ಗ್ಯಾಜೆಟ್

ಈ ಫೋನ್ ಗಳಲ್ಲಿ ಹೊಸ ವರ್ಷಕ್ಕೆ ಕೊನೆಗೊಳ್ಳಲಿದೆ ವಾಟ್ಸಾಪ್ ಸೇವೆ..!ತಿಳಿಯಲು ಈ ಲೇಖನ ಓದಿ..

By admin

December 26, 2017

ಅಂತರ್ಜಾಲ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಜಾಸ್ತಿಯಾಗಿದೆ. ಜನಪ್ರಿಯ ಜಾಲತಾಣವಾಗಿರುವ ವಾಟ್ಸಾಪ್ ಡಿಸೆಂಬರ್ 31 ರಿಂದ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ.

 

 

ಬ್ಲ್ಯಾಕ್‌ಬೆರಿ ಒಎಸ್, ಬ್ಲ್ಯಾಕ್‌’ಬೆರಿ 10 ಮತ್ತು ವಿಂಡೋಸ್ 8.0 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದು ಕಹಿ ಸುದ್ದಿಯಿದೆ. ಈ ಎಲ್ಲಾ ಫೋನ್ ಬಳಕೆದಾರರಿಗೆ 2017, ಡಿ.31ರ ನಂತರ ವಾಟ್ಸಾಪ್ ತನ್ನ ಸೇವೆ ಕೊನೆಗೊಳಿಸಲಿದೆ. ಈ ಫೋನ್ ಗಳಿಗೆ ವಾಟ್ಸಾಪ್ ಅನ್ನು ಹೊಸದಾಗಿ ಅಭಿವೃದ್ಧಿಪಡಿಸಲಾಗುವುದಿಲ್ಲ.

ಫೇಸ್ ಬುಕ್ ಒಡೆತನದ ಮೊಬೈಲ್ ಮೆಸೇಂಜಿಂಗ್ ಆಪ್ ಆಗಿರುವ ವಾಟ್ಸಾಪ್ ಕೆಲವೊಂದು ಸ್ಮಾರ್ಟ್ ಫೋನ್ ಗಳಲ್ಲಿ ಡಿಸೆಂಬರ್ 31 ರಿಂದ ಕೆಲಸ ಮಾಡುವುದಿಲ್ಲ.ಈ ಸಂಬಂಧ ವಾಟ್ಸಾಪ್ ಬ್ಲಾಗ್‌ನಲ್ಲಿ ಸ್ಪಷ್ಟ ಮಾಹಿತಿ ನೀಡಲಾಗಿದೆ. ನೋಕಿಯಾ ಎಸ್‌40ಯಿಂದಲೂ ತಮ್ಮ ಸೇವೆ 2018, ಡಿ.31ರಿಂದ ಕೊನೆಯಾಗಲಿದೆ ಎಂದು ತಿಳಿಸಿತ್ತು.

ಅಲ್ಲದೆ, ಆ್ಯಂಡ್ರಾಯ್ಡ್ 3.3.7 ಮತ್ತು ಅದಕ್ಕಿಂತ ಹಳೆಯ (ಜಿಂಜರ್‌ಬ್ರೆಡ್) ಫೋನ್‌ಗಳಲ್ಲಿ 2020, ಫೆ.1ರಿಂದ ಕಾರ್ಯ ಸ್ಥಗಿತಗೊಳಿಸುವುದಾಗಿ ಆ್ಯಪ್ ತಿಳಿಸಿತ್ತು.

ವಾಟ್ಸಾಪ್ ನ ಹಲವು ಫೀಚರ್ ಗಳನ್ನು(ವೈಶಿಷ್ಟ್ಯಗಳನ್ನು) ಭವಿಷ್ಯದಲ್ಲಿ ಬದಲಾವಣೆ ಮಾಡಲಾಗ್ತಿದೆ. ಭವಿಷ್ಯದ ಫೀಚರ್ ಗಳಿಗೆ ಈ ಸ್ಮಾರ್ಟ್ ಫೋನ್ ಗಳು ಸಪೋರ್ಟ್ ಮಾಡುವುದಿಲ್ಲ.

ಇಂತಹ ಫೋನ್ ಗಳಲ್ಲಿ ವಾಟ್ಸಾಪ್ ಬಳಕೆ ಮಾಡಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಸ ಒ.ಎಸ್. ವರ್ಷನ್ ಗೆ ಬದಲಿಸಿಕೊಳ್ಳಬೇಕಿದೆ. ಅಂಡ್ರಾಯಿಡ್ OS 4.0+ , ಐಫೋನ್ iOS 7+, ವಿಂಡೋಸ್ ಫೋನ್ 8.1+ ಅಪ್ ಗ್ರೇಡ್ ಮಾಡಿಕೊಳ್ಳಬೇಕಿದೆ.