ವೈವಾಹಿಕ ಹಿಂಸೆ, ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಹಿಳೆಯರಿಂದ ಹೆಚ್ಚಿನ ದೂರು ದಾಖಲಾಗುವುದು ಸಾಮಾನ್ಯ ಸಂಗತಿ. ಆದರೆ, ಉತ್ತರ ಪ್ರದೇಶದಲ್ಲಿ 6500 ಕ್ಕೂ ಅಧಿಕ ಮಂದಿ ತಮ್ಮ ಪತ್ನಿ ಹೊಡಿತಾಳೆ ಎಂದು ಯು.ಪಿ. -100 ಗೆ ಕರೆ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಯು.ಪಿ. -100 ಸಹಾಯವಾಣಿ ಆರಂಭಿಸಲಾಗಿದೆ. ತಮ್ಮ ಸಂಗಾತಿಯ ಕ್ರೋಧವನ್ನು ನಿಭಾಯಿಸಲು ಸಾಧ್ಯವಾಗ್ತಿಲ್ಲ ಎಂದು ಪತ್ನಿಯರಿಂದ ಜರ್ಜರಿತರಾಗಿರುವ ಪುರುಷರು ಪೊಲೀಸರ ಸಹಾಯವನ್ನು ಪಡೆದುಕೊಂಡಿದ್ದಾರೆ.
1 ವರ್ಷದ ಅವಧಿಯಲ್ಲಿ ಯು.ಪಿ. -100 ಗೆ ಸುಮಾರು 43 ಲಕ್ಷ ಕರೆಗಳು ಪೊಲೀಸ್ ಸಹಾಯಕ್ಕಾಗಿ ಬಂದಿದ್ದು, 7 ಲಕ್ಷ ದೂರುಗಳು ಗೃಹ ಹಿಂಸಾಚಾರಕ್ಕೆ ಸಂಬಂಧಿಸಿದ್ದಾಗಿವೆ.
ಸರಾಸರಿ 419 ಕರೆಗಳನ್ನು ಸ್ವೀಕರಿಸಲಾಗಿದೆ. 1.53 ಲಕ್ಷ ಮಂದಿ ವೈವಾಹಿಕ ಹಿಂಸೆಯ ದೂರು ನೀಡಿದ್ದಾರೆ. 6,500 ಕ್ಕೂ ಅಧಿಕ ಮಂದಿ ಪುರುಷರು ಪತ್ನಿಯರ ಕಾಟ ತಾಳದೇ ನೆರವು ಯಾಚಿಸಿದ್ದಾರೆ.
ಲಖ್ನೋ ವಿಭಾಗದಿಂದ ಅತಿಹೆಚ್ಚು ಗೃಹ ಹಿಂಸೆ ದೂರುಗಳು ಬಂದಿವೆ. ನಗರ ಪ್ರದೇಶಗಳಲ್ಲಿ ಹೆಚ್ಚು ಹಿಂಸಾಚಾರ ಪ್ರಕರಣಗಳ ಬಗ್ಗೆ ದೂರು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.