ವಿಚಿತ್ರ ಆದರೂ ಸತ್ಯ

ಈ ವ್ಯಕ್ತಿಗೆ ಬರೋಬ್ಬರಿ 19 ಸಲಿ ಸರ್ಜರಿ ಮಾಡಿದರು ಸರಿ ಆಗಿಲ್ಲ..! ಇತನ ವಿಚಿತ್ರ ಕಾಯಿಲೆ ಏನು ಗೊತ್ತಾ..?

By admin

February 03, 2018

ಕಳೆದ ಕೆಲ ವರ್ಷಗಳಿಂದ ಎಪಿಡರ್ಮೋಡೈಸ್ ಪ್ಲಾಸಿಯಾ ವೆರುಸಿಫಾರ್ಮ್ (ಟ್ರೀ ಮ್ಯಾನ್ ರೋಗ) ಎಂಬ ವಿಚಿತ್ರವಾದ ಚರ್ಮದ ಕಾಯಿಲೆಗೆ ತುತ್ತಾಗಿ ಕೈಯ್ಯಾರೆ ಊಟ ಅಥವಾ ಬೇರೆ ಕೆಲಸ ಮಾಡಲು ಕಷ್ಟ ಪಡುತ್ತಿದ್ದ ಬಾಂಗ್ಲಾದೇಶದ 27 ವರ್ಷದ ಅಬುಲ್ ಬಜಂದಾರ್‌ಗೆ ಬರೋಬ್ಬರಿ 19 ಶಸ್ತ್ರ ಚಿಕಿತ್ಸೆ ಮಾಡಿದ್ರೂ ತೊಂದರೆ ನಿವಾರಣೆ ಆಗಿಲ್ಲ.

ಎಪಿಡರ್ಮೋಡೈಸ್ ಪ್ಲಾಸಿಯಾ ವೆರುಸಿಫಾರ್ಮ್ ರೋಗದಿಂದ ಬಳಲುತ್ತಿದ್ದ ಅಬುಲ್‌ನ ಎರಡು ಕೈ ಬೆರಳುಗಳ ಉಗುರು ವಿಚಿತ್ರವಾಗಿ ಬೆಳೆದು ಮರದ ತೊಗಟೆ ರೀತಿಯಾಗಿದ್ದವು. ನಂತರ ಗಡ್ಡೆಗಳಂತೆ ಒಂದಕ್ಕೊಂದು ಅಂಟಿಕೊಂಡಿದ್ದವು. ಈಗಾಗಲೇ ಢಾಕಾ ವೈದ್ಯಕೀಯ ಕಾಲೇಜಿನ ವೈದ್ಯ ಹಾಗೂ ಪ್ಲಾಸ್ಟಿಕ್ ಸರ್ಜರಿ ಪರಿಣಿತ ಸಮಂತಾ ಲಾಲ್ ಸೇನ್ ಸರ್ಜರಿ ಮಾಡಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 19 ಸರ್ಜರಿ ನಡೆಸಲಾಗಿದ್ದು, ಇಷ್ಟಾದರೂ ಆತನ ಕೈ ಸರಿಹೋಗಿಲ್ಲ.

ಕಳೆದ 2 ವರ್ಷಗಳಿಂದ ಆತನಿಗೆ ಢಾಕಾ ವೈದ್ಯಕೀಯ ಕಾಲೇಜಿನಲ್ಲಿಟ್ಟುಕೊಂಡು ಚಿಕಿತ್ಸೆ ನೀಡಲಾಗುತ್ತಿದ್ದು, ಇಷ್ಟಾದರೂ ಆತನ ಕೈ ಸರಿಯಾಗಿಲ್ಲ. ಇನ್ನು ಒಂದು ಅಥವಾ ಎರಡು ಶಸ್ತ್ರಚಿಕಿತ್ಸೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಬುಲ್ ಬಜಂದಾರ್‌ ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕಾರಣ ಆತನ ಮಕ್ಕಳು ಶಾಲೆಗೆ ಹೋಗಿಲ್ಲ. ತಂದೆಯೊಂದಿಗೆ ಇಡೀ ಕುಟುಂಬ ಆಸ್ಪತ್ರೆಯಲ್ಲಿನ ಇನ್ನೊಂದು ಬೆಡ್‌‌‌ ಮೇಲೆ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಬುಲ್‌, ಶೀಘ್ರವಾಗಿ ನಾನು ಗುಣಮುಖವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.