ಕಾನೂನು

ಈ ಹಂತಕ ಮೂಗನಂತೆ ನಟಿಸಿ ಕೊನೆಗು ಆಗಿದ್ದೇನೆ ಗೂತ್ತಾ..?ತಿಳಿಯಲು ಈ ಲೇಖನ ಓದಿ..

By admin

December 30, 2017

ಝೆಜಿಯಾಂಗ್ ಗ್ರಾಮದ ನಿವಾಸಿ ಜೆಂಗ್, 2005ರಲ್ಲಿ ತನ್ನ ಪತ್ನಿಯನ್ನೇ ಕೊಲೆ ಮಾಡಿ ಊರು ಬಿಟ್ಟಿದ್ದ. 76 ಡಾಲರ್ ಬಾಡಿಗೆ ಹಣಕ್ಕೆ ಸಂಬಂಧಿಸಿದ ಜಟಾಪಟಿ ಕೊಲೆಯಲ್ಲಿ ಅಂತ್ಯವಾಗಿತ್ತು. ಬೇರೆ ಊರಿಗೆ ತೆರಳಿದ ಜೆಂಗ್ ಮೂಗನಂತೆ ನಟಿಸಿ, ಕಟ್ಟಡ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ.

ನಾವು ಮಾಡಿದ ಪಾಪದ ಕೆಲಸಕ್ಕೆ ತಕ್ಕ ಪ್ರಾಯಶ್ಚಿತ ಅನುಭವಿಸ್ತೇವೆ ಅನ್ನೋದು ಅಕ್ಷರಶಃ ಸತ್ಯ. ಚೀನಾದಲ್ಲಿ ಕೊಲೆಗಾರನೊಬ್ಬ ತನ್ನ ದುಷ್ಕೃತ್ಯವನ್ನು ಮುಚ್ಚಿಡಲು 12 ವರ್ಷಗಳ ಕಾಲ ಮೂಗನಂತೆ ನಟಿಸಿದ್ದ. ಈಗ ನಿಜವಾಗಿಯೂ ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾನೆ.

ಹೆಸರನ್ನು ಕೂಡ ಬದಲಾಯಿಸಿಕೊಂಡು ಬೇರೊಬ್ಬಳನ್ನು ಮದುವೆಯಾಗಿದ್ದ. ಆದ್ರೆ ಅವನ ಬಳಿ ಯಾವುದೇ ಗುರುತಿನ ಚೀಟಿ ಇಲ್ಲದಿರೋದು ಅನುಮಾನ ಮೂಡಿಸಿತ್ತು. 12 ವರ್ಷಗಳ ಹಿಂದೆ ನಡೆದ ಹತ್ಯೆ ಪ್ರಕರಣದಲ್ಲಿ ಹಂತಕನ ಡಿಎನ್ ಎ ಜೊತೆ ಜೆಂಗ್ ರಕ್ತದ ಮಾದರಿ ಮ್ಯಾಚ್ ಆಗಿತ್ತು.

ಕೊನೆಗೂ ಜೆಂಗ್ ತಪ್ಪೊಪ್ಪಿಕೊಂಡಿದ್ದಾನೆ. ಆದ್ರೆ 12 ವರ್ಷಗಳ ಕಾಲ ಮಾತನಾಡದೇ ಮೂಗನಂತೆ ನಟಿಸಿದ್ದರಿಂದ ಶಾಶ್ವತವಾಗಿ ಮೂಗನಾಗಿಬಿಟ್ಟಿದ್ದಾನೆ. ತಾನು ಮಾಡಿದ ಕೃತ್ಯವನ್ನು ಪೇಪರ್ ನಲ್ಲಿ ಬರೆದು ಪೊಲೀಸರಿಗೆ ನೀಡಿದ್ದಾನೆ. ಆರೋಪ ಸಾಬೀತಾದಲ್ಲಿ ಮರಣದಂಡನೆಗೆ ನಿಡುವ ಸಾಧ್ಯತೆ ಇದೆ.