೆ ಗಳಿಸಬೇಕಂದ್ರೆ ಏನು ಮಾಡುಬೇಕು?ನಿಮಗೆ ಎಲ್ಲರ ಹತ್ರ ನಂಬಿಕೆ ಗಳಿಸಿಕೊಳ್ಳಬೇಕಂದ್ರೆ ಕೆಳಗೆ ಕೊಟ್ಟಿರುವ ಕ್ರಮಗಳನ್ನು ಅನುಸರಿಸಿ.

  1. ಬರೀ ಮಾತಾಡಿದರೆ ಸಾಲದು, ಬೇರೆಯವರು ಹೇಳುವುದನ್ನು ಮೊದಲು ಆಲಿಸಿ (Listen First)

ಬರಿ ಮಾತಾಡ್ತಾನೇ  ಇದ್ರೇ,  ಜನ ಕೇಳೋಕ್  ರೆಡಿ ಇರಲ್ಲ. ಮೊದ್ಲು ಅವ್ರು ಏನ್ ಹೇಳ್ತಾರೆ ಅಂತ ತಾಳ್ಮೆ ಇಂದ ಕೇಳೋ ಗುಣ ಬೆಳೆಸಿಕೊಳ್ಳಿ ಅದೇ ಮೇನ್ ಪಾಯಿಂಟ್. ಅವ್ರ್ ಹೇಳೋದ್ ಕೇಳ್ದಷ್ಟು ನಿಮ್ಮ್ ಮೇಲೆ ಅವ್ರಿಗೆ ನಂಬಿಕೆ ಬರುತ್ತೆ

      2. ಯಾರಾದರೂ ಒಳ್ಳೆ ಕೆಲಸ ಮಾಡಿದಾಗ ಅವರನ್ನು ಹೊಗಳಿ ಪ್ರೋತ್ಸಾಹಿಸಿ…

ನಿಮ್ಮ ಬಂದುಗಳು ಸ್ನೇಹಿತರು ಯಾರಾದರೂ ಆಗಿರಲಿ, ಅವರು ಒಳ್ಳೆ ಕೆಲಸ ಮಾಡಿದಾಗ ಅವರನ್ನು ಹೊಗಳಿ, ಅವರಿಗೆ ಆತ್ಮ ವಿಶ್ವಾಸ ತುಂಬಿ , ಮುಂದುವರಿಯಲು ಪ್ರೋತ್ಸಾಹ ಕೊಡಿ. ಇದರಿಂದ ಅವರಿಗೆ ಅವರ ಆತ್ಮ ವಿಶ್ವಾಸ ಇಮ್ಮಡಿಯಾಗುತ್ತದೆ. ಆಗ ನೀವು ಅವರಿಗೆ ಹೆಚ್ಚು ನಂಬಿಕಸ್ತ ವ್ಯೆಕ್ತಿ ಅನ್ನಿಸಿಕೊಳ್ಳುತ್ತೀರಿ.ಇಲ್ಲಿ ಓದಿ:-ಈ 5 ಕೆಲಸಗಳನ್ನು ಬೆಳಿಗ್ಗೆ ಮನೆಯಿಂದ ಹೊರಡುವ ಮುನ್ನ ಮಾಡಿದ್ರೆ, ಏನಾಗುತ್ತೆ ಗೊತ್ತಾ???

     3. ನಿಮಗೆ ಗೊತ್ತಿರೋದ್ನ ನಾಲ್ಕ್ ಜನಕ್ಕೆ ಹಂಚಿ..

ನೀವು ಕಲಿಸಿ, ಇನ್ನೊಬ್ಬರತ್ತಿರುವ ವಿಷಯ ನೀವು ಕಲಿಯಿರಿ.ನೀವು ತಿಳ್ಕೊಂಡಿರೋದನ್ನ ನಾಲ್ಕು ಜನಕ್ಕೆ ಹಂಚಿ,ಕಲ್ಸಿ ಕೊಡಿ,ತಪ್ಪ್ ಮಾಡಿದಾಗ ಹಾಗಲ್ಲ ಹೀಗೆ ಅಂತ ಹೇಳ್ಕೊಡಿ.ನಿಮ್ನ ಕಂಡ್ರೆ ಸಕತ್ ಇಷ್ಟ ಪಡ್ತಾರೆ ಅವಾಗ..

     4. ಥ್ಯಾಂಕ್ಸ್ ಅಥವಾ ಸ್ವಾರೀ  ಹೇಳುವುದರಿಂದ, ನಮಗೇನು ತೊಂದ್ರೆ ಏನೂ ಇಲ್ಲ.

ನಿಮಗೆ ಯಾರಾದ್ರು ಸಹಾಯ ಮಾಡಿದಾಗ ಥ್ಯಾಂಕ್ಸ್ ಹೇಳಿ,ತಪ್ಪ್ ಮಾಡಿದಾಗ ಸಾರೀ ಕೀಳಿ.ಹೀಗೆ ಮಾಡೋದ್ರಿಂದ ನಿಮಗೇನು ನಷ್ಟ ಆಗೋದಿಲ್ಲ. ಜನಕ್ಕೆ   ಇಷ್ಟ ಆಗೋಗ್ತೀರಾ ನೀವು..

    5. ನಿಮಗೆ ಎಲ್ಲ ಗೊತ್ತಿದೆ   ಅಂತ ಅಹಂಕಾರ ಬೆಳೆಸಿಕೊಳ್ಳಬೇಡಿ..

ನಿಮಗೆ ಗೊತ್ತಿರೋದನ್ನ ಇನ್ನೊಬ್ಬರಿಗೆ  ಹೇಳಿಕೊಡಿ. ಅದು ಬಿಟ್ಟು ನನಗೆ ಎಲ್ಲಾ ಗೊತ್ತಿದೆ ಅನ್ನೋ ತರ ಮಾತನಾಡಬೇಡಿ. ಇದರಿಂದ ಬೇರೆಯವರು ನಿಮ್ಮೊಂದಿಗೆ ಸೇರುವುದಕ್ಕೆ ಇಷ್ಟ ಪಡೋದಿಲ್ಲ. ಇನ್ನೊಬ್ರು ಮುಂದೆ ಬರೋಕೆ ಅವಕಾಶ ಕೊಡಿ.. ನಿಮ್ಮ ನೋಡಿ ನಿಂಜೊತೆ ಇರೋರು ಖುಷಿ ಪಡ್ತಾರೆ.

  6. ನಿಮ್ಮ ಜೊತೆ ಇರೋರನ್ನ ನಗಿಸಿ ನೀವು ನಗ್ರಿ…

 

“ನಗಿಸುವುದು ನಿನ್ನ ಧರ್ಮ, ನಗದೆ ಇರುವುದು ಅವರ ಕರ್ಮ” ಎಂದು ಹಿರಿಯರು ಹೇಳಿದ್ದಾರೆ. ನಿಮ್ಮ ಜೊತೆ ಇರುವವರನ್ನು ಆದಷ್ಟು ನಗಿಸಿ, ಇದರಿಂದ ನಿಮ್ಮ ಮತ್ತು ನಿಮ್ಮ ಜೊತೆ ಇರುವವರಿಗೂ ಮನಸ್ಸು ಉಲ್ಲಾಸವಾಗುತ್ತದೆ. ನಿಂಜೊತೆ ಇರೋ ಫ್ರೆಂಡ್ಸ್ ನ  ನಗಿಸಿ,ಬೇರೆಯವರಿಗೆ ಏನ್ ಕಷ್ಟ ಇರುತ್ತೋ ಏನೋ ,ಅವ್ರು ನೀವ್ ಕೊಡೊ ಖುಷಿಲಿ ಅವ್ರ ಸಂತೋಷ ಕಂಡುಕೊಂಡು ಅವ್ರ ಕಷ್ಟ ಮರೀತಾರೆ..