ಈಗಿನ ಕಾಲದಲ್ಲಿ ಹಾಲನ್ನ ಕುಡಿಯದೆ ಇರುವ ಜನರ ಹುಡುಕುವುದು ಬಹಳ ಕಷ್ಟ, ಹೌದು ಹಾಲು ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ಔಷದಿಯ ಅಂಶಗಳನ್ನ ಒದಗಿಸುವುದರಿಂದ ಹೆಚ್ಚಿನ ಜನರು ಹಾಲನ್ನ ಕುಡಿಯುತ್ತಾರೆ. ಇನ್ನು ಬಳಸುವ ನಾವು ಗೋಮಾತೆಯ ಹಾಲನ್ನ ವಿವಿಧ ಉಪಯೋಗಗಳಿಗಾಗಿ ಬಳಸುತ್ತೇವೆ, ಹೌದು ಚಹಾ ಮಾಡಲು ಮತ್ತು ಸಿಹಿ ತಿಂಡಿಗಳನ್ನ ಮಾಡಲು ಮತ್ತು ದೇವರ ಪೂಜೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನ ಬಳಸಲಾಗುತ್ತದೆ. ಇನ್ನು ದಿನದಿಂದ ದಿನಕ್ಕೆ ಜನಸಂಖ್ಯೆ ಜಾಸ್ತಿ ಆಗುತ್ತಾ ಹೋದಂತೆ ಹಸುವಿನ ಹಾಲಿನ ಬೆಲೆ ಕೂಡ ಹೆಚ್ಚಾಗುತ್ತಾ ಹೋಯಿತು. ಇನ್ನು ನಾವು ಚಿಕ್ಕವರಾಗಿದ್ದಾಗ ಒಂದು ಲೀಟರ್ ಹಸುವಿನ ಹಾಲಿನ ಬೆಲೆ 10 -15 ರೂಪಾಯಿ ಆಗಿದ್ದವು ಆದರೆ ಈಗ ಒಂದು ಲೀಟರ್ ಹಸುವಿನ ಹಾಲಿನ ಬೆಲೆ 44 ರೂಪಾಯಿ ಆಗಿದೆ.
ಇನ್ನು ಜನಸಂಖ್ಯೆ ಹೆಚ್ಚಾದಂತೆ ವಿದೇಶದಿಂದ ಹೆಚ್ಚು ಹಾಲು ಕೊಡುವ ಹಸುಗಳು ಬಂದವು, ಇನ್ನು ಹಿಂದಿ ಮತ್ತು ಭೂಸಗಳನ್ನ ಹಾಕಿ ಹಸುವಿನಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನ ಕರೆಯಲಾಗುತ್ತಿತ್ತು, ಆದರೆ ಇಂತಹ ಹಾಲಿನಯಲ್ಲಿ ಯಾವುದೇ ರೀತಿಯ ಸತ್ವಗಳು ಇಲ್ಲ. ಇನ್ನು ಸಾಮಾನ್ಯವಾಗಿ ಒಂದು ಹಸುವಿನ ಹಾಲಿನ ಬೆಲೆ ಒಂದು ಲೀಟರ್ ಗೆ 40 -45 ರೂಪಾಯಿ ಇರುತ್ತದೆ, ಆದರೆ ನಾವು ಹೇಳುವ ಈ ಹಸುವಿನ ಬೆಲೆಯನ್ನ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಹಾಗಾದರೆ ಈ ಹಸುವಿನ ಹಾಲಿನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ನಾವು ಹೇಳುವ ಈ ಹಸುವಿನ ಒಂದು ಲೀಟರ್ ಹಾಲಿನ ಬೆಲೆ ಬರೋಬ್ಬರಿ 250 ರೂಪಾಯಿ ಆಗಿದೆ, ಸ್ನೇಹಿತರೆ ಈ ಹಸುವಿನ ಜಾತಿಯ ಹೆಸರು ಪುಂಗನೂರು ಗಿಡ್ಡಗಳು ಎಂದು ಮತ್ತು ಇಂತಹ ತಳಿಯ ಹಸುಗಳು ಕಾಣಲಿಕ್ಕೆ ಸಿಗುವುದು ತುಂಬಾ ಕಡಿಮೆ. ಇನ್ನು ಈ ತಳಿಯ ಹಸುವಿನ ಹಾಲಿನಲ್ಲಿ ಔಷದಿಯ ಗುಣಗಳು ಬಹಳ ಹೆಚ್ಚಾಗಿ ಇರುವ ಕಾರಣದಿಂದ ಈ ಹಸುವಿನ ಹಾಲಿಗೆ ದೇಶದಲ್ಲಿ ಭಾರಿ ಬೇಡಿಕೆ ಇದೆ. ಇನ್ನು ಈ ಹಸುಗಳು ಉಳಿದ ತಳಿಗಳ ಹಸುಗಳಂತೆ ದಿನಕ್ಕೆ 10 ರಿಂದ 15 ಲೀಟರ್ ಹಾಲು ಕೊಡುವುದಿಲ್ಲ ಬದಲಾಗಲಿ ಈ ಹಸುಗಳು ದಿನಕ್ಕೆ 3 ರಿಂದ 4 ಲೀಟರ್ ಹಾಲನ್ನ ಮಾತ್ರ ಕೊಡುತ್ತದೆ. ಇನ್ನು ಬೀದರ್ ನಗರದಲ್ಲಿ ನಡೆದ ರಾಜ್ಯ ಮಟ್ಟದ ರಾಸು ಪ್ರದರ್ಶನಕ್ಕೆ ಹೈದರಾಬಾದ್ ನ ಕೋಟೇಶ್ವರ್ ಅನ್ನುವ ವ್ಯಕ್ತಿ ಪಂಗನೂರು ಗಿಡ್ಡ ತಳಿಯ ಒಂದು ಹಸುವನ್ನ ಕರೆತಂದಿದ್ದರು, ಇನ್ನು ಈ ಹಸುವಿನ ಹಾಲಿನ ಬೆಲೆಯನ್ನ ಕೇಳಿ ಅಲ್ಲಿನ ಜನರು ಶಾಕ್ ಆದರು.
ಇನ್ನು ಈ ಎಲ್ಲಾ ಕಾರಣಗಳಿಂದ ಈ ಪಂಗನೂರು ಗಿಡ್ಡ ತಳಿಯ ಹಸುವಿನ ಹಾಲಿನ ಬೆಲೆ ಒಂದು ಲೀಟರ್ ಗೆ 250 ರೂಪಾಯಿ ಆಗಿದೆ. ನಮಗೆ ಈಗ ಕಾಣಸಿಗುವ ಹಸುಗಳು ಹಿಂಡಿ ಮತ್ತು ಭೂಸಗಳನ ಹೆಚ್ಚಾಗಿ ತಿಂದು ದಿನಕ್ಕೆ 10 -15 ಲೀಟರ್ ಕೊಡುತ್ತದೆ, ಆದರೆ ಇಂತಹ ಹಾಲಿನಲ್ಲಿ ಹೆಚ್ಚಿನ ಔಷಧಿ ಗುಣಗಳು ಇರುವುದಿಲ್ಲ, ನಮ್ಮ ಹಳ್ಳಿಗಳಲ್ಲಿ ಸಿಗುವ ನಟಿ ಹಸುಗಳ ಹಾಲನ್ನ ಹೆಚ್ಚು ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಒಳ್ಳೆಯದು ಅನ್ನುವುದು ನಮ್ಮ ವೈದ್ಯರ ಅಭಿಪ್ರಾಯ ಕೂಡ ಆಗಿದೆ.