ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮದ್ಯಪ್ರಿಯರಿಗೆ ಮದ್ಯಪಾನ ಮಾಡಲು ಮದ್ಯದ ಬಾಟಲಿಗಳನ್ನು ಹಿಡಿದುಕೊಂಡು ಓಡಾಡುವ ಅಥವಾ ಗ್ಲಾಸ್ ಗಳನ್ನು ಹೊಂದಿಸುವ ಗೋಜು ಇರುವುದಿಲ್ಲ.ಇದರ ಬದಲಾಗಿ ಕ್ಯಾಪ್ಸೂಲ್ ಮದ್ಯ ಬರುತ್ತಿದೆ. ಸ್ಕಾಟ್ಲೆಂಡ್ ನ ಮದ್ಯದ ಕಂಪನಿಯೊಂದು ಇಂತಹ ವಿಸ್ಕಿ ಕ್ಯಾಪ್ಸೂಲ್ ಅನ್ನು ಪರಿಚಯಿಸಿದೆ.
195 ವರ್ಷಗಳಷ್ಟು ಹಳೆಯದಾದ ಸ್ಕಾಚ್ ವಿಸ್ಕಿ ಕಂಪನಿ ಈ ಗ್ಲಾಸ್ ಲೆಸ್ ಮದ್ಯವನ್ನು ಬಿಡುಗಡೆ ಮಾಡಿದೆ.ಈ ಕ್ಯಾಪ್ಸೂಲ್ ಕುರಿತ 53 ಸೆಕೆಂಡುಗಳ ವಿಡೀಯೋವನ್ನು ಬಿಡುಗಡೆ ಮಾಡಿರುವ ಕಂಪನಿ ಸರಳವಾದ ರೀತಿಯಲ್ಲಿ ಎಂಜಾಯ್ ಮಾಡಬಹುದು ಎಂದು ಹೇಳಿಕೊಂಡಿದೆ.
ಮೂರು ಫ್ಲೇವರ್ ಗಳ ಕ್ಯಾಪ್ಸೂಲ್ ಗಳಿದ್ದು, ಮದ್ಯಪ್ರಿಯರು ತಮಗಿಷ್ಟವಾದ ಕ್ಯಾಪ್ಸೂಲ್ ಅನ್ನು ಪಡೆದ ಅದನ್ನು ನುಂಗಿದರೆ ಸಾಕು ಎನ್ನುತ್ತದೆ ಕಂಪನಿ.
ಆದರೆ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಹಲವಾರು ಮಂದಿ, ಸ್ಕಾಟ್ಲೆಂಡ್ ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದ್ದರೆ, ಮತ್ತೆ ಕೆಲವು, ದೇಶದಲ್ಲಿ ಏನು ನಡೆಯುತ್ತಿದೆ. ಇಂತಹ ಗೊಂದಲಕಾರಿ ಉತ್ಪನ್ನಗಳನ್ನು ಪರಿಚಯಿಸಿರುವ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.