ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಶೇಷವಾದ ಸುದ್ದಿಯನ್ನು ನೋಡುತ್ತಲೇ ಇರುತ್ತೇವೆ.ಕೆಲವು ಸುದ್ದಿಗಳು ಅಚ್ಚರಿಯಾಗಿದ್ದರು ಸತ್ಯಕ್ಕೆ ಹತ್ತಿರವಾಗಿರುತ್ತವೆ. ಹಾಗು ಕೆಲವು ಸುದ್ದಿಗಳು ರೋಚಕತೆ ಸೃಷ್ಟಿಸುವ ರೀತಿಯಲ್ಲಿರುತ್ತವೆ.
ಅದೇ ರೀತಿಯಲ್ಲಿ ಈ ಸುದ್ದಿ ಕೂಡ ಅಚ್ಚರಿಯನ್ನು ತರುವಂತದ್ದು ಎನ್ನಬಹುದು. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 50 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿ 70 ಕಿಂತ ಹೆಚ್ಚು ನಾಣ್ಯ ಪತ್ತೆಯಾಗಿದೆ.
ಹೊಟ್ಟೆ ನೋವಿಂದ ಬಳಲುತ್ತಿದ್ದ ಕೃಷ್ಣ ಸೋಮಲ್ಯ ಸಂಬರ್ ಎಂಬುವವರನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಬಂದಾಗ ಹೊಟ್ಟೆಯಲ್ಲಿ ಲೋಹದ ವಸ್ತುಗಳಿರುವುದು ಕಂಡು ವೈದ್ಯರು ಅಚ್ಚರಿ ಪಟ್ಟಿದ್ದಾರೆ. ಇದನ್ನರಿತ ವೈದ್ಯರು ಶಸ್ತ್ರಕ್ರಿಯೆ ನಡೆಸಿದಾಗ 70 ಕಿಂತ ಹೆಚ್ಚು ನಾಣ್ಯಗಳು ಪತ್ತೆಯಾಗಿದ್ದವೆ.
ಮಾನಸಿಕ ಅಸ್ವಸ್ಥನಾಗಿದ್ದ ಸಂಬರ್ ಅಪರೂಪದ ಮೆಟಲ್ಲೋ-ಫೆಜಿಯಾ ಕಾಯಿಲೆಯಿಂದ ಬಳಲುತ್ತಿದ್ದ. ಲೋಹದ ವಸ್ತುಗಳನ್ನು ತಿನ್ನಬೇಕೆನಿಸುವುದು ಈ ಕಾಯಿಲೆಯ ಲಕ್ಷಣ. ಹೀಗಾಗಿ ಆತ ಸಾಕಷ್ಟು ಲೋಹದ ವಸ್ತುಗಳನ್ನು ತಿಂದಿದ್ದಾನೆ. ಅವುಗಳಲ್ಲಿ ಕೆಲವು ಸಹಜ ಮಲ ವಿಸರ್ಜನೆಯ ಮೂಲಕ ಹೊರಹೋಗಿದೆ. ಆದರೆ ಇನ್ನುಳಿದವು ಹೊಟ್ಟೆಯಲ್ಲಿದ್ದವು ಅನ್ನೋದನ್ನ ವೈದ್ಯರು ತಿಳಿಸಿದ್ದಾರೆ.