ಸ್ಪೂರ್ತಿ

ಈ ಬಾಲಕ ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ..!ತಿಳಿಯಲು ಈ ಲೇಖನ ಓದಿ..

By admin

February 21, 2018

ಸಾಧನೆ ಮಾಡುವವರಿಗೆ ವಯಸ್ಸು ಮುಖ್ಯ ಅಲ್ಲ ಅನ್ನೋದನ್ನ ಈ ಬಾಲಕ ತೋರಿಸಿ ಕೊಟ್ಟಿದ್ದಾನೆ. ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿರುವ ಈತನ ಹೆಸರು ಮನ್ಸೂರ್‌ ಅನೀಸ್‌ ಎಂಬುದಾಗಿ.

ಈತನ ಸಾಧನೆಯ ವೈಖರಿ.! ಪಾರ್ಕಿಂಗ್‌ ನಲ್ಲಿ ನಿಲ್ಲಿಸಲಾಗಿದ್ದ ವಿಮಾನವನ್ನು ರನ್‌ವೇಗೆ ತಂದು ಹಾರಾಟ ಮಾಡಲು 10 ನಿಮಿಷ ತೆಗೆದುಕೊಂಡ ಮನ್ಸೂರ್‌, ಐದು ನಿಮಿಷ ಕಾಲ ಹಾರಾಟ ನಡೆಸಿ ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ.

‘ಸೆಸ್ನಾ152’ ವಿಮಾನದಲ್ಲಿ ಹಾರಾಟ ನಡೆಸಿದ ಬಾಲಕ ಸದ್ಯ ವಿದ್ಯಾರ್ಥಿ ವಿಮಾನ ಚಾಲನೆ ಪರವಾನಗಿ ಪಡೆದುಕೊಂಡಿದ್ದಾನೆ. ತರಬೇತಿ ಅಕಾಡೆಮಿ ನಡೆಸಿದ ಪರೀಕ್ಷೆ ವೇಳೆ ರೇಡಿಯೊ ಸಂವಹನ ಪರೀಕ್ಷೆಯನ್ನೂ ಯಶಸ್ವಿಯಾಗಿ ಮುಗಿಸಿರುವ ಮನ್ಸೂರ್‌, ಶೇ 96 ಅಂಕ ಗಳಿಸಿದ್ದಾನೆ.

ಈ ಹಿಂದೆ ವಿಶ್ವದ ಕಿರಿಯ ವಿಮಾನ ಚಾಲಕ ಎಂಬ ದಾಖಲೆ ಜರ್ಮನಿಯ 15 ವರ್ಷ‌ದ ಬಾಲಕನ ಹೆಸರಿನಲ್ಲಿತ್ತು. ಈಗ ಆ ದಾಖಲೆಯನ್ನು ಮೀರಿಸಿದ್ದಾನೆ.ಜರ್ಮನಿಯ ಬಾಲಕ ಒಟ್ಟು 34 ಗಂಟೆಗಳ ತರಬೇತಿ ಪಡೆದಿದ್ದ. ಆದರೆ ಭಾರತೀಯ ಮನ್ಸೂರ್‌ 25 ಗಂಟೆಗಳ ತರಬೇತಿ ಪಡೆದು ಈ ಸಾಧನೆ ಮಾಡಿದ್ದಾನೆ.