ಉಪಯುಕ್ತ ಮಾಹಿತಿ

ಈ ಫೋನ್ ಖರೀದಿ ಮಾಡಿದ್ರೆ ನಿಮಗೆ ಉಚಿತವಾಗಿ ಸಿಗುತ್ತೆ 100 ಜಿಬಿ ಡೇಟಾ..!ತಿಳಿಯಲು ಈ ಲೇಖನ ಓದಿ ..

By admin

November 14, 2017

ಚೀನಾ ಹ್ಯಾಂಡ್ಸೆಟ್ ತಯಾರಿಕಾ ಕಂಪನಿ ಒಪೋ ತನ್ನ ಹೊಸ ಸ್ಮಾರ್ಟ್ಫೋನ್ ಗೆ ಭರ್ಜರಿ ಆಫರ್ ನೀಡ್ತಿದೆ. ಕಂಪನಿ ಇದಕ್ಕಾಗಿ ತನ್ನ ಪಾಲುದಾರ ಕಂಪನಿ ರಿಲಾಯನ್ಸ್ ಜಿಯೋ ಜೊತೆ ಕೈಜೋಡಿಸಿದೆ.

ಈ ಸ್ಕೀಮ್ ಪ್ರಕಾರ ಒಪ್ಪೋ ಹೊಸ ಸ್ಮಾರ್ಟ್ಫೋನ್ ಖರೀದಿ ಮಾಡುವ ಹಾಗೂ 399 ರೂಪಾಯಿಗಿಂತ ಹೆಚ್ಚು ರಿಚಾರ್ಜ್ ಮಾಡುವ ಗ್ರಾಹಕರಿಗೆ ಜಿಯೋದಿಂದ 100 ಜಿಬಿ 4ಜಿ ಡೇಟಾ ಸಿಗಲಿದೆ. ಅಂದ್ರೆ ಪ್ಲಾನ್ ಜೊತೆ ಸಿಗುವ ಡಾಟಾ ಜೊತೆ ಪ್ರತ್ಯೇಕವಾಗಿ 100 ಜಿಬಿ ಡೇಟಾ ಸಿಗಲಿದೆ.

ಒಪ್ಪೋ ಭಾರತದ ನಿರ್ದೇಶಕ ವಿಲ್ ಯಾಂಗ್ ಈ ವಿಷ್ಯವನ್ನು ತಿಳಿಸಿದ್ದಾರೆ. ಜಿಯೋ ಜೊತೆ ಶುರುವಾಗಿರುವ ಈ ಹೊಸ ಸ್ಕೀಮ್ ಒಪ್ಪೋ 4ಜಿ ಫೋನ್ ಖರೀದಿ ಮಾಡಿದ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ ಎಂದವರು ತಿಳಿಸಿದ್ದಾರೆ.

ಸದ್ಯ ಒಪ್ಪೋ ಭಾರತದಲ್ಲಿ  Oppo F3 Plus ಬಿಡುಗಡೆ ಮಾಡಿದೆ. ಇದು 6 ಜಿಬಿ RAM ಜೊತೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಬೆಲೆ 22,990 ರೂಪಾಯಿ.

ಈ ಫೋನನ್ನು ಗ್ರಾಹಕರು ನವೆಂಬರ್ 16ರ ನಂತ್ರ ಖರೀದಿ ಮಾಡಬಹುದಾಗಿದೆ.