*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*
ನಾವೆಲ್ಲಾ ಸಿನಿಮಾದಲ್ಲಿ ಸಿನಿಮಾ ನಾಯಕರು ತಮ್ಮ ಎರಡೂ ಕೈ ಗಳಲ್ಲಿ ಬರೆಯುವದನ್ನು ನೋಡಿರುತ್ತೇವೆ.ಆದ್ರೆ ನಿಜ ಜೀವನದಲ್ಲಿ ಸಾಧ್ಯವೇ..?ಹೌದು, ಸಾಧ್ಯ ತಿಳಿಯಲು ಮುಂದೆ ಓದಿ…
ಸಾಮಾನ್ಯವಾಗಿ ನಾವೆಲ್ಲರೂ ಒಂದು ಕೈನಲ್ಲಿ ಬರೆಯುವುದನ್ನು ರೂಢಿಸಿಕೊಂಡಿರುತ್ತೇವೆ, ಆದರೆ ಈ ಶಾಲೆಯಲ್ಲಿನ ಮಕ್ಕಳು ತಮ್ಮ ಎರಡೂ ಕೈಗಳಲ್ಲಿ ಬರೆಯುವುದನ್ನು ರೂಡಿಸಿಕೊಂಡಿವೆಯಂತೆ! ಈ ವರದಿ ನಿಮಗೆ ಆಶ್ಚರ್ಯ ಉಂಟು ಮಾಡಿದರೂ ಸತ್ಯ..!
ಇದು ನಡೆಯುತ್ತಿರುವುದು ಮಹಾರಾಷ್ಟ್ರದ ಸಿಂಗ್ರೌಲಿ ಎಂಬ ಪುಟ್ಟ ಗ್ರಾಮದ ವೀಣಾ ವಂದಿನಿ ಶಾಲೆ. ಈ ಶಾಲೆಯ ಎಲ್ಲಾ 300 ಮಕ್ಕಳೂ ಎರಡೂ ಕೈಗಳಲ್ಲೂ ಏಕಕಾಲದಲ್ಲಿ ಬರೆಯುತ್ತಾರೆ. ಈ ಶಾಲೆಯ ಸಂಸ್ಥಾಪಕರೂ ಮತ್ತು ಮುಖ್ಯಶಿಕ್ಷಕರೂ ಆಗಿರುವ ವಿಪಿ ಶರ್ಮಾ ನಿವೃತ್ತ ಯೋಧ.
ಹಾಗು ಇವರಿಗೆ ದೇಶದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ರೇ ಅವರಿಗೆ ತಮ್ಮ ಶಾಲೆಯಲ್ಲಿ ಈ ರೀತಿಯ ತರಬೇತಿ ನೀಡಲು ಪ್ರೇರಣೆಯಂತೆ. ಈ ಶಾಲೆಯ ಮಕ್ಕಳಿಗೆ 1ನೇ ತರಗತಿಯಿಂದಲೇ ಎರಡೂ ಕೈಗಳಲ್ಲೂ ಬರವಣಿಗೆ ಅಭ್ಯಾಸ ಮಾಡಿಸುತ್ತಾರೆ.
ಒಂದರಿಂದ ಮೂರನೇ ತರಗತಿಯ ಎಲ್ಲಾ ಮಕ್ಕಳೂ ಎರಡೂ ಕೈಗಳಲ್ಲಿ ಒಂದು ಭಾಷೆಯಲ್ಲಿ ಬರೆಯುತ್ತಾರೆ. ಏಳರಿಂದ ಎಂಟನೇ ತರಗತಿ ಮಕ್ಕಳು ಎರಡೂ ಕೈಗಳಲ್ಲಿ ಪ್ರತ್ಯೇಕ ಭಾಷೆಗಳಲ್ಲಿ ಬರೆಯುತ್ತಾರೆ.