*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*
ಕೆಲವು ದಿನಗಳ ಹಿಂದಯೇ ನಟಿ ಶ್ರೀರೆಡ್ಡಿ, ತೆಲುಗು ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಹೇಳಿಕೆ ನೀಡಿದ್ದರು. ‘ನೇನು ನಾನಾ ಅಪದ್ಧಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶ್ರೀರೆಡ್ಡಿ, ಮಂಚ ಹಂಚಿಕೊಳ್ಳಲು ಸಿದ್ಧವಿರುವವರಿಗೆ ಮಾತ್ರ ಚಾನ್ಸ್ ಕೊಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಇದಲ್ಲದೆ ತೆಲುಗು ಸಿನಿಮ ಕಲಾವಿದರ ಸಂಘದಿಂದ ಗುರುತಿನ ಚೀಟಿ ನೀಡದ ಸಂಭಂದ ಶ್ರೀರೆಡ್ಡಿ,ಹೈದರಾಬಾದ್’ನ ಫಿಲ್ಮ್ ಚೇಂಬರ್ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ವಿವಾದವಾಗಿದ್ದರು.
ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ,ತೆಲುಗು ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿ ಶ್ರೀ ರೆಡ್ಡಿ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ (ಲೈಂಗಿಕ ಶೋಷಣೆ) ಇದೆ ಎಂದು ಆರೋಪಿಸುತ್ತ ಬಂದಿರುವ ತೆಲುಗು ನಟಿ ಶ್ರೀ ರೆಡ್ಡಿಯ ಆರೋಪಕ್ಕೆ ಈಗ ಸಾಕ್ಷ್ಯ ದೊರೆತಿದೆ.
ಹೌದು, ನಟಿ ಶ್ರೀರೆಡ್ಡಿ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ದಗ್ಗುಬಾಟಿ ಜತೆ ಆತ್ಮೀಯವಾಗಿ ನಿಂತಿರುವ, ಕಿಸ್ ಮಾಡುತ್ತಿರುವ ಚಿತ್ರಗಳು ಲೀಕ್ ಮಾಡಿದ್ದು, ಇದನ್ನು ನೋಡಿ ಇಡೀ ತೆಲುಗು ಚಿತ್ರರಂಗವೇ ಬೆಚ್ಚಿ ಬಿದ್ದಿದೆ.
ಇದನ್ನೂ ಓದಿ:ನ್ಯಾಯಕ್ಕಾಗಿ ಬಟ್ಟೆ ಬಿಚ್ಚಿ ಪ್ರತಿ ಭಟನೆ ನಡೆಸಿದ ಖ್ಯಾತ ನಟಿ..!
ನಿರ್ಮಾಪಕರ ಮಗ ನನ್ನನ್ನು ಸ್ಟುಡಿಯೋಗೆ ಕರೆದುಕೊಂಡು ಹೋಗಿ ನನ್ನನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.ನಿರ್ಮಾಪಕ ಸುರೇಶ್ ಬಾಬು ಪುತ್ರ ಅಭಿರಾಮ, ನನ್ನನ್ನು ಹೈದರಾಬಾದ್ನಲ್ಲಿರುವ ಸ್ಟುಡಿಯೋಗೆ ಕರೆಸಿಕೊಂಡು ನನ್ನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ಅದಕ್ಕೆ ಸಾಕ್ಷ್ಯ ಎಂಬಂತೆ ಅಭಿರಾಮ ಜೊತೆಯಲ್ಲಿರುವ ಕೆಲವು ಫೋಟೋಗಳನ್ನು ಲೀಕ್ ಮಾಡಿದ್ದಾರೆ. ಆ ಫೋಟೋಗಳಲ್ಲಿ ಅಭಿರಾಮ ಶ್ರೀರೆಡ್ಡಿಯನ್ನು ತಬ್ಬಿಕೊಂಡಿರುವ,ಹಾಗೂ ಚುಂಬಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ದೊಡ್ಡ ದೊಡ್ಡ ನಿರ್ಮಾಪಕರು, ನಿರ್ದೇಶಕರು ತಮ್ಮ ಲೈಂಗಿಕ ಕಾಮನೆಗಳನ್ನು ಈಡೇರಿಸಿಕೊಳ್ಳಲು ಸ್ಟುಡಿಯೋಗಳನ್ನೂ ತಮ್ಮ ಅಡ್ಡವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರ ಜೊತೆಗೆ ತಮಗೆ ಚಾನ್ಸ್ ಕೊಡಿಸುವುದಾಗಿ ನಂಬಿಸಿ, ಮೋಸ ಮಾಡಿರುವ ಇನ್ನೂ ಅನೇಕ ದೊಡ್ಡ ದೊಡ್ಡ ನಿರ್ಮಾಪಕ ಮಕ್ಕಳ ಫೋಟೋಗಳನ್ನು ಲೀಕ್ ಮಾಡುವುದಾಗಿ ಹೇಳಿದ್ದು, ಇದರಿಂದ ಟಾಲಿವುಡ್ ಶೇಕ್ ಆಗಿ ಹೋಗಿದೆ.