ಅದು ಇಟಲಿಯ ಒಂದು ಪ್ರಾಂತ್ಯ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಕಡಿಮೆಯಾಗುತ್ತಲೇ ಇತ್ತು. ಸರ್ಕಾರಕ್ಕೂ ಇದನ್ನು ನೋಡಿ ತಲೆ ಕೆಟ್ಟು ಹೋಗಿತ್ತು. ಹಾಗಾಗಿ ಒಂದು ಭರ್ಜರಿ ಆಫರ್ ನೀಡಿದೆ.
ಈ ಪ್ರದೇಶಕ್ಕೆ ಯಾರೇ ಹೋಗಿ ನೆಲೆಸಿದರೂ ಅವರಿಗೆ 22000 ಪೌಂಡ್ ಕೊಡಲಾಗುತ್ತದೆ ಎಂದು ಘೋಷಿಸಿದೆ. ಆದರೆ ಷರತ್ತುಗಳು ಅನ್ವಯ.
ಇದು ಇಟಲಿಯ ಮೊಲೀಸ್ ಪ್ರಾಂತ್ಯ. ಸದ್ಯ ಈ ಪ್ರದೇಶದಲ್ಲಿ 2000ಕ್ಕಿಂತ ಕಡಿಮೆ ಮಂದಿ ವಾಸವಾಗಿದ್ದಾರೆ. ಕಳೆದ 5 ವರ್ಷದಲ್ಲಿ ಸುಮಾರು 9000 ದಷ್ಟು ಮಂದಿ ಈ ಪ್ರಾಂತ್ಯವನ್ನು ತೊರೆದಿದ್ದಾರೆ.
ಹಾಗಂತ ಇಲ್ಲಿ ಬಂದವರಿಗೆ ಪುಕ್ಕಟೆ ತಿಂಗಳಿಗೆ ಈ ಹಣವನ್ನು ಕೊಟ್ಟು ಕೂರಿಸುವುದಿಲ್ಲ. ಇದಕ್ಕೆ ಷರತ್ತುಗಳು ಅನ್ವಯಿಸುತ್ತವೆ. ಇಲ್ಲಿ ಬರುವವರು ಸ್ಟೇಷನರಿ ಅಂಗಡಿ, ರೆಸ್ಟೋರೆಂಟ್ ಇಲ್ಲವೇ ಇನ್ಯಾವುದೋ ತರಹದ ಉದ್ಯೋಗ ಅಥವಾ ವ್ಯಾಪಾರವನ್ನು ಇಲ್ಲಿ ಪ್ರಾರಂಭಿಸಬೇಕು. ಅಂದರೆ ವ್ಯಾಪಾರಕ್ಕೆ 22000 ಪೌಂಡ್ ಲಭ್ಯವಾಗುತ್ತದೆ.
ಇದು ಮೂರು ವರ್ಷಗಳ ಕಾಲ ನಿರಂತರವಾಗಿ ಲಭಿಸುತ್ತದೆ ಎಂದು ಅಲ್ಲಿನ ಸ್ಥಳೀಯ ಅಧ್ಯಕ್ಷರಾದ ಡೊನಾಟ ಟೋಮ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಒಂದೇ ಒಂದು ಮಗು ಇಲ್ಲಿ ಹುಟ್ಟಿರುವ ದಾಖಲೆ ಇಲ್ಲ ಎಂಬುದು ಸರ್ಕಾರವನ್ನು ಆತಂಕಕ್ಕೆ ದೂಡಿದೆ.