ಸುದ್ದಿ

ಈ ಪ್ರದೇಶದಲ್ಲಿ ಗಂಡಂದಿರು ತಮ್ಮ ಪತ್ನಿಯರನ್ನು ಬಾಡಿಗೆಗೆ ನೀಡುತ್ತಾರಂತೆ..!ಮುಂದೆ ಓದಿ ಶಾಕ್ ಆಗ್ತೀರಾ…

By admin

April 23, 2018

ಹಸಿವು, ಬಡತನ ಅನ್ನೋದು ಯಾರಿಂದ ಎಂಥ ಕೆಲಸ ಬೇಕಾದರೂ ಮಾಡಿಸುತ್ತೆ. ಕೀನ್ಯಾ ದೇಶಲ್ಲಿ ಬಡತನದಿಂದಾಗಿ ಕೆಲವರು ತಂತಮ್ಮ ಪತ್ನಿಯರನ್ನೇ ಬಾಡಿಗೆಗೆ ನೀಡುವಂಥ ದುಃಸ್ಥಿತಿ ಅಲ್ಲಿದೆ.

ಕೀನ್ಯಾದಲ್ಲಿ ಬಡತನದ ಪ್ರಮಾಣ ಎಷ್ಟಿದೆಯೆಂದರೆ ನಮ್ಮಲ್ಲಿ ಗಂಡ ಹಾಗೂ ಹೆಂಡತಿ ಕೆಲಸಕ್ಕೆಂದು ಆಫೀಸಿಗೆ ಹೋದಂತೆ ಅಲ್ಲಿ ಪ್ರವಾಸಿಗರಿಗೆ ಮೈಮಾರಿಕೊಳ್ಳಲು ಹೋಗುತ್ತಾರೆ. ಶ್ರೀಮಂತ ವಿದೇಶಿ ಪ್ರವಾಸಿಗರಿಂದ ಸಾಕಷ್ಟು ಹಣ ಪಡೆದು ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುತ್ತಾರೆ.ದುಡಿದು ಗಳಿಸುವ ಹಣ ಊಟಕ್ಕೂ ಸಾಲುತ್ತಿಲ್ಲವಾದಾಗ ಗಂಡನೇ ಪತ್ನಿಯನ್ನು ಈ ದಂಧೆಗೆ ಕಳುಹಿಸುವುದು ಅಲ್ಲಿ ಕಾಮನ್.

ಹಾಗೆಯೇ ಪತ್ನಿಗೂ ಬೇರೆ ದಾರಿಯಿಲ್ಲದೇ ಕೆಟ್ಟ ಪರಿಸ್ಥಿತಿಯನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ. ಈ ಕೆಲಸ ಮಾಡಿದರೆ ಮಾತ್ರ ಮೂರೊತ್ತು ಊಟ, ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯ ಎನ್ನುತ್ತಾರೆ ಅಲ್ಲಿನ ಸ್ಥಳೀಯರು.

ಹಾಗಂತ ಪೂರ್ವ ಆಫ್ರಿಕಾ 2016ರಲ್ಲಿ ಸುಮಾರು ಒಂದು ಮಿಲಿಯನ್ ಪ್ರವಾಸಿಗರನ್ನು ಬರಮಾಡಿಕೊಂಡಿದೆ. ಇದರಿಂದ ಸಾಕಷ್ಟು ಆದಾಯವನ್ನೂ ಅಲ್ಲಿನ ಸರ್ಕಾರ ಗಳಿಸುತ್ತೆ. ಆದರೆ ಅಲ್ಲಿನ ಸ್ಥಳೀಯರಿಗೆ ಮಾತ್ರ ಯಾವುದೇ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಬಡತನ, ನಿರುದ್ಯೋಗ, ಮೂಲಭೂತ ಸೌಕರ್ಯಗಳಿಂದ ಅಲ್ಲಿನ ಸ್ಥಳೀಯರು ನಲುಗುತ್ತಿದ್ದಾರೆ.

ಆಶ್ಚರ್ಯ ಎಂದರೆ ಆಫ್ರಿಕಾದ ಅತ್ಯುತ್ತಮ ಬೀಚ್ ಗಳಲ್ಲಿ 7 ನೇ ಸ್ಥಾನದಲ್ಲಿರುವ ದಿಯಾನಿ ಬೀಚ್ ಬಳಿಯಲ್ಲೇ ಇಂಥ ವೇಶ್ಯಾವಾಟಿಕೆ ಅತಿಹೆಚ್ಚು. ಈ ಬಗ್ಗೆ ಕೀನ್ಯಾ ಸರ್ಕಾರ ಗೊತ್ತಿದ್ದೂ ಕಣ್ಮುಚ್ಚಿ ಕುಳಿತಿದೆ. ಇದರಿಂದಾಗಿಯೇ ವರ್ಷದಿಂದ ವರ್ಷಕ್ಕೆ ಕೀನ್ಯಾದಲ್ಲಿ ಹೆಚ್ಐವಿ ಏಡ್ಸ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಆತಂಕದ ವಿಷಯ.