ವಿಚಿತ್ರ ಆದರೂ ಸತ್ಯ

ಈ 22 ವರ್ಷದ ಮಗಳು 53 ವರ್ಷದ ವಿಧವೆ ತಾಯಿಗೆ ಮತ್ತೆ ಮದುವೆ ಮಾಡಿಸಿದಳು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

By admin

January 15, 2018

ಗಂಡನನ್ನು ಕಳೆದುಕೊಂಡ ತಾಯಿಗೆ ಆಸರೆಯಾಗಿ ನಿಂತ 22 ವರ್ಷದ ಮಗಳು. ವಿಧವೆಯಾದ ತನ್ನ 53 ವರ್ಷಗಳ ತಾಯಿಗಾಗಿ ವರನನ್ನು ಹುಡುಕಿ ತಂದಳು. ಹತ್ತಿರದಲ್ಲೇ ಇದ್ದು ಮದುವೆ ಮಾಡಿಸಿದಳು. ಈ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ.

ಆ ಮಗಳ ಹೆಸರು ಸಂಹಿತಾ. ತಾಯಿ ಹೆಸರು ಗೀತಾ ಅಗರ್ವಾಲ್. ಶಾಲಾ ಶಿಕ್ಷಕಿ. 2016ರ ಮೇ ತಿಂಗಳಲ್ಲಿ ಹೃದಯಾಘಾತದಿಂದ ಗೀತಾ ಅಗರ್ವಾಲ್ ಗಂಡ ಮುಕೇಶ್ ಗುಪ್ತಾ ಮರಣಿಸಿದರು. ಇದರಿಂದ ಗೀತಾ ಅಗರ್ವಾಲ್ ಖಿನ್ನತೆಗೆ ಒಳಗಾಗಿದ್ದರು.

ಆಸ್ಪತ್ರೆಯ ಸುತ್ತ ಅಲೆದಾಡಬೇಕಾದ ಪರಿಸ್ಥಿತಿ ಬಂತು. ಗುರುಗಾವ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಕೆಲಸ ಮಾಡುತ್ತಿರುವ ಆಕೆಯ ಮಗಳು ಸಂಹಿತಾ… ತಾಯಿಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದರು.ಉದ್ಯೋಗಕೆ ರಾಜೀನಾಮೆ ನೀಡಿ ಜೈಪುರಕ್ಕೆ ಹೋದರು. ತಾಯಿಗೆ ಆಸೆಯಾಗಿ ನಿಂತರು. ತಾಯಿಗೆ ಹೇಗಾದರೂ ಮದುವೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದರು. ಆಕೆ ನಿರ್ಧಾರಕ್ಕೆ ಮನೆಯವರೆಲ್ಲಾ ವಿರೋಧ ವ್ಯಕ್ತಪಡಿಸಿದರು.

53 ವರ್ಷಗಳ ವಯಸ್ಸಲಿ ಮದುವೇನಾ ಎಂದು ಬಾಯಿಬಾಯಿ ಬಿಟ್ಟರು. ಆದರೂ ಸಂಹಿತಾ ತನ್ನ ನಿರ್ಧಾರ ಬದಲಾಯಿಸಲಿಲ್ಲ. ತನ್ನ ತಾಯಿಗೆ ಹೊಸ ಜೀವನ ಕೊಡಬೇಕೆಂದುಕೊಂಡರು.ಆಕೆಯ ಹುಡುಕಾಟ ಆರಂಭವಾಯಿತು. ವಿಧವೆಯರಿಗಾಗಿ ಇರುವ ಮ್ಯಾರೇಜ್ ಬ್ಯೂರೋಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಹುಡುಕಾಡಿದರು. ರಾಜಸ್ಥಾನದಲಿ ತಮಗೆ ಗೊತ್ತಿರುವ ಕುಟುಂಬಗಳನ್ನು ಭೇಟಿಯಾದರು.

ಕೊನೆಗೂ ಆಕೆಯ ಹುಡುಕಾಟಕ್ಕೆ ಪ್ರತಿಫಲ ಸಿಕ್ಕಿತು. ರಾಜಸ್ಥಾನದ ಬಾನ್ಸ್‌ವಾರ್ ನಗರದ 55 ವರ್ಷಗಳ ರೆವೆನ್ಯೂ ಇನ್ಸ್‌ಪೆಕ್ಟರ್ ಕೆಜಿ ಗುಪ್ತಾ ಆಸಕ್ತಿ ತೋರಿದರು. ಅವರು ಪತ್ನಿ 2010ರಲ್ಲಿ ಕ್ಯಾನ್ಸರ್ ಕಾರಣ ಮರಣಿಸಿದ್ದರು.

ಅಂದಿನಿಂದ ಅವರು ಸಹ ಒಂಟಿ ಜೀವನ ನಡೆಸುತ್ತಿದ್ದಾರೆ. ಗೀತಾ ಅಗರ್ವಾಲ್‍ರನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಅವರು ಸಂಹಿತಾರನ್ನು ಸಂಪರ್ಕಿಸಿದರು. ಸುಮ್ಮನೆ ಕುರುಡು ಕುರುಡಾಗಿ ಮದುವೆ ಮಾಡಲಿಲ್ಲ ಆಕೆ. ಎಲ್ಲಾ ಸಂಗತಿಗಳ ಬಗ್ಗೆ ತಿಳಿದುಕೊಂಡರು ಮದುವೆಯಾದರು.