ಸುದ್ದಿ

ಈ ಹಳ್ಳಿಯಲ್ಲಿ ಒಂದು ಮೂಟೆ ಸಿಮೆಂಟ್’ಗೆ 8000 ಕೊಡ್ಬೇಕು.?ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ..

By admin

April 14, 2018

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಸಾಮಾನ್ಯವಾಗಿ 50 ಕೆಜಿಯ ಒಂದು ಮೂಟೆ ಸಿಮೆಂಟ್‌’ಗೆ, ಅಮ್ಮಮ್ಮಾ ಅಂದ್ರೆ  300 ರಿಂದ 400ರೂ ವರೆಗೆ ಕೊಡಬಹುದು.ಆದ್ರೆ ಈ ಊರಿನ ಜನ ಒಂದು ಮೂಟೆ ಸಿಮೆಂಟ್’ಗೆ  8000ರೂ ವರೆಗೆ ಕೊಡ್ತಾರೆ.

ಹೌದು, ನೀವು ಕೇಳಿದ್ದು ನಿಜ.ಅರುಣಾಚಲ ಪ್ರದೇಶದ ಗ್ರಾಮವೊಂದರ ಜನ 50 ಕೆಜಿಯ ಒಂದು ಮೂಟೆ ಸಿಮೆಂಟ್‌’ಗೆ ಬರೋಬ್ಬರಿ 8 ಸಾವಿರ ರೂ ಕೊಡುವುದು ಕಂಡು ಬರುತ್ತದೆ.

ಕಾರಣ ಏನು ಗೊತ್ತಾ.?

ಅಲ್ಲಿ ಸಿಮೆಂಟ್ ಅಭಾವವೇನು ಉದ್ಭವಿಸಿಲ್ಲ. ಸಿಮೆಂಟ್‌ಗೆ ಇಷ್ಟೊಂದು ದುಬಾರಿ ದರ ವಿಧಿಸಲು ಕಾರಣ, ಚೀನಾ ಗಡಿಯಲ್ಲಿ ಇರುವ ಚಾಂಗ್ಲಾಂಗ್ ಜಿಲ್ಲೆಯ ವಿಜೋಯ್ ನಗರ ಎಂಬ ಈ ಗ್ರಾಮಕ್ಕೆ ಯಾವುದೇ ವಸ್ತು ತರಬೇಕಾದರೂ ಅದನ್ನು 156 ಕಿ.ಮೀ ಹಾದಿಯಲ್ಲಿ ನಡೆದುಕೊಂಡೇ ಹೊತ್ತು ತರಬೇಕು.

ಹೀಗಾಗಿ ಈ ಊರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಕೆಲಸ ಮಾಡುವ ಚಕ್ಮಾ ಜನಾಂಗ ಪ್ರತಿ 1 ಸಿಮೆಂಟ್ ಮೂಟೆ ಸಾಗಿಸಲು 8 ಸಾವಿರ ರು. ದರ ವಿಧಿಸುತ್ತಿದೆ. ಸಾರಿಗೆ ವ್ಯವಸ್ಥೆ ಸರಿ ಇಲ್ಲ ಅಂದರೆ ಹೇಗೆಲ್ಲ ಸರಕು ಸಾಗಣೆ ಮೇಲೆ ದುಬಾರಿ ಬೆಲೆ ತೆರಬೇಕಾದೀತು ಅನ್ನೋದಕ್ಕೆ ಇದೆ ಉದಾಹರಣೆ ಅನ್ನಬಹುದು.