ಆರೋಗ್ಯ

ಈ ಸೊಳ್ಳೆಗಳು ಬೇರೆಯವರಿಗಿಂತ ನಿಮ್ಮನ್ನೇ ಯಾಕೆ ಹೆಚ್ಚು ಕಚ್ಚುತ್ತವೆ ಗೊತ್ತಾ…!ಈ ಲೇಖನಿ ಓದಿ, ಗೊತ್ತಾಗುತ್ತೆ…

By admin

July 12, 2017

ಮನೆಯಲ್ಲಿ ಫ್ಯಾನ್, ಕೂಲರ್ ಇಲ್ಲಾಂದ್ರೆ ನೀವು ಸೊಳ್ಳೆಮಹರಾಯನಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಅದರಲ್ಲೂ ಮನೆಯಲ್ಲಿ ಕರೆಂಟ್ ಏನಾದ್ರೂ ಹೋದ್ರೆ ನಿಮ್ಮ ಕತೆ ಮುಗಿದ ಹಾಗೆ. ಇನ್ನೂ ಚಳಿಗಾಲದಲ್ಲಂತೂ ಕೇಳದೇ ಬೇಡ. ಕೆಲವೊಂದು ಸಾರಿ ನಮ್ಗೆ ಅನ್ನಿಸುವುದೇನಂದ್ರೆ ಈ ಸೊಳ್ಳೆಗಳು ನಮಗೆ ಯಾಕೆ ಕಚ್ಚುತ್ತವೆ ಅಂತ ಬಹಳ ತಲೆ ಕೆಡಿಸಿಕೊಳ್ಳುತ್ತೇವೆ.

ಇದಕ್ಕೆ ಮನೆಯವರು ತಮಾಷೆಯಾಗಿ, ನಿನ್ನಲ್ಲಿ ಅದಕ್ಕೆ ಹೆಚ್ಚು ಪ್ರೀತಿ ಎನ್ನುತ್ತಾರೆ! ಕೆಲವರು ನೀನು ತುಂಬ ಸಿಹಿ ತಿನ್ನುವೆ ಆದ್ದರಿಂದ ಸೊಳ್ಳೆಗಳು ನಿನಗೆ ಕಚ್ಚುತ್ತಿವೆ ಎಂದು ಹೇಳುತ್ತಾರೆ.ಆದರೆ ಇವೆಲ್ಲವೂ ಸುಮ್ಮನೆ ತಮಾಷೆಯಾಗಿ ಹೇಳುವ ಮಾತುಗಳಾಗಿವೆ.

ಸೊಳ್ಳೆ ನಿಮ್ಮ ಶರೀರದಿಂದ ಹೊರಡುವ ದುರ್ಗಂಧ ಅಥವಾ ನಿಮ್ಮ ಕೊಳಕು ಸಾಕ್ಸ್ನಿಂ ದ ಪ್ರೇರಿತವಾಗಿ ಸೊಳ್ಳೆಗಳು ಕಡಿಯುತ್ತವೆ ಎಂದು ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರಾಫಿಕಲ್ ಮೆಡಿಸಿನ್ ತಿಳಿಸಿದೆ. ಜೆನೆಟಿಕ್ ಅರ್ಥಾತ್ ಅನುವಂಶಿ ಕ ಕಾರಣದಿಂದ ಸೊಳ್ಳೆಗಳು ಕಚ್ಚುತ್ತಿವೆಯೇ ಎಂದು ಅದು ಸಂಶೋಧನೆ ನಡೆಸಿತ್ತು.

ಅದು 200 ಸಾಕ್ಸ್ಗ4ಳಲ್ಲಿ ಸಂಶೋಧನೆ ನಡೆಸಿತು. ರಕ್ತದ ಪರೀಕ್ಷೆ ನಡೆಸಿತು. ಆದರೆ ಇವೆಲ್ಲವೂ ಸೊಳ್ಳೆ ಕಚ್ಚಲು ಕಾರಣಗಳಲ್ಲ ದೇಹದ ವಾಸನೆಯಿಂದ ಪ್ರೇರಣೆಗೆ ಗೊಂಡು ಸೊಳ್ಳೆಗಳು ಮನುಷ್ಯನಿಗೆ ಕಚ್ಚುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಹೈಜಿನ್ ಸ್ಕೂಲ್ ಅವಳಿ ಮಕ್ಕಳಲ್ಲಿ ಸಂಶೋಧನೆ ನಡೆಸಿ ನೋಡಿತು. ಅವರೆಲ್ಲರೂ ಒಟ್ಟಿಗೆ ಹುಟ್ಟಿದವರು. ಇವರಲ್ಲಿಒಬ್ಬೊರೊಬ್ಬರಿಗೆ ಹೋಲುವ ಅವಳಿಮಕ್ಕಳು ಕೂಡಾ ಇದ್ದರು. ಇನ್ನು ಜೆಂಡರ್ ಹೋಲಿಕೆಯಿಲ್ಲದ ಮಕ್ಕಳು ಕೂಡಾ ಇದ್ದರು. ಇದರಿಂದ ಅನುವಂಶಿಕ ಕಾರಣದಿಂದ ಸೊಳ್ಳೆಗಳು ಕಡಿಯುವುದಿಲ್ಲ ಎಂದು ಪತ್ತೆಯಾಗಿದೆ.

ಅವಳಿಗಳನ್ನು ಸಂಶೋಧನೆಗೆ ಯಾಕೆ ಆಯ್ಕೆ ಮಾಡಿಕೊಳ್ಳಲಾಯಿತೆಂದರೆ ಕಳೆದ ಸಲ ಸಂಶೋಧನೆಯಲ್ಲಿ ಪರಸ್ಪರ ಹೋಲಿಕೆ ಇರುವ ಅವಳಿಗಳಿಗೆ ಸೊಳ್ಳೆ ಹೆಚ್ಚು ಕಚ್ಚುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿತ್ತು.

ಜೂನ್ 2016ರಲ್ಲಿ ಸಂಶೋಧನೆ ನಡೆಸಿದ ಜೇಮ್ಸ್ ಲಾಗನ್ ” ನಾವು ಜೆನೆಟಿಕ್ಸ್ ಅರ್ಥಾತ್ ಅನುವಂಶೀಯತೆಯ ಬಗ್ಗೆ ಕಡಿಮೆ ಅರಿತಿದ್ದೇವೆ. ಸೊಳ್ಳೆ ಕಚ್ಚುವುದು ದೇಹದ ದುರ್ಗಂಧದ ಕಾರಣದಿಂದ ಎಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ” ಎಂದು ತಿಳಿಸಿದ್ದಾರೆ.