ಹಿಂದೂ ರಾಷ್ರ ಭಾರತದಲ್ಲಿ ದೇವಾಲಯಗಳು, ಭಾರತದ ಜನರ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿವೆ.ಭಾರತದಲ್ಲಿ ಎಲ್ಲಿ ಹೋದರು ದೇವಾಲಯಗಳ ಕಾಣಸಿಗುತ್ತವೆ. ಜನ ಎಷ್ಟೇ ಕಷ್ಟ ಸುಖಗಳಿದ್ದರೂ ಮನಸ್ಸಿನ ನೆಮ್ಮದಿಗಾಗಿ ದೇವಾಲಯಗಳಿಗೆ ಹೋಗುತ್ತಾರೆ.
ಇಲ್ಲಿ ಎಷ್ಟೋ ದೇವಾಲಯಗಳಲ್ಲಿ ಎಷ್ಟೋ ವಿಚಿತ್ರಗಳು ನಡೆಯುತ್ತವೆ.ಇದೇ ತರ ಉತ್ತರಾಖಂಡ್ ನ ಫತೇಪುರದಲ್ಲಿರುವ ಗೋಪಾಲ್ ಬಿಶ್ತ್ ದೇವಾಲಯದಲ್ಲಿ ವಿಚಿತ್ರ ಸಂಪ್ರದಾಯವೊಂದು ನಡೆಯುತ್ತದೆ.
ಈ ದೇವಾಲಯದ ವಿಶೇಷತೆ ಮತ್ತು ಆ ವಿಚಿತ್ರ ಸಂಪ್ರದಾಯ ಏನು ಗೊತ್ತಾ..?
ಎಲ್ಲಾ ದೇವಾಲಯಗಳಲ್ಲಿ ದೇವರ ಪೂಜೆಗಾಗಿ, ದೇವರಿಗೆ ಹಣ್ಣು-ಕಾಯಿ, ನೈವೇದ್ಯ, ಕಾಣಿಕೆಗಳನ್ನು ಅರ್ಪಿಸುವುದರ ಜೊತೆಗೆ, ಹರಕೆಗಳನ್ನು ಹೊರುವುದು ಸಾಮಾನ್ಯ.ಆದರೆ ಈ ದೇವಾಲಯದಲ್ಲಿ ವಿಚಿತ್ರ ಏನಪ್ಪಾ ಅಂದ್ರೆ, ಭಕ್ತಾದಿಗಳು ತಮ್ಮ ಇಷ್ಟಾರ್ಥಗಳು ಈಡೇರಲು ಹರಕೆ ಹೊತ್ತು ಕುಡಗೋಲನ್ನು ಅರ್ಪಿಸುತ್ತಾರೆ!
ದಟ್ಟ ಕಾಡಿನ ನಡುವೆ ಇರುವ ಈ ದೇವಾಲಯದ ಬಗ್ಗೆ ಸ್ಥಳೀಯರಿಗೆ ಅಪಾರ ಶ್ರದ್ಧೆ ಮತ್ತು ಭಕ್ತಿ ಇದೆ. ಭಕ್ತಾದಿಗಳು ಏನೇ ಕೋರಿದರೂ ಈ ದೇವರು ಅದನ್ನು ಈಡೇರಿಸುತ್ತಾನೆ ಎಂಬುವುದು ಇಲ್ಲಿರುವ ಸ್ಥಳೀಯರ ನಂಬಿಕೆ.
ಈ ದೇವಾಲಯಕ್ಕೆ ಬರುವ ಹೆಚ್ಚಿನ ಭಕ್ತಾದಿಗಳು ತಮ್ಮ ದನ ಕರುಗಳು, ಹಾಗೂ ವ್ಯವಸಾಯದ ಭೂಮಿಯನ್ನು ರಕ್ಷಿಸುವಂತೆ ದೇವಾಲಯದಲ್ಲಿ ಪ್ರಾರ್ಥಿಸಿ ಕುಡಗೋಲು ಅರ್ಪಿಸುವುದು ಇಲ್ಲಿ ಸಾಮಾನ್ಯದ ಸಂಗತಿಯಾಗಿದೆ.