ಇಸ್ರೇಲ್ ದೇಶವು ಭಾರತವನ್ನು ಅದ್ಯಾಕೆ ಅಷ್ಟು ಪ್ರೀತಿಸುತ್ತೇ, ಮತ್ತು ಭಾರತವನ್ನು ತನ್ನ ಆತ್ಮೀಯ ಮಿತ್ರ ಅಂತ್ಯಾಕೆ ಕರೆಯುತ್ತೆ ಗೊತ್ತಾ …?
ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಲ್ಲಿಯವರೆಗೆ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ, ಕಾರಣ ಇಸ್ರೇಲ್’ಗೆ ಭೇಟಿ ಕೊಟ್ಟರೆ, ಎಲ್ಲಿ ತಮ್ಮ ದೇಶದ ಮುಸಲ್ಮಾನರ ಹಾಗೂ ಅರಬ್ ದೇಶಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತೋ ಅಂತ ಇಲ್ಲಿಯವರೆಗೂ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ಕೊಟ್ಟಿರಲಿಲ್ಲ.
ಹಾಗಾಗಿ 70 ವರ್ಷಗಳಿಂದ ಮಾತ್ರವಲ್ಲ 2000 ವರ್ಷಗಳಿಂದ ಇಸ್ರೇಲ್ ಭಾರತದ ರಾಜನಿಗಾಗಿ ಕಾಯುತಿತ್ತು ಎಂದರೆ ನೀವು ನಂಬಲು ಅಸಾಧ್ಯ?
ಕಾರಣ ಏನು ಗೊತ್ತಾ?
ಹೌದು, ಜರ್ಮನಿಯಲ್ಲಿ 2ನೇ ಮಹಾಯುದ್ದ ಶುರುವಾದಾಗ, ಹಿಟ್ಲರ್’ನ (ನಾಜೀಸಂ)ನ ಕ್ರೌರ್ಯಕ್ಕೆ ಬಲಿಯಾಗಿ ಗ್ಯಾಸ್ ಚೇಮ್ಬ್’ರ್’ನಲ್ಲಿ ಲಕ್ಷಾಂತರ ಯಹೂದಿಗಳು ಉಸಿರುಗಟ್ಟಿ ಪ್ರಾಣ ಬಿಟ್ಟರು. ಇಲ್ಲಿ ಓದಿ :- ಇದು ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ!!!
ಇಷ್ಟೆಲ್ಲಾ ದೌರ್ಜನ್ಯಗಳು ಯಹೂದಿಗಳ ಮೆಲಾಗುತ್ತಿರುವಾಗ ಅವರು ಒಂದು ರಾಷ್ಟ್ರದಿಂದ ಬೇರೆ ಇನ್ನೊಂದು ರಾಷ್ಟ್ರಕ್ಕೆ ಪ್ರಾಣಭಿಕ್ಷೆಗಾಗಿ ಹೋದರೆ, ಆ ರಾಷ್ಟ್ರಗಳಲ್ಲಿಯೂ ಕೂಡ ಮಾರಣಹೋಮ ಮತ್ತು ನಮ್ಮ ರಾಷ್ಟ್ರದಲ್ಲಿ ನಿಮಗೆ ಜಾಗವಿಲ್ಲ ಅನ್ನೋ ಉತ್ತರದಿಂದ ಬೇರೆ ದಾರಿ ಕಾಣದೆ ಯಹೂದಿಗಳು ಕಂಗೆಟ್ಟು ಹೋಗಿದ್ದರು.
ಆದರೆ ಯಹೂದಿಗಳಿಗೆ ಒಂದು ದೇಶ ಮಾತ್ರ, ಅದೂ 2000 ವರ್ಷಗಳಿಂದ ಆಶಾಕಿರಣವಾಗಿ ನಿಂತದ್ದು ಮಾತ್ರ ನಮ್ಮ ಭಾರತ ದೇಶ.
ಭಾರತಕ್ಕೆ ಯಹೂದಿಗಳು 2000 ವರ್ಷಗಳ ಹಿಂದೆ ಬಂದಿದ್ದರು, ಅನ್ನೋ ಕುರುಹುಗಳು ಭಾರತದಲ್ಲಿ ಸಿಗುತ್ತವೆ, ಯಹೂದಿಗಳಿದ್ದ ದೊಡ್ಡ ಹಡುಗು ಭಗ್ನವಾಗಿ ಅಳಿದುಳಿದ ಕೆಲ ಯಹೂದಿಗಳು ಮೊದಲು ಬಂದು ಆಶ್ರಯ ಪಡೆದದ್ದು ಭಾರತದಲ್ಲಿ.
ಯಾವ ರಾಷ್ಟ್ರದಲ್ಲೂ ಸಿಗದ ಆದರ ಆತಿತ್ಯ ಯಹೂದಿಗಳಿಗೆ ಬಾರತದಲ್ಲಿ ಮಾತ್ರ ದೊರೆಯಿತು. ಜೀವರಕ್ಷಣೆಗಾಗಿ ಭಾರತಕ್ಕೆ ಬಂದ ಯಹೂದಿಗಳಿಗೆ ನಮ್ಮ ಭಾರತ ಆಶ್ರಯ ನೀಡಿ ಅವರನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿತ್ತು.
ಯಾವ ದೇಶಕ್ಕೂ ಹೋದ್ರೂ ತಮ್ಮ ಆಚರಣೆಗಳನ್ನು ಸಂಸ್ಕೃತಿಯನ್ನು ಹೇರುತ್ತಿದ್ದ ದೇಶಗಳ ನಡುವೆ ನಮ ಭಾರತ ಮಾತ್ರ ಯಹೂದಿಗಳಿಗೆ ತನ್ನ ಆಚರಣೆಯನ್ನು ಪಾಲಿಸಲು ಅವಕಾಶ ನೀಡಿತ್ತು.
ಅನೇಕ ಯಹೂದಿಗಳು ಭಾರತದಲ್ಲೇ ಉಳಿದು ಇಲ್ಲಿನ ಆಚಾರ ವಿಚಾರ ಸಂಸ್ಕೃತಿಯನ್ನು ಪಾಲಿಸುತ್ತಾ “we are proud Indian” ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತಾರೆ.