ವಿಸ್ಮಯ ಜಗತ್ತು

ಈ ಸುಂದರ ಸೆಲ್ಫಿ ಫೋಟೋದ ಹಿಂದಿರುವ ಭಯಾನಕ, ರೋಚಕ ಸತ್ಯ ಗೊತ್ತಾ ನಿಮ್ಗೆ! ಮುಂದೆ ಓದಿ…

By admin

August 01, 2017

ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಂಚಿಕೊಳ್ಳುವ ಕೆಲವೊಂದು ಫೋಟೋಗಳು ಅಥವಾ ವಿಡಿಯೋಗಳು ತುಂಬಾ ಸಂಚಲನವನ್ನೇ ಸೃಷ್ಟಿ ಮಾಡಿಬಿಡುತ್ತವೆ.

ಹೌದು, ಇತ್ತೀಚೆಗೆ ಜೋಡಿಯೊಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಮ್ಮ ಸೆಲ್ಪಿ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದು,ಇದೀಗ ಆ ಸುಂದರ ಸೆಲ್ಪಿ ಹಿಂದಿನ ರೋಚಕ ಭಯಾನಕತೆಯಿಂದಾಗಿ, ಈ ಫೋಟೋ ವೈರಲ್ ಆಗುತ್ತಿದೆ.

ಆ್ಯಂಡಿ ಎಂಬ ಟ್ವಿಟರ್ ಖಾತೆದಾರ ಈ ಫೋಟೋವನ್ನು ಆಪ್ಲೋಡ್ ಮಾಡಿದ್ದು, ಐ ಲವ್ ಮೈ ಗರ್ಲ್ ಫ್ರೆಂಡ್ ಈವನ್ ಶೀ ಇಸ್ ಜೆಮಿನಿ  ಎಂದು ಟ್ವೀಟ್ ಮಾಡಿದ್ದ.  ಆದರೆ ಮೇಲ್ನೋಟಕ್ಕೆ ಈ ಫೋಟೋ ಜೋಡಿಯ ಪ್ರೀತಿಯನ್ನು ತೋರಿಸುತ್ತದೆಯಾದರೂ, ಇದೇ ಫೋಟವನ್ನು ಸ್ವಲ್ಪ ಗಮನವಿಟ್ಟು ನೋಡಿದರೆ ಫೋಟೋ ಹಿಂದಿನ ಭಯಾನಕತೆ ಬಯಲಾಗುತ್ತದೆ.

ಈ ಫೋಟೋ ನೋಡಿದ ಲಕ್ಷಾಂತರ ಟ್ವೀಟಿಗರು ಇದಕ್ಕೆ ರೀ-ಟ್ವೀಟ್ ಮಾಡಿದ್ದು, ಇದು ಹೇಗೆ ಸಾಧ್ಯ…ಇನ್ನು ಕೆಲವರು ‘ಈಕೆ ಅತ್ಯಂತ ಭಯಾನಕವಾಗಿದ್ದಾಳೆ’ ಎಂದಿದ್ದಾರೆ. ಮತ್ತೆ ಕೆಲವರು ಆಕೆ ಮನುಷ್ಯಳೋ ಅಥವಾ ಭೂತವೋ ಎಂಬ  ಉದ್ಗಾರಗಳೊಂದಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಮತ್ತೆ ಕೆಲವರು ಇದನ್ನು ವ್ಯಂಗ್ಯ ಮಾಡಿದ್ದು, ಇದು ಫೋಟೋಶಾಪ್ ಪವಾಡ ಎಂದು ಟೀಕಿಸಿದ್ದಾರೆ.

ಇಷ್ಟಕ್ಕೂ ಈ ಫೋಟೋ ಹಿಂದಿರುವ ಅಸಲಿಯತ್ತೇನು?

ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ನೋಡುಗರು ಆ ಫೋಟೋದಲ್ಲಿ ಕಂಡ ನಂಬಲಸಾಧ್ಯವಾದ ಸತ್ಯ!. ಈ ಸೆಲ್ಫೀಯನ್ನು ಮೇಲ್ನೋಟಕ್ಕೆ ನೋಡಿದರೆ ಇಬ್ಬರ ನಡುವಿನ ಪ್ರೀತಿ ಎದ್ದು ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗಲೇ ಈ  ಸುಂದರ ಜೋಡಿಯ ಹಿಂದಿನ ಭಯಾನಕ ರೂಪ ಕಾಣುತ್ತದೆ. ಯಾಕೆಂದರೆ ಫೋಟೋಗೆ ಫೋಸ್ ಕೊಡುವ ಯುವತಿ ಏಕಕಾಲದಲ್ಲಿ ಎರಡೆರಡು ದಿಕ್ಕಿಗೆ ಮುಖ ತೋರಿಸಿದ್ದಾಳೆ. ಸೆಲ್ಫಿ ವೇಳೆ ಯುವತಿ ಯಾವುದಾದರೂ ಒಂದೇ ದಿಕ್ಕಿಗೆ  ನೋಡಬೇಕಿತ್ತು. ಆದರೆ ಇವರ ಹಿಂದಿದ್ದ ಕನ್ನಡಿಯಲ್ಲಿ ಯುವತಿ ಅದೇ ಕ್ಷಣದಲ್ಲಿ ಹಿಂಬದಿಗೆ ನೋಡುವುದೂ ಕಾಣುತ್ತದೆ. ಓರ್ವ ವ್ಯಕ್ತಿಗೆ ಎರಡು ಮುಖಗಳಿರಲು ಸಾಧ್ಯವಿಲ್ಲ. ಇನ್ನು ಫೋಟೋ ನೋಡಿದರೆ ಆಕೆ ಸೆಲ್ಫೀಗೆ ಫೋಸ್  ನೀಡಿರುವುದು ಸ್ಪಷ್ಟವಾಗುತ್ತದೆ. ಆದರೆ ಆದೇ ಸಂದರ್ಭದಲ್ಲಿ ಆ ಕನ್ನಡಿಯಲ್ಲಿ ಕಾಣುತ್ತಿರುವುದೇನು ಎಂಬ ಪ್ರಶ್ನೆಯೂ ಮೂಡುತ್ತದೆ.

ಈ ಫೋಟೋ ನಿಜಕ್ಕೂ ವೈರಲ್ ಆಗಿದೆಯಾದರೂ ಇದನ್ನು ಅಪ್ಲೋಡ್ ಮಾಡಿರುವ ಆ್ಯಂಡಿ ಎಂಬ ಟ್ವಿಟರ್ ಖಾತೆದಾರನದ್ದೇ ಅಲ್ಲ… ಈ ಫೋಟೋ ಬ್ರೆಜಿಲ್ ಮೂಲದ ಜೆಫರ್ಸನ್ ನೆಗ್ರಾವ್ ಎಂಬಾತನದ್ದು ಎಂಬುದು ಟ್ವಿಟರ್  ಮೂಲಕ ಬಯಲಾಗಿದೆ. ಈತನ ಗರ್ಲ್ ಫ್ರೆಂಡ್ ಆಡ್ರಿಯಾನೆ ಅಲ್ಫೈಯಾಳೊಂದಿಗೆ ಸೆಲ್ಫಿತೆಗೆದು ಅದನ್ನು ಟ್ವೀಟ್ ಮಾಡಿದ್ದ. ಇದೇ ಫೋಟೋವನ್ನು ಆ್ಯಂಡಿ ಎಂಬ ಖಾತೆದಾರ ತನ್ನ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ಎಂಬ ವಿಚಾರ  ಬೆಳಕಿಗೆ ಬಂದಿದೆ. ಇನ್ನು ಈ ಫೋಟೋದ ಮೂಲಕ ಆ್ಯಂಡಿ ಖಾತೆದಾರ ಫೇಮಸ್ ಆದನಾದರೂ ಈ ಟ್ವೀಟ್ ನಿಂದಾಗಿ ವ್ಯಾಪಕ ಟೀಕೆಗಳನ್ನು ಕೂಡ ಏದುರಿಸಿದ್ದಾನೆ.                                                                                                                                                                        ಮೂಲ: